ಮದುವೆಯ ಮೊದಲ ವಾರ್ಷಿಕೋತ್ಸವ ಸಂಭ್ರಮ: ಬಾಳಸಂಗಾತಿ ಜೊತೆ ಫೋಟೋ ಹಂಚಿಕೊಂಡ ರಿಷಿ

| Updated By: ಆಯೇಷಾ ಬಾನು

Updated on: Nov 24, 2020 | 6:46 AM

ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಕಾಲಿಟ್ಟ ರಿಷಿಗೆ ಇಂದು ಪ್ರಥಮ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ರಿಷಿ ಕಳೆದ ವರ್ಷ ಸ್ವಾತಿ ಪರಶುರಾಮನ್​ರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಧಾರಾವಾಹಿಗಳ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ರಿಷಿ, ಮಹಾಪರ್ವ ಮತ್ತು ಅನುರೂಪ ಎಂಬ ಎರಡು ಸೀರಿಯಲ್​ಗಳಲ್ಲಿ ನಟಿಸಿದ್ದರು. ತದನಂತರ, ಸಿನಿಮಾದಲ್ಲೂ ಮಿಂಚಿದ ರಿಷಿ, ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯಲ್ಲಿ ತಮ್ಮ ನಟನೆಯ […]

ಮದುವೆಯ ಮೊದಲ ವಾರ್ಷಿಕೋತ್ಸವ ಸಂಭ್ರಮ: ಬಾಳಸಂಗಾತಿ ಜೊತೆ ಫೋಟೋ ಹಂಚಿಕೊಂಡ ರಿಷಿ
Follow us on

ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಕಾಲಿಟ್ಟ ರಿಷಿಗೆ ಇಂದು ಪ್ರಥಮ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ರಿಷಿ ಕಳೆದ ವರ್ಷ ಸ್ವಾತಿ ಪರಶುರಾಮನ್​ರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಧಾರಾವಾಹಿಗಳ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ರಿಷಿ, ಮಹಾಪರ್ವ ಮತ್ತು ಅನುರೂಪ ಎಂಬ ಎರಡು ಸೀರಿಯಲ್​ಗಳಲ್ಲಿ ನಟಿಸಿದ್ದರು. ತದನಂತರ, ಸಿನಿಮಾದಲ್ಲೂ ಮಿಂಚಿದ ರಿಷಿ, ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯಲ್ಲಿ ತಮ್ಮ ನಟನೆಯ ಮುಖಾಂತರ ಎಲ್ಲರ ಗಮನ ಸೆಳೆದಿದ್ದರು. ಎರಡೂ ಸಿನಿಮಾಗಳಿಗೆ ರಿಷಿ ಉತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದರು. ರಿಷಿಯವರ ವಿವಾಹ ವಾರ್ಷಿಕೋತ್ಸವಾದ ಇಂದು, ಮಡದಿಯೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟನ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದ್ದಾರೆ.

Published On - 2:05 pm, Tue, 10 November 20