ಬೆಂಗಳೂರು: ಕಳೆದ ವಾರವಷ್ಟೇ ಮಾಜಿ ಡಾನ್ ಮುತ್ತಪ್ಪ ರೈ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಭೂಗತ ಲೋಕದ ಕೊನೆಯ ಕೊಂಡಿಯೂ ಕಳಚಿದಂತಾಗಿದೆ. ಆದ್ರೆ ಇದೀಗ ಭೂಗತ ಲೋಕದ ಗತವೈಭವವನ್ನು ತೆರೆಯ ಮೇಲೆ ತರಲು ಸ್ಯಾಂಡಲ್ವುಡ್ನಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಕೊರೊನಾ ಹೆಮ್ಮಾರಿಯಿಂದಾಗಿ ದೇಶದಾದ್ಯಂತ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಈ ಮಧ್ಯೆ ಭೂಗತ ಲೋಕದ ಡಾನ್ ಬಗ್ಗೆ ಬಯೋಫಿಕ್ ಸಿನಿಮಾ ತರಲು ತಯಾರಿಗಳು ಆಗುತ್ತಿವೆ.
ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ಬೆಂಗಳೂರಿನ ಭೂಗತ ಲೋಕದ ಡಾನ್ ಎಂ.ಪಿ.ಜಯರಾಜ್ ಬಯೋಪಿಕ್ ಕೆಲಸದಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಆಲೋಚನೆಯಲ್ಲೂ ಚಿತ್ರತಂಡ ಇದೆ.
Published On - 2:33 pm, Tue, 19 May 20