ಸಾರಥಿಯ ಜಾಲಿ ರೈಡ್​: ದಾರಿ ಮಧ್ಯೆ ಸಿಕ್ಕ ಅಭಿಮಾನಿಗೆ ನಟನ ‘ದರ್ಶನ’..!

ಸಾರಥಿಯ ಜಾಲಿ ರೈಡ್​: ದಾರಿ ಮಧ್ಯೆ ಸಿಕ್ಕ ಅಭಿಮಾನಿಗೆ ನಟನ ‘ದರ್ಶನ’..!

ಕೊಡಗು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಮನೆಗೆ ಬರ್ತಾರೆ ಅಂದ್ರೆ ಎಷ್ಟು ಖುಷಿಯಾಗಿರ ಬೇಡ. ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ನೋಡ್ತಿದ್ದ ನಟ ಎದುರಿಗೆ ಬಂದ್ರೆ ಆನಂದಕ್ಕೆ ಪಾರವೇ ಇರೋದಿಲ್ಲ. ಅಂಥದ್ದೊಂದು ಅನುಭವ ದರ್ಶನ್ ಅಭಿಮಾನಿಯೊಬ್ಬರಿಗೆ ಆಗಿದೆ. ಬೈಕ್ ಏರಿ ಮಡಿಕೇರಿ ಕಡೆ ಜಾಲಿ ರೈಡ್​.. ನಟ ದರ್ಶನ್​ಗೆ ವಾಹನಗಳು ಅಂದ್ರೆ ತುಂಬಾ ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯವೇ. ಸ್ಟಾರ್ ನಟ ದರ್ಶನ್ ತನ್ನ ಗಜಪಡೆ ಕಟ್ಟಿಕೊಂಡು ಬೆಂಗಳೂರಿನಿಂದ ಬೈಕ್ ಏರಿ ಸ್ನೇಹಿತರ ಜೊತೆ ಮಂಜಿನ ನಗರಿ […]

pruthvi Shankar

| Edited By: sadhu srinath

Nov 20, 2020 | 11:17 AM

ಕೊಡಗು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಮನೆಗೆ ಬರ್ತಾರೆ ಅಂದ್ರೆ ಎಷ್ಟು ಖುಷಿಯಾಗಿರ ಬೇಡ. ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ನೋಡ್ತಿದ್ದ ನಟ ಎದುರಿಗೆ ಬಂದ್ರೆ ಆನಂದಕ್ಕೆ ಪಾರವೇ ಇರೋದಿಲ್ಲ. ಅಂಥದ್ದೊಂದು ಅನುಭವ ದರ್ಶನ್ ಅಭಿಮಾನಿಯೊಬ್ಬರಿಗೆ ಆಗಿದೆ.

ಬೈಕ್ ಏರಿ ಮಡಿಕೇರಿ ಕಡೆ ಜಾಲಿ ರೈಡ್​.. ನಟ ದರ್ಶನ್​ಗೆ ವಾಹನಗಳು ಅಂದ್ರೆ ತುಂಬಾ ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯವೇ. ಸ್ಟಾರ್ ನಟ ದರ್ಶನ್ ತನ್ನ ಗಜಪಡೆ ಕಟ್ಟಿಕೊಂಡು ಬೆಂಗಳೂರಿನಿಂದ ಬೈಕ್ ಏರಿ ಸ್ನೇಹಿತರ ಜೊತೆ ಮಂಜಿನ ನಗರಿ ಮಡಿಕೇರಿ ಕಡೆ ಜಾಲಿ ರೈಡ್​ಗೆ ಬಂದಿದ್ದಾರೆ. ನಟರಾದ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಸ್ನೇಹಿತರು ಚಾಲೆಂಜಿಂಗ್ ಸ್ಟಾರ್​ಗೆ ಸಾಥ್ ನೀಡಿದ್ದಾರೆ.

ಅಭಿಮಾನಿ ರಾಧಾ ಅನ್ನೋವ್ರು ದರ್ಶನ್​ಗೆ ಮನೆಗೆ ಅಹ್ವಾನ ನೀಡಿದ್ದಾರೆ. ಸ್ನೇಹಿತರೊಬ್ಬರ ತೋಟದಲ್ಲಿ ದರ್ಶನ್ ಕ್ರಿಕೆಟ್ ಆಟವಾಡಿ ಸಾಕಷ್ಟು ಎಂಜಾಯ್ ಕೂಡ ಮಾಡಿದ್ರು. ಇನ್ನ ದಾರಿ ಮಧ್ಯೆ ಮನೆಗೆ ಕರೆದ ಅಭಿಮಾನಿ ಮನೆಗೆ ತೆರಳಿದ ದರ್ಶನ್ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಬೆಂಗಳೂರಿನಿಂದ ಮಡಿಕೇರಿ ಕಡೆ ತೆರಳುವ ವೇಳೆ ಸೋಮವಾರಪೇಟೆ ತಾಲ್ಲೂಕಿನ ಬೈಚನಹಳ್ಳಿ ಬಳಿ ಮಡಿಕೇರಿಗೆ ತೆರಳೋ ಹೆದ್ದಾರಿ ಬಳಿ ದರ್ಶನ್ ರೆಸ್ಟ್ ಮಾಡೋಕೆ ಅಂತಾ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ನಟ ದರ್ಶನ್ ಮನೆ ಹತ್ರ ಬಂದಿದ್ದನ್ನ ನೋಡಿದ ಅಭಿಮಾನಿ ರಾಧಾ ಅನ್ನೋವ್ರು ದರ್ಶನ್ ಅವ್ರಿಗೆ ಮನೆಗೆ ಅಹ್ವಾನ ನೀಡಿದ್ದಾರೆ.

ಈ ವೇಳೆ ಅಭಿಮಾನಿ ಆಹ್ವಾನ ತಿರಸ್ಕಾರ ಮಾಡದ ದರ್ಶನ್, ರಾಧಾ ಅವ್ರ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿದ್ದ ವೃದ್ಧ ದಂಪತಿಯ ಆರೋಗ್ಯ ವಿಚಾರಿಸಿ ಅವ್ರ ಜೊತೆಗೆ ಪೋಟೋ ತೆಗೆಸಿಕೊಂಡು ಪುನಃ ತಮ್ಮ ಜಾಲಿ ರೈಡ್ ಮುಂದುವರೆಸಿದ್ದಾರೆ ದರ್ಶನ್. ಇನ್ನ ಒಮ್ಮೆ ಕರೆದ ಕೂಡಲೇ ಮನೆಗೆ ಬಂದ ಸ್ಟಾರ್ ನಟನ ಸರಳತೆಗೆ ಅಭಿಮಾನಿ ರಾಧಾ ಕೂಡ ನೆಚ್ಚಿನ ನಟನನ್ನ ನೋಡಿ ಫುಲ್ ಖುಷಿಯಾಗಿದ್ದಾರೆ.

Follow us on

Most Read Stories

Click on your DTH Provider to Add TV9 Kannada