ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಜೋರಾಗಿ ವಾಸನೆ ಬಡಿಯುತ್ತಿದೆ. ಈಗಾಗಲೇ ತಮ್ಮ ವಶದಲ್ಲಿರುವ ಆರೋಪಿಗಳು ನೀಡುತ್ತಿರುವ ಹೇಳಿಕೆಗಳನ್ನಾಧರಿಸಿ ಕೆಲ ನಟಿಮಣಿಗಳಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಟಿ ಸಂಜನಾ ಅವರ ಹೆಸರೂ ಕೇಳಿಬರುತ್ತಿದೆ. ಡ್ರಗ್ಸ್ ಜಾಲದ ವಿಚಾರಣೆ ನಡೆಸುತ್ತಿರುವ CCB ಅಧಿಕಾರಿಗಳು ನಟಿ ಸಂಜನಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ವಾಸಿಸುತ್ತಿರುವ ನಟಿ ಸಂಜನಾ ತಮ್ಮ ತಾಯಿಯೊಂದಿಗೆ, ಮುರುಗೇಶ್ ಪಾಳ್ಯದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕ್ರಿಸ್‌ಮಸ್ ದಿನದ್ದೇ ನಾನು ಅಟೆಂಡ್ ಮಾಡಿದ ಕೊನೆಯ ಪಾರ್ಟಿ. ಎಲ್ಲ ನನ್ನ ಗ್ರಹಚಾರ, ಅಂದು ಆ ಜಾಗಕ್ಕೆ ಹೋಗಬೇಕಾಯ್ತು ಎಂದು ನಟಿ ಸಂಜನಾ ಈಗಾಗಲೇ ಪ್ರಲಾಪಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಗವಂತಾ ನನ್ನನ್ನು ಈ ಪ್ರಕರಣದಿಂದ ಪಾರು ಮಾಡಪ್ಪಾ, ಬೇಗ ಮುಕ್ತಿ ಸಿಗುವಂತೆ ಮಾಡಪ್ಪಾ ಎಂದು ಶಿವನ ಪಾದಕ್ಕೆ ಎರಗಿ, ಮೊರೆಯಿಟ್ಟಿದ್ದಾರಂತೆ.
ಇದನ್ನೂ ಓದಿ: ಕ್ರಿಸ್‌ಮಸ್ ದಿನದ್ದೇ ಕೊನೆ ಪಾರ್ಟಿ: ಗ್ರಹಚಾರ ಅಂದು ಆ ಜಾಗಕ್ಕೆ ಹೋಗಬೇಕಾಯ್ತು-ಸಂಜನಾ
Published On - 1:00 pm, Fri, 4 September 20