ಮಂಗಳೂರು: ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ, ನಿರೂಪಕಿ ಅನುಶ್ರೀ ಅವರಿಗೆ ಸಹ ಮಂಗಳೂರು ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹೀಗಾಗಿ ಅನುಶ್ರೀ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ನಡುವೆ ಬಂಧಿತ ಆರೋಪಿ ತರುಣ್ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ.
ಹೌದು ವಿಚಾರಣೆ ವೇಳೆ ಬಂಧಿತ ಆರೋಪಿ ತರುಣ್ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ. ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು ಎಂದಿದ್ದಾನೆ. ಮೊದ ಮೊದಲು ಅನುಶ್ರೀ ಕುಡಿತಾ ಇದ್ಲು, ಡ್ರಗ್ ತಗೋತಾ ಇರಲಿಲ್ಲ ಅಂತಾ ಹೇಳ್ತಾಯಿದ್ದ ತರುಣ್. ಪೊಲೀಸರ ತನಿಖೆ ಚುರುಕುಗೊಂಡ ಬಳಿಕ ಒದೋಂದೆ ಮಾಹಿತಿಯನ್ನು ಬಾಯ್ಬಿಡುತ್ತಿದ್ದಾನೆ.
ನಾವು ಡ್ರಗ್ ಪಾರ್ಟಿ ಮಾಡ್ತಾ ಇದ್ವಿ. ಅದ್ರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಾ ಇದ್ಲು ಅಂತಾ ಆರೋಪಿ ತರುಣ್ ರಾಜ್ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿದ್ದಾನೆ. ಮಂಗಳೂರು ಸಿಸಿಬಿ ಮತ್ತು ನಾರ್ಕೋಟಿಕ್ ನಿಂದ ಜಂಟಿ ತನಿಖೆ ನಡೆಯುತ್ತಿದೆ.
Published On - 8:25 am, Fri, 25 September 20