- Kannada News Entertainment Sandalwood ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ಮದುವೆಗೆ ಬಂದು ಹರಸಿದ ಸೆಲೆಬ್ರಿಟಿಗಳು
ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ಮದುವೆಗೆ ಬಂದು ಹರಸಿದ ಸೆಲೆಬ್ರಿಟಿಗಳು
ಚೇತನ್ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸಾ. ಇವರು ಚೇತನ್ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Updated on: Jun 16, 2021 | 3:00 PM

ಲಾಕ್ಡೌನ್ನಲ್ಲಿ ಅನೇಕ ಸೆಲೆಬ್ರಿಟಿಗಳು ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಅವರು ಭಾನುವಾರ (ಜೂ.13) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಬೆಳಗ್ಗೆ ಮದುವೆ ನೆರವೇರಿದೆ.

ಕೆಲವೇ ಕೆಲವು ಮಂದಿ ಮಾತ್ರ ಈ ಶುಭ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ಶ್ರೀಮುರಳಿ, ಉಮಾಪತಿ ಶ್ರೀನಿವಾಸ್ ಗೌಡ, ನಿರ್ದೇಶಕ ಮಹೇಶ್ ಕುಮಾರ್ ಮುಂತಾದವರು ಮದುವೆಗೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದರು. ಲಾಕ್ಡೌನ್ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.

ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್ ಕುಮಾರ್ ಅವರನ್ನು ಕೈ ಹಿಡಿದಿರುವ ಹುಡುಗಿ ಯಾರು ಎಂಬ ಕೌತುಕ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಚೇತನ್ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸಾ. ಇವರು ಚೇತನ್ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾನಸಾ ಅವರು ಇಂಜಿನಿಯರಿಂಗ್ ಓದಿದ್ದಾರೆ. ಪ್ರಸ್ತುತ ಅವರು ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮದುವೆ ಫೋಟೋಗಳು ಕೂಡ ಲಭ್ಯವಾಗಿದ್ದು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚೇತನ್-ಮಾನಸಾ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಲಾಕ್ಡೌನ್ ಇರುವುದರಿಂದ ಮೈಸೂರಿನಲ್ಲಿ ಸರಳವಾಗಿ ವಿವಾಹ ಸಮಾರಂಭ ಮಾಡಲಾಗಿದೆ.

ಮಾಸ್ ಕಮರ್ಷಿಯಲ್ ಅಂಶಗಳನ್ನು ಹೊಂದಿರುವ ಫ್ಯಾಮಿಲಿ ಎಂಟರ್ಟೇನರ್ ಸಿನಿಮಾಗಳನ್ನು ಮಾಡುವ ಮೂಲಕ ಚೇತನ್ ಗುರುತಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಜೊತೆ ಬಹದ್ದೂರ್, ಭರ್ಜರಿ ಸಿನಿಮಾಗಳನ್ನು ಮಾಡಿ ಗೆದ್ದ ಚೇತನ್, ನಂತರ ಶ್ರೀಮುರಳಿ ಜೊತೆ ‘ಭರಾಟೆ’ ಚಿತ್ರ ಮಾಡಿದರು. ಸದ್ಯ ಪುನೀತ್ ರಾಜ್ಕುಮಾರ್ ನಾಯಕತ್ವದ ‘ಜೇಮ್ಸ್’ ಚಿತ್ರಕ್ಕೆ ನಿರ್ದೇಶನ ಮಾಡುವ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ. ಹಲವಾರು ಸಿನಿಮಾಗಳಿಗೆ ಹಾಡು ಬರೆದಿರುವ ಚೇತನ್ ಓರ್ವ ಯಶಸ್ವಿ ಗೀತರಚನಾಕಾರ ಕೂಡ ಹೌದು.

ಮದುವೆಯಲ್ಲಿ ಪಾಲ್ಗೊಂಡ ಸೆಲೆಬ್ರಿಟಿಗಳು









