ಮೇ 30ರಿಂದ ‘ಪ್ರೇಮಲೋಕ 2’ ಶೂಟಿಂಗ್; 25 ಸಾಂಗ್, ಜನಸಾಮಾನ್ಯರಿಗೂ ನಟಿಸೋ ಅವಕಾಶ

ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಬಗ್ಗೆ ಮಾತನಾಡಿದ್ದಾರೆ. ‘ಪ್ರೇಮಲೋಕ’ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ಚಿತ್ರದಲ್ಲಿ 25 ಹಾಡುಗಳು ಇರಲಿವೆ. ‘ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ರವಿಚಂದ್ರನ್. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಮೇ 30ರಿಂದ ‘ಪ್ರೇಮಲೋಕ 2’ ಶೂಟಿಂಗ್; 25 ಸಾಂಗ್, ಜನಸಾಮಾನ್ಯರಿಗೂ ನಟಿಸೋ ಅವಕಾಶ
ರವಿಚಂದ್ರನ್

Updated on: Mar 04, 2024 | 12:23 PM

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ (PremaLoka Movie) ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನಕಾಲದಲ್ಲಿ ದೊಡ್ಡ ಮಟ್ಟದ ಗೆಲುವು ಪಡೆದಿತ್ತು. ಈ ಚಿತ್ರದಿಂದ ರವಿಚಂದ್ರನ್ ಖ್ಯಾತಿ ಹೆಚ್ಚಿತು. ಈಗ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಪ್ರೇಮಲೋಕ’ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ವಿಚಾರ ಕೇಳಿ ಯಾರೊಬ್ಬರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಅವರೇ ನಿರ್ಮಾಣ ಮಾಡಿದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಸಿನಿಮಾ ಮಾಡಲು ಬೆಂಬಲ ಕೊಟ್ಟರು. ಈ ಚಿತ್ರ ಯಾರೂ ಊಹಿಸದ ರೀತಿಯಲ್ಲಿ ಗೆಲುವು ಕಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

‘ಮೇ 30ಕ್ಕೆ ಪ್ರೇಮಲೋಕ 2 ಸಿನಿಮಾ ಶುರುವಾಗುತ್ತದೆ. ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಸಿನಿಮಾದಲ್ಲಿ ಪ್ರೀತಿ ಮೆಲುಕು ಹಾಕುತ್ತಾ ಹೋಗುತ್ತೀರಾ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇಲ್ಲ. ಕೇವಲ ಪ್ರೀತಿ ವಿಚಾರ ಇದೆ’ ಎಂದಿದ್ದಾರೆ ಅವರು.
YouTube video player

‘ಪ್ರೇಮಲೋಕ 2 ಚಿತ್ರದಲ್ಲಿ ಕಥೆ ನಡೆಯೋದು ಜನರ ಮಧ್ಯೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸೋ ಅವಕಾಶ ಇದೆ. ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ ಇನ್​ಸ್ಟಾಗ್ರಾಮ್ ಅಕೌಂಟ್​ಗೆ ಫ್ಯಾಮಿಲಿ ಫೋಟೋ ಹಾಕ್ಕೊಂಡು ಬನ್ನಿ. ನಾನು ಅವರನ್ನು ಕರೆಸಿ ಶೂಟ್ ಮಾಡುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಇವತ್ತು ಜೇಬು ಹಾಗೂ ಹೃದಯ ಎರಡೂ ಖಾಲಿ ಆಗಿದೆ ಎಂದ ರವಿಚಂದ್ರನ್

‘ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ರವಿಚಂದ್ರನ್. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us