Black Panther ಖ್ಯಾತಿಯ ನಟ ಚ್ಯಾಡ್ವಿಕ್ ಬೋಸ್ಮನ್ ಇನ್ನಿಲ್ಲ
ಹಾಲಿವುಡ್ನ ಫೇಮಸ್ ಸಿನಿಮಾ ಬ್ಲಾಕ್ ಪ್ಯಾಂಥರ್ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ ಚ್ಯಾಡ್ವಿಕ್ ಬೋಸ್ಮನ್ ಇಂದು ನಿಧನರಾಗಿದ್ದಾರೆ. 43 ವರ್ಷದ ನಟ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ನಟನ ಕುಟುಂಬಸ್ಥರು ಈ ಮಾಹಿತಿಯನ್ನು ಚ್ಯಾಡ್ವಿಕ್ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾರಕ ಕ್ಯಾನ್ಸರ್ಗೆ ತುತ್ತಾದ Black Panther ನಟ ತನ್ನ ಶಸ್ತ್ರಚಿಕಿತ್ಸೆ ಮತ್ತು ಕೆಮೋಥೆರಪಿ ಚಿಕಿತ್ಸೆ ನಡುವೆಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಬ್ಲಾಕ್ ಪ್ಯಾಂಥ್ರ ಸಿನಿಮಾದ ಮೂಲಕ […]
ಹಾಲಿವುಡ್ನ ಫೇಮಸ್ ಸಿನಿಮಾ ಬ್ಲಾಕ್ ಪ್ಯಾಂಥರ್ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ ಚ್ಯಾಡ್ವಿಕ್ ಬೋಸ್ಮನ್ ಇಂದು ನಿಧನರಾಗಿದ್ದಾರೆ. 43 ವರ್ಷದ ನಟ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ನಟನ ಕುಟುಂಬಸ್ಥರು ಈ ಮಾಹಿತಿಯನ್ನು ಚ್ಯಾಡ್ವಿಕ್ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾರಕ ಕ್ಯಾನ್ಸರ್ಗೆ ತುತ್ತಾದ Black Panther ನಟ ತನ್ನ ಶಸ್ತ್ರಚಿಕಿತ್ಸೆ ಮತ್ತು ಕೆಮೋಥೆರಪಿ ಚಿಕಿತ್ಸೆ ನಡುವೆಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಬ್ಲಾಕ್ ಪ್ಯಾಂಥ್ರ ಸಿನಿಮಾದ ಮೂಲಕ ಖ್ಯಾತಿ ಪಡೆದ ಚ್ಯಾಡ್ವಿಕ್ ಇದೀಗ ತಮ್ಮ ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
https://www.facebook.com/chadwickboseman/posts/10157949424684864
Published On - 10:42 am, Sat, 29 August 20