Samantha: ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ರಿಸ್ಕ್​ ತೆಗೆದುಕೊಳ್ತಾರಾ ಸಮಂತಾ ರುತ್​ ಪ್ರಭು?

Samantha Ruth Prabhu | Kushi Movie: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಖುಷಿ’ ಸಿನಿಮಾದ ಕೆಲಸಗಳು ಇಷ್ಟು ಹೊತ್ತಿಗೆ ಮುಗಿದಿರಬೇಕಿತ್ತು. ಆದರೆ ಸಮಂತಾಗೆ ಆರೋಗ್ಯ ಕೈ ಕೊಟ್ಟಿದ್ದರಿಂದ ಶೂಟಿಂಗ್​ ನಿಂತುಹೋಗಿತ್ತು.

Samantha: ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ರಿಸ್ಕ್​ ತೆಗೆದುಕೊಳ್ತಾರಾ ಸಮಂತಾ ರುತ್​ ಪ್ರಭು?
ಸಮಂತಾ ರುತ್ ಪ್ರಭು
Edited By:

Updated on: Feb 25, 2023 | 8:00 AM

ಜನಪ್ರಿಯ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳಿವೆ. ಆದರೆ ಅವುಗಳನ್ನೆಲ್ಲ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಅವರಿಗೆ ಅನಾರೋಗ್ಯ ಉಂಟಾಗಿತ್ತು. Myositis ಎಂಬ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಈಗ ಕೊಂಚ ಸುಧಾರಿಸಿಕೊಂಡಿದ್ದಾರೆ. ಮತ್ತೆ ಮೊದಲಿನಂತೆ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ. ವರ್ಕೌಟ್​ ಸಂದರ್ಭದ ವಿಡಿಯೋಗಳು ವೈರಲ್​ ಆಗುತ್ತಿವೆ. ಅದರ ನಡುವೆ ಅವರ ‘ಖುಷಿ’ (Kushi Movie) ಚಿತ್ರದ ಬಗ್ಗೆ ಒಂದು ಅಪ್​ಡೇಟ್​ ಕೇಳಿಬಂದಿದೆ. ಸಮಂತಾ ಅವರ ಅನಾರೋಗ್ಯದ ಕಾರಣದಿಂದ ನಿಂತು ಹೋಗಿದ್ದ ಈ ಚಿತ್ರದ ಶೂಟಿಂಗ್​ ಈಗ ಪುನಾರಂಭ ಆಗಲಿದೆ. ಸಿನಿಮಾಗಾಗಿ ಮತ್ತೆ ರಿಸ್ಕ್​ ತೆಗೆದುಕೊಳ್ಳಲು ಸಮಂತಾ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಹಾಡಿನ ಚಿತ್ರೀಕರಣಕ್ಕಾಗಿ ವಿಜಯ್​ ದೇವರಕೊಂಡ (Vijay Devarakonda) ಜೊತೆ ಅವರು ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಖುಷಿ’ ಸಿನಿಮಾದ ಕೆಲಸಗಳು ಇಷ್ಟು ಹೊತ್ತಿಗೆ ಮುಗಿದಿರಬೇಕಿತ್ತು. ಆದರೆ ಸಮಂತಾಗೆ ಆರೋಗ್ಯ ಕೈ ಕೊಟ್ಟಿದ್ದರಿಂದ ಶೂಟಿಂಗ್​ ನಿಂತುಹೋಗಿತ್ತು. ಈಗ ಕೊಂಚ ಸುಧಾರಿಸಿಕೊಂಡಿರುವ ಅವರು ಮತ್ತೆ ಚಿತ್ರತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಬಾಕಿ ಉಳಿದಿರುವ ಹಾಡಿನ ಶೂಟಿಂಗ್​ ಸಲುವಾಗಿ ನಾರ್ವೇಗೆ ತೆರಳಲು ಪ್ಲ್ಯಾನ್​ ಸಿದ್ಧವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ‘ಖುಷಿ’ ತಂಡದವರು ಶೀಘ್ರದಲ್ಲೇ ಅಧಿಕೃತ ಸುದ್ದಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

Samantha: ಸಮಂತಾ ಆರೋಗ್ಯ ಇಷ್ಟೊಂದು ಸುಧಾರಿಸಿತಾ? ನಟಿಯ ವರ್ಕೌಟ್​ ವಿಡಿಯೋ ನೋಡಿದವರಿಗೆ ಅಚ್ಚರಿ

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ವಿದೇಶದ ವಾತಾವರಣದಲ್ಲಿ ಶೂಟಿಂಗ್​ ಮಾಡುವುದು ಕೆಲವೊಮ್ಮೆ ಕಷ್ಟ ಆಗುತ್ತದೆ. ಸಮಂತಾ ಅವರು ಇನ್ನೂ ಒಂದಷ್ಟು ದಿನಗಳ ಕಾಲ ಇಂಥ ರಿಸ್ಕ್​ ತೆಗೆದುಕೊಳ್ಳದಿದ್ದರೆ ಒಳಿತು ಎಂಬ ಅಭಿಪ್ರಾಯ ಅವರ ಅಭಿಮಾನಿಗಳಲ್ಲಿದೆ. ಸಮಂತಾ ಸರಿಯಾದ ಸಮಯಕ್ಕೆ ಶೂಟಿಂಗ್​ಗೆ ಬಾರದ ಕಾರಣ ವಿಜಯ್​ ದೇವರಕೊಂಡ ಅವರ ಡೇಟ್ಸ್​ ಕೂಡ ವ್ಯತ್ಯಾಸ ಆದವು. ಈ ಚಿತ್ರದ ಶೂಟಿಂಗ್​ ಮುಗಿಯಲಿ ಎಂದು ಅವರು ಕಾಯುತ್ತಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಕೆಲಸಗಳಿಗೂ ಚಾಲನೆ ನೀಡಿದ್ದಾರೆ.

Samantha: ಮುಂಬೈನಲ್ಲಿ 3 ಬೆಡ್​ ರೂಂ ಮನೆ ಖರೀದಿಸಿದ ನಟಿ ಸಮಂತಾ; ಇದರ ಬೆಲೆ ಎಷ್ಟು?

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್​ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಏಪ್ರಿಲ್​ 14ರಂದು ‘ಶಾಕುಂತಲಂ’ ತೆರೆಕಾಣಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಮಂತಾ ತೊಡಗಿಕೊಳ್ಳಲಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಇದರಲ್ಲಿ ನಟಿಸಿರುವುದು ವಿಶೇಷ. ಗುಣಶೇಖರ್​ ಅವರು ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us