
ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಇತ್ತೀಚೆಗಷ್ಟೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ತೆರೆಗೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಇದೊಂದು ಆಕ್ಷನ್ ಉಳ್ಳ ಫ್ಯಾಮಿಲಿ ಡ್ರಾಮಾ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಮಂತಾ, ಈ ಸಿನಿಮಾನಲ್ಲಿ ಸಖತ್ ಆಗಿ ಆಕ್ಷನ್ ಮಾಡಿದ್ದಾರೆ. ಸಮಂತಾ ಅಭಿಮಾನಿಗಳ ಜೊತೆಗೆ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿದ್ದಾರೆ. ಈ ಖುಷಿಯ ಸುದ್ದಿಯ ನಡುವೆಯೇ ಸಮಂತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
‘ಮಾ ಇಂಟಿ ಬಂಗಾರಂ’ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ನಟಿ ಸಮಂತಾ, ಪತಿ ಹಾಗೂ ಚಿತ್ರತಂಡದ ಜೊತೆಗೆ ಆಚರಿಸಿಕೊಂಡರು. ಸಂಭ್ರಾಮಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಅದರ ಬೆನ್ನಲ್ಲೆ ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭವಾಗಿದೆ. ಸಂಭ್ರಮಾಚರಣೆಯ ಫೋಟೊ, ವಿಡಿಯೋಗಳಲ್ಲಿ ಸಮಂತಾರ ಬೇಬಿ ಬಂಪ್ ಗಮನಿಸಿರುವ ನೆಟ್ಟಿಗರು, ಸಮಂತಾರ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇದೀಗ ವೈರಲ್ ಆಗಿರುವ ಚಿತ್ರ, ವಿಡಿಯೋಗಳಲ್ಲಿ ಸಮಂತಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿದ್ದು, ಅವರ ‘ಬೇಬಿ ಬಂಪ್’ ಕಾಣಿಸುತ್ತಿದೆ. ಅದು ಮಾತ್ರವೇ ಅಲ್ಲದೆ, ಸಮಂತಾರ ಆಪ್ತರು ಕೆಲವರು ಸಹ ಸಮಂತಾ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಮಾಧ್ಯಮಗಳಿಗೆ ಖಚಿತ ಪಡಿಸಿರುವುದಾಗಿಯೂ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ಸಮಂತಾ ಋತ್ ಪ್ರಭುವನ್ನು ಕೊಂಡಾಡಿದ ಬಾಲಿವುಡ್ ಸ್ಟಾರ್ ನಿರ್ದೇಶಕ
ಸಮಂತಾ ಹಾಗೂ ನಿರ್ದೇಶಕ ರಾಜ್ ನಿದಿಮೋರು ಕೆಲ ವರ್ಷಗಳಿಂದ ಡೇಟಿಂಗ್ನಲ್ಲಿದ್ದರು. ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇವರಿಬ್ಬರೂ ಸರಳವಾಗಿ ಇಶಾ ಸೆಂಟರ್ನಲ್ಲಿ ವಿವಾಹವಾದರು. ಇದೀಗ ಈ ಇಬ್ಬರೂ ಪೋಷಕರಾಗುತ್ತಿದ್ದಾರೆ. ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ಈಗಾಗಲೇ ನಾಗ ಚೈತನ್ಯ ಜೊತೆ ವಿವಾಹವಾಗಿ ಬಳಿಕ ವಿಚ್ಛೇದನ ಪಡೆದುಕೊಂಡರು. ಅವರಿಗೆ ಮಕ್ಕಳಿರಲಿಲ್ಲ. ರಾಜ್ ನಿಧಿಮೋರು ಸಹ ಮದುವೆಯಾಗಿ ಬಹಳ ವರ್ಷಗಳೇ ಆಗಿದ್ದವು. ಇತ್ತೀಚೆಗಷ್ಟೆ ಅವರು ಪತ್ನಿಯಿಂದ ವಿಚ್ಛೇದನ ಪಡೆದುಕೊಂಡರು. ಆದರೆ ಅವರಿಗೂ ಸಹ ಮೊದಲ ಮದುವೆಯಿಂದ ಮಕ್ಕಳಿಲ್ಲ.
ಸಮಂತಾ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿಯಂತೆ. ನಾಗ ಚೈತನ್ಯ ಜೊತೆಗಿದ್ದಾಗಲೇ ಸಮಂತಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಅದು ಸುಳ್ಳಾಯ್ತು. ಇದೀಗ ರಾಜ್ ಜೊತೆಗೆ ಇರುವ ಸಮಂತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ