ಬ್ರಾಹ್ಮಣ್ಯ ಅನ್ನೋ ಭೇದ-ಭಾವದ ವಿರುದ್ಧ ನನ್ನ ಹೊರಾಟ: ನಟ ಚೇತನ್

ರಾಜೇಶ್ ದುಗ್ಗುಮನೆ
|

Updated on: Jun 16, 2021 | 5:13 PM

ಬ್ರಾಹ್ಮಣ್ಯ ಅನ್ನೊ ಭೇದ-ಭಾವದ ವಿರುದ್ಧ ನನ್ನ ಹೊರಟವೇ ಹೊರತು, ಯಾವ ಜಾತಿ ಅಥವಾ ಜನಾಂಗದ ವಿರುದ್ಧವಲ್ಲ. ನೋಟಿಸ್ ಹಿನ್ನೆಲೆ‌ಯಲ್ಲಿ ಇಂದು ಬಸವನಗುಡಿ ಠಾಣೆಗೆ ಬಂದಿದ್ದೆ ಎಂದಿದ್ದಾರೆ ಚೇತನ್.

ಬ್ರಾಹ್ಮಣ್ಯ ಅನ್ನೊ ಭೇದ-ಭಾವದ ವಿರುದ್ಧ ನನ್ನ ಹೊರಟವೇ ಹೊರತು, ಯಾವ ಜಾತಿ ಅಥವಾ ಜನಾಂಗದ ವಿರುದ್ಧವಲ್ಲ. ನೋಟಿಸ್ ಹಿನ್ನೆಲೆ‌ಯಲ್ಲಿ ಇಂದು ಬಸವನಗುಡಿ ಠಾಣೆಗೆ ಬಂದಿದ್ದೆ. ಕಾನೂನಿನ ಬಗ್ಗೆ ಗೌರವ ಇದೆ ಎಂದು ನಟ ಚೇತನ್​ ಹೇಳಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ ನಟ ಚೇತನ್​ ಅವರಿಗೆ ನೋಟಿಸ್​ ನೀಡಲಾಗಿತ್ತು. ಹೀಗಾಗಿ, ಇಂದು ಬೆಂಗಳೂರಿನ ಬಸವನಗುಡಿ ಪೊಲೀಸ್​ ಠಾಣೆಗೆ ವಿಚಾರಣೆಗೆ ಹಾಜರಾದರು.

‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ. ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ ಎಂದು ಅಂಬೇಡ್ಕರ್​ ಹೇಳಿದ್ದಾರೆ. ‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ಎಂಬುದಾಗಿ ಪೆರಿಯಾರ್ ಹೇಳಿದ್ದಾರೆ ಎಂದು ಚೇತನ್​ ಟ್ವೀಟ್ ಮಾಡಿದ್ದರು. ಈ ಟ್ವೀಟ್​ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.