ಬೆಂಗಳೂರು CCB ಅಧಿಕಾರಿಗಳೂ ಌಂಕರ್ ಅನುಶ್ರೀ ವಿಚಾರಣೆ ನಡೆಸ್ತಾರಾ?
[lazy-load-videos-and-sticky-control id=”oqzMA4S7xCA”] ಬೆಂಗಳೂರು: ಡ್ರಗ್ಸ್ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ. NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ. ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು […]
[lazy-load-videos-and-sticky-control id=”oqzMA4S7xCA”]
ಬೆಂಗಳೂರು: ಡ್ರಗ್ಸ್ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ. NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ಮಂಗಳೂರಿನಲ್ಲಿಯೂ ಮಾದಕ ಲೋಕದ ತನಿಖೆ ನಡೆದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಂದ ಮಾತಿನ ಮಲ್ಲಿ ಅನುಶ್ರೀ ಅವರನ್ನು ಮನೆಗೇ ಬಂದು ಬುಲಾವ್ ನೀಡಿದ್ದಾರೆ. ಅಲ್ಲಿ ಅನುಶ್ರೀ ಈಗ ತಾನೇ ವಿಚಾರಣಾಧಿಕಾರಿ ಎದುರು ಕುಳಿತಿದ್ದಾರೆ.
ಸರಿಯಾಗಿ ಇದೇ ವೇಳೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಏನು ನಡೆದಿದೆ? ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ವಿಷಯದಲ್ಲಿ ಅನುಶ್ರೀಯನ್ನು ಬೆಂಗಳೂರು ಸಿಸಿಬಿ ಅವರೂ ವಿಚಾರಣೆ ನಡೆಸುತ್ತಾರಾ? ಎಂದು ನೋಡಿದಾಗ ಮಂಗಳೂರಿನಲ್ಲಿ ಬಂಧಿತ ಬಾಲಿವುಡ್ ನಟ ಕಿಶೋರ್ ಹಾಗು ಡ್ಯಾನ್ಸರ್ ತರುಣ್ಗೆ ಮಂಗಳೂರು ಮುಂಬೈ ಮತ್ತು ದುಬೈನ ನೆಟ್ವರ್ಕ್ ಇದೆ. ಆದರೆ, ಇದುವರೆಗೂ ರಾಗಿಣಿ ಮತ್ತು ಈ ನೆಟ್ವರ್ಕ್ಗೂ ಯಾವುದೇ ಸಂಬಂಧ ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಅನುಶ್ರೀ ಹೆಸರು ಬೆಂಗಳೂರು ಸಿಸಿಬಿ ತನಿಖೆಯಲ್ಲಿ ಬಂದಿಲ್ಲ. ಅನುಶ್ರೀ ಬೆಂಗಳೂರಿನಲ್ಲಿ ನಡೆದ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾಳೆ. ಆದ್ರೆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಇಲ್ಲಿನ ಸಿಸಿಬಿಗೆ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 12:25 pm, Fri, 25 September 20