ಕೊಪ್ಪಳ: ಸದಾ ಫಿಟ್ನೆಸ್, ವ್ಯಾಯಾಮ ಅಂತ ಟ್ರೆಂಡಿಂಗ್ನಲ್ಲಿರುತ್ತಿದ್ದ ಅಭಿಮಾನಿಗಳ ನೆಚ್ಚಿನ ಅಪ್ಪು ನಟ ಪುನೀತ್ ರಾಜ್‌ಕುಮಾರ್ ಚಿತ್ರೀಕರಣಕ್ಕೆ ಆಗಮಿಸಿದ್ದ ವೇಳೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮಕ್ಕೆ ಜೇಮ್ಸ್ ಚಿತ್ರೀಕರಣಕ್ಕೆ ನಟ ಪುನೀತ್ ಆಗಮಿಸಿದ್ದರು. ಈ ವೇಳೆ ಕೊಪ್ಪಳ ಪೊಲೀಸರು ಮನವಿ ಮೇರೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ವೈರಸ್ ಹೇಗೆ ತಗುಲುತ್ತೆ, ನಾವು ಯಾವ ರೀತಿ ಎಚ್ಚರಿಕೆಯಿಂದಿರಬೇಕು ಎಂಬುದನ್ನ ಗ್ರಾಮದ ಜನರಿಗೆ ತಿಳಿ ಹೇಳಿದ್ದಾರೆ.
ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜಾಗೃತಿ ಮೂಡಿಸಿದ್ದಾನೆ. ತಮ್ಮ ನೆಚ್ಚಿನ ನಟನ ಮಾತುಗಳನ್ನು ಆಳಿಸಿದ ಜನ ಫುಲ್ ಖುಷ್ ಆಗಿ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.