ಗಾಯನ-ರಿಯಾಲಿಟಿ ಶೋ-ನಟನೆ-ಸಂಗೀತ ನಿರ್ದೇಶನ.. ಗಾನ ಗಾರುಡಿಗ SPB ಸದಾ ಬ್ಯುಸಿ!

ಚೆನ್ನೈ: ಇಹಲೋಕದ ನಂಟು ತ್ಯಜಿಸಿರುವ ಗಾನ ಗಾರುಡಿಗ SP ಬಾಲಸುಬ್ರಹ್ಮಣ್ಯಂ ತಮ್ಮ ಗಾಯನದ ಮೂಲಕ ಹಲವಾರು ದಾಖಲೆಗಳನ್ನ ಸೃಷ್ಟಿಸಿರುವುದಲ್ಲದೆ ಹಲವಾರು ದಾಖಲೆಗಳನ್ನು ಸಹ ಮುರಿದಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ‘ಸ್ವರ’ವಾಗಿದ್ದ SPB ತಮಿಳು, ತೆಲುಗಿನಲ್ಲಿ ಒಂದೇ ದಿನ 19 ಹಾಡುಗಳಿಗೆ ಧ್ವನಿಯಾಗಿದ್ದರು. ಜೊತೆಗೆ, ಕನ್ನಡದಲ್ಲಿ ಒಂದೇ ದಿನ 17 ಗೀತೆಗಳಿಗೆ ಧ್ವನಿ ಮುದ್ರಿಸಿದ್ದರು. ಅಷ್ಟೇ ಅಲ್ಲದೆ, ಹಿಂದಿಯಲ್ಲಿ ಒಂದೇ ದಿನ 16 ಚಿತ್ರಗಳಿಗೆ ಗಾಯನ ಸಹ ಮಾಡಿದ್ದಾರೆ. ಇದಲ್ಲದೆ, ಹಲವಾರು ರಿಯಾಲಿಟಿ ಶೋ ಮತ್ತು […]

ಗಾಯನ-ರಿಯಾಲಿಟಿ ಶೋ-ನಟನೆ-ಸಂಗೀತ ನಿರ್ದೇಶನ.. ಗಾನ ಗಾರುಡಿಗ SPB ಸದಾ ಬ್ಯುಸಿ!
ಎಸ್​ಪಿ ಬಾಲಸುಬ್ರಹ್ಮಣ್ಯಮ್
Follow us
KUSHAL V
|

Updated on:Sep 25, 2020 | 6:36 PM

ಚೆನ್ನೈ: ಇಹಲೋಕದ ನಂಟು ತ್ಯಜಿಸಿರುವ ಗಾನ ಗಾರುಡಿಗ SP ಬಾಲಸುಬ್ರಹ್ಮಣ್ಯಂ ತಮ್ಮ ಗಾಯನದ ಮೂಲಕ ಹಲವಾರು ದಾಖಲೆಗಳನ್ನ ಸೃಷ್ಟಿಸಿರುವುದಲ್ಲದೆ ಹಲವಾರು ದಾಖಲೆಗಳನ್ನು ಸಹ ಮುರಿದಿದ್ದಾರೆ.

ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ‘ಸ್ವರ’ವಾಗಿದ್ದ SPB ತಮಿಳು, ತೆಲುಗಿನಲ್ಲಿ ಒಂದೇ ದಿನ 19 ಹಾಡುಗಳಿಗೆ ಧ್ವನಿಯಾಗಿದ್ದರು. ಜೊತೆಗೆ, ಕನ್ನಡದಲ್ಲಿ ಒಂದೇ ದಿನ 17 ಗೀತೆಗಳಿಗೆ ಧ್ವನಿ ಮುದ್ರಿಸಿದ್ದರು. ಅಷ್ಟೇ ಅಲ್ಲದೆ, ಹಿಂದಿಯಲ್ಲಿ ಒಂದೇ ದಿನ 16 ಚಿತ್ರಗಳಿಗೆ ಗಾಯನ ಸಹ ಮಾಡಿದ್ದಾರೆ. ಇದಲ್ಲದೆ, ಹಲವಾರು ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿದ್ರು.

25 ಬಾರಿ ‘ನಂದಿ’ ಪ್ರಶಸ್ತಿಗೆ ಭಾಜನರು.. ಕೇವಲ ಗಾಯನಕ್ಕೆ ಸೀಮಿತವಾಗದೆ S​P ಬಾಲಸುಬ್ರಹ್ಮಣ್ಯಂ 68 ಚಿತ್ರಗಳಿಗೆ ಸಂಗೀತ ನಿರ್ದೇಶನ ಸಹ ಮಾಡಿದ್ದಾರೆ. ಜೊತೆಗೆ, ತಮ್ಮ ನಟನಾ ಪ್ರತಿಭೆಯನ್ನು ಹೊರಹೊಮ್ಮಿರುವ SPB 112 ಚಿತ್ರಗಳಲ್ಲಿ ಸಹ ಅಭಿನಯಿಸಿದ್ದಾರೆ.

ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ S​P ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಹಲವು ಗೌರವ ಡಾಕ್ಟರೇಟ್‌ ಸಹ ಪಡೆದಿದ್ದಾರೆ. ಇದಲ್ಲದೆ, 4 ಭಾಷೆಗಳಲ್ಲಿ 6 ರಾಷ್ಟ್ರಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಜೊತೆಗೆ, ಆಂಧ್ರ ಸರ್ಕಾರದಿಂದ 25 ಬಾರಿ ‘ನಂದಿ’ ಪ್ರಶಸ್ತಿಗೆ ಭಾಜನರಾಗಿದ್ದರು. ಇದನ್ನೂ ಓದಿ: ಅರ್ಧ ಶತಮಾನ ಕಾಲ ಸಂಗೀತ ಲೋಕದ ಅದ್ಭುತ, ಗಾನಗಂಧರ್ವ SP ಬಾಲಸುಬ್ರಮಣ್ಯಂ ಚಿರನಿದ್ರೆಗೆ ಇದನ್ನೂ ಓದಿ: ಘಂಟಸಾಲ ಬಳಿಕ ಆ ಸ್ಥಾನ ತುಂಬಿದ್ದು ಬಾಲಸುಬ್ರಹ್ಮಣ್ಯಂ ಅಂದಿದ್ದು ಯಾರು? ಇದನ್ನೂ ಓದಿ: SPB ಕೊನೆವರೆಗೂ ಹೋರಾಡಿ ನಮ್ಮನ್ನು ಅಗಲಿದ್ದಾರೆ: ನಟ ರಜನಿಕಾಂತ್ ವಿಷಾದ

Published On - 2:21 pm, Fri, 25 September 20