AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್‌ವುಡ್‌, ಡ್ರಗ್ಸ್‌ ಮತ್ತು ಅರ್ಧ ಉಡುಗೆ ಸುಂದರಿಯರ ಬಗ್ಗೆ ಜಗ್ಗೇಶ್‌ ಟ್ವೀಟ್‌ನಲ್ಲಿ ಏನು ಹೇಳಿದ್ರು ಗೊತ್ತಾ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎದ್ದಿರುವ ಡ್ರಗ್ಸ್‌ ಹಾವಳಿಯ ಕುರಿತು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್‌ ಮೊದಲ ಬಾರಿ ಮಾತನಾಡಿದ್ದಾರೆ. ಈ ಕುರಿತು ಸಾಮಾಜಿಕ ತಾಣದಲ್ಲಿ ಟ್ವೀಟ್‌ ಮಾಡಿರುವ ಜಗ್ಗೇಶ್‌ ನಶೆಯ ಹಿಂದೆ ಬಿದ್ದವರ ವಿರುದ್ಧ ಕಿಡಿಕಾರಿದ್ದಾರೆ. ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ! […]

ಸ್ಯಾಂಡಲ್‌ವುಡ್‌, ಡ್ರಗ್ಸ್‌ ಮತ್ತು ಅರ್ಧ ಉಡುಗೆ ಸುಂದರಿಯರ ಬಗ್ಗೆ ಜಗ್ಗೇಶ್‌ ಟ್ವೀಟ್‌ನಲ್ಲಿ ಏನು ಹೇಳಿದ್ರು ಗೊತ್ತಾ?
Guru
|

Updated on: Aug 29, 2020 | 6:38 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎದ್ದಿರುವ ಡ್ರಗ್ಸ್‌ ಹಾವಳಿಯ ಕುರಿತು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್‌ ಮೊದಲ ಬಾರಿ ಮಾತನಾಡಿದ್ದಾರೆ. ಈ ಕುರಿತು ಸಾಮಾಜಿಕ ತಾಣದಲ್ಲಿ ಟ್ವೀಟ್‌ ಮಾಡಿರುವ ಜಗ್ಗೇಶ್‌ ನಶೆಯ ಹಿಂದೆ ಬಿದ್ದವರ ವಿರುದ್ಧ ಕಿಡಿಕಾರಿದ್ದಾರೆ.

ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ! ಏಕ್ ಮಾರ್ ದೋ ತುಕಡ. ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ! ಆಗಲಾದರೂ ಜನಕ್ಕೆ ಅರಿವಾಗಲಿ! ಎಂದು ಟ್ವೀಟ್‌ ಮಾಡಿದ್ದಾರೆ.

ಅಷ್ಟೆ ಅಲ್ಲ ಬೆಂಗಳೂರಿನ ಪಾರ್ಟಿಗಳ ಬಗ್ಗೆ ತಮಗಾದ ಒಂದು ಅನುಭವವನ್ನು ಕೂಡಾ ಜಗ್ಗೇಶ್‌ ಹಂಚಿಕೊಂಡಿದ್ದಾರೆ. 2017ರಲ್ಲಿ ಬಲವಂತಕ್ಕೆ ಒಬ್ಬ ರಾಜಕಾರಣಿಯ ಪಾರ್ಟಿಗೆ ಹೋಗಿದ್ದೆ! ಅರ್ಧಘಂಟೆಗೆ ಆ ಜಾಗ, ಅಲ್ಲಿದ್ದವರ ಆರ್ಭಟ! ಬಂದು ಸೇರಿದ ಅರ್ಧ ಉಡುಗೆ ಸುಂದರಿಯರನ್ನು ಕಂಡು ನಟ ಜಗ್ಗೇಶ್‌ ಆವಕ್ಕಾದರಂತೆ.

ಅಷ್ಟೇ ಅಲ್ಲ ಅದನ್ನು ಕಂಡು ನಾನು ನನ್ನ ಆತ್ಮೀಯ ಯುವನಟ ಹೇಳದೆ ಕೇಳದೆ, ಲಿಫ್ಟು ಬಳಸದೆ 12ಮಹಡಿ ಇಳಿದು ಓಡಿದೆವು ಎಂದಿದ್ದಾರೆ. ಅದೆ ಕಡೆ ಇಂದಿಗೂ ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು ಎಂದು ಆ ಪಾರ್ಟಿಯಲ್ಲಿದ್ದವರ ಬಗ್ಗೆ ಮತ್ತು ಆ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.