AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ […]

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!
KUSHAL V
| Edited By: ಸಾಧು ಶ್ರೀನಾಥ್​|

Updated on:Sep 04, 2020 | 4:23 PM

Share

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ.

ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ ತಗಲಾಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ನಿನ್ನೆ ರಾತ್ರಿಯಿಡಿ ರವಿಶಂಕರ್ ವಿಚಾರಣೆ ನಡೆಸಲಾಗಿದ್ದು ಆರಂಭದಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡಿದ ರವಿಶಂಕರ್ ಬಳಿಕ ಆತನ ಮೊಬೈಲ್​ನಲ್ಲಿ ಪಡೆದ ಮಾಹಿತಿಯನ್ನು CCB ಅಧಿಕಾರಿಗಳು ಮುಂದಿಟ್ಟಾಗ ಎಲ್ಲವನ್ನೂ ಬಾಯಿಬಿಟ್ಟಿದ್ದಾನಂತೆ.

ಹಲವರ ಫೋಟೋಗಳನ್ನ ತೋರಿಸಿ ವಿಚಾರಿಸಿದ ಅಧಿಕಾರಿಗಳಿಗೆ ಫೋಟೋದಲ್ಲಿದ್ದವರ ಪರಿಚಯ ಇರುವುದಾಗಿ ಒಪ್ಪಿಕೊಂಡಿದ್ದಾನಂತೆ. ಈ ವೇಳೆ ಡ್ರಗ್​ ಪಾರ್ಟಿಯ ಬಗ್ಗೆ ಸಹ ಮಾಹಿತಿ ಕೊಟ್ಟ ರವಿಶಂಕರ್ ಪಾರ್ಟಿಯಲ್ಲಿ ರಾಗಿಣಿ ಜೊತೆ ಡ್ರಗ್​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ. ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಬಗ್ಗೆ ರವಿಶಂಕರ್ ಮಾಹಿತಿ ನೀಡಿದ ಬೆನ್ನಲ್ಲೇ ಇದೇ ಆಧಾರದಲ್ಲಿ ನಿನ್ನೆ ರಾತ್ರಿಯೇ ಸರ್ಚ್​ ವಾರೆಂಟ್​ ಪಡೆದ CCB ಅಧಿಕಾರಿಗಳು ಇಂದು ಮುಂಜಾನೆಯಲ್ಲೇ ರಾಗಿಣಿ ಮನೆ ಸರ್ಚ್​ ಮಾಡೋಕೆ ಮುಂದಾಗಿದ್ದು ಎಂದು ತಿಳಿದುಬಂದಿದೆ.

ರಾತ್ರಿ ರವಿಶಂಕರ್​ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಆತನಿಗೆ ಪೊಲೀಸ್​ ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾರಂತೆ. ವೀಡ್​ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಿದ್ದ ಅಧಿಕಾರಿಗಳಿಗೆ ಮೊದಲು ನನಗೇನೂ ಗೊತ್ತಿಲ್ಲವೆಂದಿದ್ದ ಆರೋಪಿ ರವಿಶಂಕರ್ ಬಳಿಕ ನಿಧಾನವಾಗಿ ಹಲವು ವಿಚಾರ ಬಾಯ್ಬಿಟ್ಟನಂತೆ.

ಹೀಗೆ ಹಲವು ರೀತಿಯ ವಿಚಾರಣೆ ಬಳಿಕ ಡ್ರಗ್ಸ್​ ಬಗ್ಗೆ ಮಾಹಿತಿ ನೀಡಿದ ರವಿಶಂಕರ್​ ಇದೇ ವೇಳೆ ರಾಗಿಣಿಯ ವಿಚಾರವನ್ನೂ ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದೆ. ನೇರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಲ ಪಾರ್ಟಿಗಳಲ್ಲಿ ರಾಗಿಣಿ ಮತ್ತು ನಾನು ಗಾಂಜಾ ಸೇವಿಸುತ್ತಿದ್ದೆವು. ಆ ಪಾರ್ಟಿಗಳಲ್ಲಿ ಹಲವು ಗಣ್ಯರ ಮಕ್ಕಳು ಭಾಗಿಯಾಗುತ್ತಿದ್ದರು. ಅಪರೂಪಕ್ಕೆ ಒಮ್ಮೆ ಪಾರ್ಟಿಗಳಲ್ಲಿ ಡ್ರಗ್ಸ್​​​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ.

ಆದರೆ, ಡ್ರಗ್ಸ್​​​ ಸಪ್ಲೈ ಮಾಡುವವರು ಯಾರು ಅನ್ನೋದು ಗೊತ್ತಿಲ್ಲ. ನಾನೂ ಯಾರಿಗೂ ಡ್ರಗ್ಸ್ ಸಪ್ಲೈ ಮಾಡಿಲ್ಲವೆಂದು ಒಪ್ಪಿಕೊಂಡಿದ್ದಾನಂತೆ. ಕೇವಲ ಪಾರ್ಟಿಗಳಲ್ಲಿ ನಾನು ಡ್ರಗ್ಸ್​ ಸೇವನೆ ಮಾಡಿದ್ದೇನೆ ಎಂದು ಹೇಳಿದ್ದಾನಂತೆ.

ಇದನ್ನೂ ಓದಿ: ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ

ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ದಾಳಿ

Published On - 12:12 pm, Fri, 4 September 20

Follow Us
KUSHAL V
KUSHAL V
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ