ಸಾಫ್ಟ್​ವೇರ್​ ಎಂಜಿನಿಯರ್​ to ಌಕ್ಟರ್​ to ಌಂಕರ್​: ಮಾದಕ ಜಾಲದ ಕೊಂಡಿ ಇಲ್ಲಿದೆ ನೋಡಿ

ಬೆಂಗಳೂರು: ಬಂಧಿತ ಬಾಲಿವುಡ್​ ನಟ ಕಿಶೋರ್​ಗೂ ಅನುಶ್ರೀಗೂ 5 ವರ್ಷಗಳಿಂದ ನಂಟಿದೆ ಎಂದು ತಿಳಿದುಬಂದಿದೆ. ಮುಂಬೈ ಸೇರಿ ವಿವಿಧ ಕಡೆ ಇಬ್ಬರು ಒಟ್ಟಿಗೆ ಓಡಾಡಿರುವ ಮಾಹಿತಿ ಸಹ ಸಿಕ್ಕಿದೆ. ಜೊತೆಗೆ, ಕಿಶೋರ್​ ಌಂಕರ್ ಅನುಶ್ರೀ ಜೊತೆ ಮಾತನಾಡಿರೋ ಕಾಲ್ ಲಿಸ್ಟ್ ಲಭ್ಯವಾಗಿದ್ದು ಆಕೆಗೆ ಕರೆ ಮಾಡಿದ್ದ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದಲ್ಲದೆ, ಅನುಶ್ರೀ ಜೊತೆ ಪಾರ್ಟಿ ಮಾಡಿರುವುದಾಗಿ ಮತ್ತೊಬ್ಬ ಬಂಧಿತ ಆರೋಪಿ ತರುಣ್ ಹೇಳಿದ್ದ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಲ್ಲಿ ಅರೆಸ್ಟ್ ಆಗಿರೋ ಪ್ರತೀಕ್ […]

ಸಾಫ್ಟ್​ವೇರ್​ ಎಂಜಿನಿಯರ್​ to ಌಕ್ಟರ್​ to ಌಂಕರ್​: ಮಾದಕ ಜಾಲದ ಕೊಂಡಿ ಇಲ್ಲಿದೆ ನೋಡಿ
KUSHAL V

| Edited By: sadhu srinath

Sep 24, 2020 | 4:41 PM

ಬೆಂಗಳೂರು: ಬಂಧಿತ ಬಾಲಿವುಡ್​ ನಟ ಕಿಶೋರ್​ಗೂ ಅನುಶ್ರೀಗೂ 5 ವರ್ಷಗಳಿಂದ ನಂಟಿದೆ ಎಂದು ತಿಳಿದುಬಂದಿದೆ. ಮುಂಬೈ ಸೇರಿ ವಿವಿಧ ಕಡೆ ಇಬ್ಬರು ಒಟ್ಟಿಗೆ ಓಡಾಡಿರುವ ಮಾಹಿತಿ ಸಹ ಸಿಕ್ಕಿದೆ. ಜೊತೆಗೆ, ಕಿಶೋರ್​ ಌಂಕರ್ ಅನುಶ್ರೀ ಜೊತೆ ಮಾತನಾಡಿರೋ ಕಾಲ್ ಲಿಸ್ಟ್ ಲಭ್ಯವಾಗಿದ್ದು ಆಕೆಗೆ ಕರೆ ಮಾಡಿದ್ದ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದಲ್ಲದೆ, ಅನುಶ್ರೀ ಜೊತೆ ಪಾರ್ಟಿ ಮಾಡಿರುವುದಾಗಿ ಮತ್ತೊಬ್ಬ ಬಂಧಿತ ಆರೋಪಿ ತರುಣ್ ಹೇಳಿದ್ದ ಎಂದು ತಿಳಿದುಬಂದಿದೆ.

ಸದ್ಯ ಬೆಂಗಳೂರಲ್ಲಿ ಅರೆಸ್ಟ್ ಆಗಿರೋ ಪ್ರತೀಕ್ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತು ತರುಣ್​ ಎಲ್ಲರೂ ಗೆಳೆಯರು. ಪ್ರತೀಕ್ ಶೆಟ್ಟಿಯನ್ನು ಬೆಂಗಳೂರಿನ ಪೊಲೀಸರು 15 ದಿನಗಳ ಹಿಂದೆ ಬಂಧಿಸಿದ್ದರು. ಪ್ರತೀಕ್‌ ಶೆಟ್ಟಿಗೆ ಸ್ಯಾಂಡಲ್‌ವುಡ್‌ನ ನಟ-ನಟಿಯರ ಡ್ರಗ್ಸ್‌ ಸಂಪರ್ಕವಿತ್ತು. ಸಂಜನಾ-ರಾಗಿಣಿಗೆ ಸಾಕಷ್ಟು ಸಂದರ್ಭದಲ್ಲಿ ಪ್ರತೀಕ್ ಶೆಟ್ಟಿಯಿಂದ ಡ್ರಗ್ಸ್‌ ಪಡೆದಿದ್ದರಂತೆ. ಇತ್ತ ಕಿಶೋರ್‌ ಮಂಗಳೂರಿನಲ್ಲಿ ಪಾರ್ಟಿ ಮಾಡಿ ಡ್ರಗ್ಸ್‌ ಸರಬರಾಜು ಮಾಡಿದ್ದ. ಹಾಗಾಗಿ, ಮಂಗಳೂರಿನ ಕಿಶೋರ್‌ ಶೆಟ್ಟಿ ಪ್ರಕರಣಕ್ಕೂ ಕೂಡ ಬೆಂಗಳೂರಿನ ನಂಟು ಇದೆ ಅನ್ನೋ ಗುಮಾನಿ ವ್ಯಕ್ತವಾಗಿದೆ.

ಪ್ರತೀಕ್ ಶೆಟ್ಟಿಯಿಂದ ಅನುಶ್ರೀವರೆಗೆ ತನಿಖೆ ಬಂದು ನಿಂತಿದ್ಹೇಗೆ? ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಪ್ರತೀಕ್​ ಶೆಟ್ಟಿ 2018 ರ ಬಾಣಸವಾಡಿ ಡ್ರಗ್ಸ್ ಕೇಸ್​​ನ ಆರೋಪಿ. ಸ್ಯಾಂಡಲ್​ವುಡ್ ಡ್ರಗ್ಸ್​​ ಕೇಸ್​ ತನಿಖೆಗಿಳಿದಾಗ ಆತ ಮತ್ತೆ ಅರೆಸ್ಟ್ ಆಗಿದ್ದ. ಪ್ರತೀಕ್​ ವಿಚಾರಣೆ ವೇಳೆ ಕಿಶೋರ್ ಮತ್ತು ತರುಣ್ ಹೆಸರನ್ನು ತನಿಖಾಧಿಕಾರಿಗಳಿಗೆ ಬಾಯ್ಬಿಟ್ಟಿದ್ದನಂತೆ.

ಈ ಬಗ್ಗೆ ಮಂಗಳೂರು ಸಿಸಿಬಿ ವಿಭಾಗಕ್ಕೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿಯನ್ನ ಬಂಧಿಸಿದ್ದರು. ಬಳಿಕ ಆರೋಪಿ ತರುಣ್​ಗೆ ಕೂಡ ಖೆಡ್ಡಾ ತೋಡಿದ್ದರು. ಇದೀಗ, ಬಾಲಿವುಡ್​ ನಟ ಕಿಶೋರ್ ಆ್ಯಂಕರ್ ಅನುಶ್ರೀ ಹೆಸರು ಬಾಯ್ಬಿಟ್ಟಿರುವ ಮಾಹಿತಿ ದೊರೆತಿದೆ. ಅದಲ್ಲದೆ, ಆ್ಯಂಕರ್ ಅನುಶ್ರೀ ಜೊತೆ ಪಾರ್ಟಿ ಮಾಡಿರೋದಾಗಿ ಸಹ ಒಪ್ಪಿಕೊಂಡಿದ್ದಾನಂತೆ. ಸದ್ಯ ಕಿಶೋರ್ ಹೇಳಿಕೆಯನ್ನ ಆಧರಿಸಿ ಅನುಶ್ರೀಗೆ ನೋಟಿಸ್ ಜಾರಿಯಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada