ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?

Samantha Ruth Prabhu: ಸಮಂತಾ ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಏರಲಿದ್ದಾರೆ ಎಂದೇ ಸಿನಿಮಾ ಪ್ರೀಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಲು ಕಾರಣವೇನು?

ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?
Samantha Raj Nidhimoru

Updated on: Apr 02, 2026 | 3:08 PM

ಸಮಂತಾ (Samantha) ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಏರಲಿದ್ದಾರೆ ಎಂದೇ ಸಿನಿಮಾ ಪ್ರೀಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಲು ಕಾರಣವೇನು?

2019ರ ವರೆಗೆ ಸಮಂತಾ ಬಹಳ ಎಂದರೆ ಬಹಳ ಬ್ಯುಸಿ ನಟಿ ಆಗಿದ್ದರು. ತಮಿಳು, ತೆಲುಗಿನ ಸ್ಟಾರ್ ನಟರುಗಳಿಗೆ ಸಹ ಸಮಂತಾ ನಾಯಕಿಯಾಗಿ ಬೇಕಾಗಿತ್ತು. ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಏಕಾಂಗಿಯಾಗಿ ಸಿನಿಮಾಗಳನ್ನು ಗೆಲ್ಲಿಸಿದ್ದರು. ಆದರೆ ಕೋವಿಡ್ ಬಳಿಕ ಎಲ್ಲವೂ ಉಲ್ಟಾ ಆಯ್ತು. ಕೋವಿಡ್ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ಜೊತೆಗೆ ವಿಚ್ಛೇದನವಾಯ್ತು. ಆರಂಭದಲ್ಲಿ ನೆಟ್ಟಿಗರು ಸಮಂತಾಗೆ ವಿರುದ್ಧವಾಗಿದ್ದರಾದರೂ, ಬಳಿಕ ಸಮಂತಾ ಪರ ಅಭಿಪ್ರಾಯ ಸೃಷ್ಟಿಯಾಯ್ತು.

ಆದರೆ ಸಮಂತಾಗೆ ಅನಾರೋಗ್ಯ ಕಾಡಲು ಶುರುವಾದ ಬಳಿಕ ಸಮಂತಾಗೆ ನಿಧಾನಕ್ಕೆ ಅವಕಾಶಗಳು ಕಡಿಮೆ ಆಗುತ್ತಾ ಬಂದವು. ಅನಾರೋಗ್ಯದಿಂದಾಗಿ ಸಮಂತಾ ಒಪ್ಪಿಕೊಂಡಿದ್ದ ಸಿನಿಮಾ ಮತ್ತು ವೆಬ್ ಸರಣಿಗಳನ್ನು ಮುಗಿಸಲು ಬಹಳ ಸಮಯ ತೆಗೆದುಕೊಂಡರು. ಅನಾರೋಗ್ಯದಿಂದ ರಿಕವರಿ ಹೊಂದಿದ ಬಳಿಕ ಸಹ ಸಮಂತಾಗೆ ಅವಕಾಶಗಳು ಸಿಗುವುದು ಕಡಿಮೆ ಆದವು. ಇದಕ್ಕೆ ಸಮಂತಾರ ಅತಿಯಾದ ‘ಸ್ವಕಾಳಜಿ’ ಇನ್ನಿತರೆಗಳೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ಶಿವಮೊಗ್ಗ ಸಮೀಪದ ಹಳ್ಳಿಯೊಂದರಲ್ಲಿ ನಟಿ ಸಮಂತಾ ಶೂಟಿಂಗ್: ವಿಡಿಯೋ

ಅನಾರೋಗ್ಯದಿಂದ ಮರಳಿದ ಬಳಿಕ ಸಮಂತಾ ಕೆಲಸದ ವಿಷಯದಲ್ಲಿ ಕಟ್ಟುನಿಯಮಗಳನ್ನು ಹೇರಲು ಆರಂಭಿಸಿದರಂತೆ. ಅಲ್ಲದೆ ಸೆಟ್​​ನಲ್ಲಿ ಜಿಮ್, ಡಯಟೀಷಿಯನ್, ಪ್ರತ್ಯೇಕ ಫ್ಯಾಷನ್ ಡಿಸೈನರ್​​ ಇನ್ನಿತರೆಗಳಿಗೆ ಬೇಡಿಕೆ ಹಾಗೂ ಚೀತ್ರೀಕರಣ ಸ್ಥಳ ಮತ್ತು ಸಮಯದ ಬಗ್ಗೆ ನಿಯಮಗಳನ್ನು ಹಾಕಲು ಶುರು ಮಾಡಿದರಂತೆ. ಇದೇ ಕಾರಣಕ್ಕೆ ಹಲವು ನಿರ್ದೇಶಕರು ಸಮಂತಾ ಜೊತೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಪುಕಾರು ತೆಲುಗು ಚಿತ್ರರಂಗದಲ್ಲಿ ಇದೆ.

2024 ರಲ್ಲಿ ಸಮಂತಾರ ಯಾವ ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಕಳೆದ ವರ್ಷ ಅಂದರೆ 2025ರಲ್ಲಿ ಸಮಂತಾ ‘ಶುಭಂ’ ಹೆಸರಿನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು ಅಲ್ಲದೆ, ಈ ಸಿನಿಮಾಕ್ಕೆ ಸಮಂತಾ ಅವರೇ ಬಂಡವಾಳ ಹೂಡಿದ್ದರು. ಪ್ರಸ್ತುತ ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರ ಹಾಲಿ ಪತಿ ರಾಜ್ ನಿಧಿಮೋರು ನಿರ್ಮಾಪಕ. ಇದಾದ ಬಳಿಕ ಒಂದು ಹಿಂದಿ ವೆಬ್ ಸರಣಿಯಲ್ಲಿ ಸಮಂತಾ ನಟಿಸಲಿದ್ದು, ಅದಕ್ಕೂ ಸಹ ರಾಜ್ ನಿಧಿಮೋರು ಅವರೇ ನಿರ್ಮಾಪಕ. ಪತಿಯ ಸಿನಿಮಾ ಮತ್ತು ವೆಬ್ ಸರಣಿಯ ಹೊರತಾಗಿ ಸಮಂತಾ ಕೈಯಲ್ಲಿ ಯಾವುದೇ ಸಿನಿಮಾ ಇದೀಗ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us