
ನಟಿ ಸಮಂತಾ ಅವರು (Samantha) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ವಿಚ್ಛೇದನದ ಬಳಿಕ ಅವರು ಸಂಪೂರ್ಣ ಸಮಯವನ್ನು ಗೆಳೆಯರು ಹಾಗೂ ಪ್ರಾಣಿಗಳ ಜತೆ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸಮಂತಾ ಅವರು ಇನ್ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಶ್ವಾನದ ಫೋಟೋಗಳನ್ನು ಹಾಕುವುದು ಹೆಚ್ಚಿದೆ. ಇದೇ ವಿಚಾರಕ್ಕೆ ಸಮಂತಾ ಅವರನ್ನು ಟೀಕೆ ಮಾಡಲಾಗಿದೆ. ನಟಿ ಈ ವಿಚಾರಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.
ಸಮಂತಾ ಅವರು ಕಳೆದ ವರ್ಷ ನಾಗ ಚೈತನ್ಯ ಜತೆಗೆ ವಿಚ್ಛೇದನ ಪಡೆದರು. ಅಕ್ಟೋಬರ್ ತಿಂಗಳಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು. ಪ್ರೀತಿಸಿ ಮದುವೆ ಆದ ಇವರು ಬೇರೆ ಆಗುತ್ತಿರುವ ವಿಚಾರ ಅನೇಕರಿಗೆ ನಿಜಕ್ಕೂ ಶಾಕ್ ನೀಡಿತ್ತು. ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ತಮ್ಮದೇ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಅನೇಕರು ಸಮಂತಾ ಬಗ್ಗೆ ಟೀಕೆಯ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಅವರು ಕೂಲ್ ಆಗಿಯೇ ಉತ್ತರ ನೀಡುತ್ತಿದ್ದಾರೆ.
ಸಮಂತಾ ಅವರು ಶ್ವಾನದ ಜತೆಗೆ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಅಭಿಮಾನಿಯೋರ್ವ ವ್ಯಂಗ್ಯವಾಡಿದ್ದ. ‘ನಾಯಿ ಮತ್ತು ಬೆಕ್ಕುಗಳ ಜತೆ ಸಮಂತಾ ಒಂಟಿಯಾಗಿ ಸಾಯುತ್ತಾಳೆ’ ಎಂದು ಬರೆದುಕೊಂಡಿದ್ದ. ಇದಕ್ಕೆ ಸಮಂತಾ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ‘ನಾನು ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ’ ಎಂದಷ್ಟೇ ಹೇಳಿದ್ದಾರೆ. ಸಮಂತಾ ಉತ್ತರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಸಮಂತಾ ಇತ್ತೀಚೆಗೆ ‘ಖುಷಿ’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೊತೆಯಾಗಿ ಅವರು ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ಕಾರು ನೀರಿಗೆ ಬಿದ್ದಿದೆ, ಸಮಂತಾ ಹಾಗೂ ವಿಜಯ್ಗೆ ಗಾಯಗಳಾಗಿವೆ ಎಂದು ವರದಿ ಆಗಿತ್ತು. ಆದರೆ, ಈ ವರದಿ ಸುಳ್ಳು ಎಂಬುದು ನಂತರ ತಿಳಿದು ಬಂದಿತ್ತು. ಸದ್ಯ, ‘ಖುಷಿ’ ಸಿನಿಮಾದ ಒಂದು ಹಂತದ ಶೂಟಿಂಗ್ ಮಾತ್ರ ಮುಗಿದಿದೆ. ಇದಲ್ಲದೆ, ಹಲವು ಸಿನಿಮಾ ಕೆಲಸಗಳಲ್ಲಿ ಸಮಂತಾ ಬ್ಯುಸಿ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.