ರಾಜಕಾರಣಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ರಾಗಿಣಿ ತಾಯಿ, ಯಾಕೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Sep 18, 2020 | 10:02 AM

ಬೆಂಗಳೂರು: ಜೈಲುಪಾಲಾದ ಮಗಳನ್ನು ಕಂಡು ಮೊನ್ನೆಯಷ್ಟೇ ತನ್ನ ಮಗಳು ಸಿಂಹಿಣಿ ಎಂದಿದ್ದ ಡ್ರಗ್ಸ್ ಕೇಸ್ ಆರೋಪಿ ರಾಗಿಣಿ ದ್ವಿವೇದಿ ಅವರ ತಾಯಿ ಇಂದು ರಾಗ ಬದಲಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ತಮ್ಮ ರಾಗದ್ವೇಷ ಹೊರಹಾಕಿದ್ದಾರೆ. ಚುನಾವಣೆ ವೇಳೆ ನನ್ನ ಮಗಳನ್ನು ಚೆನ್ನಾಗಿ ದುಡಿಸಿಕೊಂಡರು, ಈಗ ಕಷ್ಟಕಾಲದಲ್ಲಿ ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ. ಇದೀಗ ನಮ್ಮ ಮುಖ ನೋಡಿದರೆ ದೂರ ಹೋಗುತ್ತಿದ್ದಾರೆ ಎಂದು ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾಳೆ.‌ ಬೆಳಗ್ಗಿನಿಂದ ಸಂಜೆಯ […]

ರಾಜಕಾರಣಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ರಾಗಿಣಿ ತಾಯಿ, ಯಾಕೆ ಗೊತ್ತಾ?
Follow us on

ಬೆಂಗಳೂರು: ಜೈಲುಪಾಲಾದ ಮಗಳನ್ನು ಕಂಡು ಮೊನ್ನೆಯಷ್ಟೇ ತನ್ನ ಮಗಳು ಸಿಂಹಿಣಿ ಎಂದಿದ್ದ ಡ್ರಗ್ಸ್ ಕೇಸ್ ಆರೋಪಿ ರಾಗಿಣಿ ದ್ವಿವೇದಿ ಅವರ ತಾಯಿ ಇಂದು ರಾಗ ಬದಲಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ತಮ್ಮ ರಾಗದ್ವೇಷ ಹೊರಹಾಕಿದ್ದಾರೆ. ಚುನಾವಣೆ ವೇಳೆ ನನ್ನ ಮಗಳನ್ನು ಚೆನ್ನಾಗಿ ದುಡಿಸಿಕೊಂಡರು, ಈಗ ಕಷ್ಟಕಾಲದಲ್ಲಿ ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ. ಇದೀಗ ನಮ್ಮ ಮುಖ ನೋಡಿದರೆ ದೂರ ಹೋಗುತ್ತಿದ್ದಾರೆ ಎಂದು ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳು ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾಳೆ.‌ ಬೆಳಗ್ಗಿನಿಂದ ಸಂಜೆಯ ವರೆಗೂ ಕ್ಯಾಂಪೇನ್ ಮಾಡಿದ್ದಾಳೆ. ಕೆಲಸಕ್ಕಾಗಿ ಮಾತ್ರ ಮಗಳನ್ನು ಬಳಸಿಕೊಂಡಿದ್ದಾರೆ. ಇದೀಗ ಅವರೇ ಬೇರೆ ರೀತಿಯಲ್ಲಿ ನೋಡುತ್ತ ಮಾತನಾಡುತ್ತಿದ್ದಾರೆ‌. ಆಕೆಯ ಬರ್ತಡೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಇದೀಗ ನಮ್ಮ ಮುಖ ನೋಡಿದರೆ ದೂರ ಹೋಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಟೊಮೆಟೊ ಬಾತ್ ಸೇವಿಸಿದ ನಟಿಯರು:
ಇಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಂದ ನಟಿಯರಿಗೆ ಟೊಮೆಟೊ ಬಾತ್ ತಿಂಡಿ ನೀಡಲಾಗಿತ್ತು. ಒಟ್ಟಿಗೆ ಕೂತು ನಟಿಯರು ತಿಂಡಿ ಸೇವಿಸಿದ್ದಾರೆ. ನಿನ್ನೆ ಸಂಜನಾ ತನ್ನ ವಕೀಲರ ಜೊತೆಗೆ ಜೈಲಿನ ಬೂತ್ ಫೋನ್​ನಿಂದ ಮಾತನಾಡಿದ್ದಳು. ಇಂದು ಬೇಲ್ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಬೂತ್ ಫೋನ್​ನಿಂದ ಮಾತನಾಡಲು ಅವಕಾಶವಿದೆ. ಆದರೆ ಭೇಟಿಗೆ ಅವಕಾಶ ಇಲ್ಲ.

Published On - 9:07 am, Fri, 18 September 20