‘ಆ ಯುವ ನಟ ಸತ್ತಾಗ ಶವ ಪರೀಕ್ಷೆ ನಡೆಸಿದ್ದರೆ ಮಾದಕ ಜಾಲ ಬಟಾಬಯಲಿಗೆ ಬೀಳುತ್ತಿತ್ತು’

ಬೆಂಗಳೂರು: ಯುವ ನಟ ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು ಎಂದು ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. ನಾನು ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶವಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಯಾಱರು […]

‘ಆ ಯುವ ನಟ ಸತ್ತಾಗ ಶವ ಪರೀಕ್ಷೆ ನಡೆಸಿದ್ದರೆ ಮಾದಕ ಜಾಲ ಬಟಾಬಯಲಿಗೆ ಬೀಳುತ್ತಿತ್ತು’
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 29, 2020 | 1:08 PM

ಬೆಂಗಳೂರು: ಯುವ ನಟ ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು ಎಂದು ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.

ನಾನು ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶವಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ. ಡ್ರಗ್ಸ್​ನಿಂದಲೇ ಆ ನಟ ಮೃತಪಟ್ಟಿದ್ದರಾ ಎಂದು ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗವಾಗುತ್ತಿತ್ತು. ಜೊತೆಗೆ, ಯಾಱರು ಡ್ರಗ್ಸ್​ ಜಾಲದಲ್ಲಿದ್ದಾರೆ, ಎಷ್ಟು ಹಣ ಪಾವತಿಯಾಗ್ತಿದೆ. ಇದರಿಂದ ಯಾಱರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ ಎಂದೂ ತಿಳಿಸಬಲ್ಲೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

‘ಡ್ರಗ್ಸ್​ ದಂಧೆ ಜೊತೆ ವೇಶ್ಯಾವಾಟಿಕೆ, ಹನಿ ಟ್ರ್ಯಾಪ್ ಸಹ ನಡೆಯುತ್ತಿದೆ’ ಮತ್ತೊಂದೆಡೆ ಯಾವ ರೀತಿ ವೇಶ್ಯಾವಾಟಿಕೆ ನಡೆಯುತ್ತಿದೆ. ಹೀಗೆ ಹಲವಾರು ವಿಚಾರಗಳ ಬಗ್ಗೆ ತನಿಖೆ ನಡೆಸಬೇಕು. ಸಂಗೀತ ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿರುವ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇದಲ್ಲದೆ, ಕೆಲವೊಂದು ಕಾರ್ಯಕ್ರಮಗಳಲ್ಲಿ ಮುಜುಗರ ಆಗಿದೆ. ರಾತ್ರಿ ತೆಗೆದುಕೊಂಡಿದ್ದ ಡ್ರಗ್ಸ್​ ಬೆಳಗ್ಗೆ ಆದರೂ ಸ್ಮೆಲ್ ಬರುತ್ತಿರುತ್ತದೆ. ಹಾಗಾಗಿ, ಅಂಥವರನ್ನು ವಾಸನೆ ನೋಡಿಯೇ ಕಾರ್ಯಕ್ರಮಗಳಿಂದ ಕಳಿಸಿದ್ದಾರೆ. ಅಷ್ಟೇ ಅಲ್ಲ, ಹನಿ ಟ್ರ್ಯಾಪ್​ ಸಹ ನಡೆಯುತ್ತಿದೆ. ಇವೆಲ್ಲವನ್ನು ಪೊಲೀಸರ ಸಹಕಾರದಿಂದ ಬಹಿರಂಗಪಡಿಸಬಹುದು. ಆದರೆ ಇದರಲ್ಲಿ ಶಾಮೀಲಾಗಿರೋರು ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ಪೊಲೀಸರಿಗೆ ಎಲ್ಲ ಮಾಹಿತಿಯೂ ಗೊತ್ತಿದೆ. ಆದರೆ ಪೊಲೀಸರು ಮಾಹಿತಿ ಬಹಿರಂಗಪಡಿಸಬೇಕಷ್ಟೇ ಎಂದು ಇಂದ್ರಜಿತ್ ಹೇಳಿದ್ದಾರೆ.

ಚಿತ್ರರಂಗದ 25ರಿಂದ 30 ಕಲಾವಿದರು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದೆ. ಇದರಲ್ಲಿ 18 ಜನ ಏಜೆಂಟ್​ಗಳೇ ಇರುವ ಬಗ್ಗೆ ಮಾಹಿತಿ ಇದೆ. ಯಾವುದೇ ಬ್ಯಾಕ್​ಗ್ರೌಂಡ್​, ಹಿನ್ನೆಲೆ ಇಲ್ಲದ ನಟಿಯರೂ ಇದ್ದಾರೆ. ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್ ನಟಿಯರಿದ್ದಾರೆ ಎಂದು ಇಂದ್ರಜಿತ್ ಹೇಳಿದ್ದಾರೆ. ನಮ್ಮ ಪೊಲೀಸರ ಬಳಿ ಎಲ್ಲ ಮಾಹಿತಿ, ದಾಖಲೆಗಳು ಇವೆ. ಪೊಲೀಸರು ಮನಸ್ಸು ಮಾಡಿದರೆ ಈ ಕ್ಷಣವೇ ಅವರನ್ನು ಬಂಧಿಸಬಹುದು ಎಂದು ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ