ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ: CCBಯಿಂದ ಅಕುಲ್ ಬಾಲಾಜಿಗೆ ಬುಲಾವ್

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ: CCBಯಿಂದ ಅಕುಲ್ ಬಾಲಾಜಿಗೆ ಬುಲಾವ್

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮತ್ತೆ ಮೂವರಿಗೆ ನೋಟಿಸ್ ನೀಡಲಾಗಿದೆ. R.V.ದೇವರಾಜ್ ಮಗ ಯುವರಾಜ್, ಸಂತೋಷ್‌ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದಾರೆ. ಜೊತೆಗೆ ನಾಳೆ ಬೆಳಗ್ಗೆ 10ಕ್ಕೆ ಸಿಸಿಬಿ ಎದುರು ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ನಾಳೆ ಬೆಳಗ್ಗೆ ಹಾಜರಾಗ್ತೀನಿ: ಅಕುಲ್​.. ಸಿಸಿಬಿ ಪೊಲೀಸರಿಂದ ನೋಟಿಸ್ ಬಂದಿರುವ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಸ್ಯಾಂಡಲ್​ವುಡ್ ನಟ, ನಿರೂಪಕ ಅಕುಲ್ ಬಾಲಾಜಿ, ನನಗೆ […]

sadhu srinath

|

Sep 18, 2020 | 2:40 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮತ್ತೆ ಮೂವರಿಗೆ ನೋಟಿಸ್ ನೀಡಲಾಗಿದೆ.

R.V.ದೇವರಾಜ್ ಮಗ ಯುವರಾಜ್, ಸಂತೋಷ್‌ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದಾರೆ. ಜೊತೆಗೆ ನಾಳೆ ಬೆಳಗ್ಗೆ 10ಕ್ಕೆ ಸಿಸಿಬಿ ಎದುರು ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ನಾಳೆ ಬೆಳಗ್ಗೆ ಹಾಜರಾಗ್ತೀನಿ: ಅಕುಲ್​.. ಸಿಸಿಬಿ ಪೊಲೀಸರಿಂದ ನೋಟಿಸ್ ಬಂದಿರುವ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಸ್ಯಾಂಡಲ್​ವುಡ್ ನಟ, ನಿರೂಪಕ ಅಕುಲ್ ಬಾಲಾಜಿ, ನನಗೆ ಸಿಸಿಬಿ ಪೊಲೀಸರಿಂದ ನೋಟಿಸ್ ‌ಬಂದಿದೆ. ನಾನು ಈಗ ಹೈದರಾಬಾದ್​ನಲ್ಲಿದ್ದೀನಿ, ಹೀಗಾಗಿ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗ್ತೀನಿ ಎಂದಿದ್ದಾರೆ.

ಸಂಜನಾ ಬರ್ತ್ ಡೇ ಗೆ ಹೋಗಿದ್ದೆ ಅಷ್ಟೆ: ಸಂತೋಷ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನನಗೆ ಸಿಸಿಬಿ ಪೊಲೀಸರಿಂದ ನೋಟಿಸ್​ ಬಂದಿದೆ. ಸದ್ಯಕ್ಕೆ ನಾನೀಗ ಮೈಸೂರಿನಲ್ಲಿದ್ದೇನೆ. ಹೀಗಾಗಿ ನಾಳೆ ಸಿಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ. ಜೊತೆಗೆ ಈಗಾಗಲೇ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಬರ್ತ್ ಡೇ ಯಲ್ಲಿ ಭಾಗಿಯಾಗಿದ್ದೆ. ಹೀಗಾಗಿ ಸಿಸಿಬಿ ಪೊಲೀಸರಿಂದ ನನಗೆ ನೋಟಿಸ್​ ಬಂದಿರಬಹುದೆಂದು ನಟ ಸಂತೋಷ್ ಕುಮಾರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada