Yash: ಯಶ್​ ಮನೆ ಬಾಗಿಲು ತಟ್ಟಿದ ರಾಜಕೀಯ ಮುಖಂಡರು; ರಾಕಿಂಗ್ ಸ್ಟಾರ್ ನಿರ್ಧಾರ ಏನು?

|

Updated on: Apr 07, 2023 | 12:15 PM

ರಾಜಕೀಯ ವಿಚಾರದಲ್ಲಿ ಯಶ್ ಮುಂದಿನ ನಡೆ ಏನು ಎನ್ನುವ ಬಗ್ಗೆ ಅನೇಕರಿಗೆ ಕುತೂಹಲ ಇತ್ತು. ಇದಕ್ಕೆ ಅವರ ಆಪ್ತ ಬಳಗದಿಂದ ಉತ್ತರ ಸಿಕ್ಕಿದೆ.

Yash: ಯಶ್​ ಮನೆ ಬಾಗಿಲು ತಟ್ಟಿದ ರಾಜಕೀಯ ಮುಖಂಡರು; ರಾಕಿಂಗ್ ಸ್ಟಾರ್ ನಿರ್ಧಾರ ಏನು?
ಯಶ್
Follow us on

ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇದೆ. ಮುಂದಿನ 30 ದಿನಗಳಲ್ಲಿ ಮತದಾರರನ್ನು ಸೆಳೆಯಲು ಎಲ್ಲ ರೀತಿಯ ತಯಾರಿಗಳನ್ನು ರಾಜಕೀಯ ಮುಖಂಡರು ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಪಕ್ಷಗಳು ಸ್ಟಾರ್ ಪ್ರಚಾರಕರನ್ನು ಕರೆತರಲು ಪ್ಲ್ಯಾನ್ ರೂಪಿಸಿವೆ. ಬಿಜೆಪಿ ಮುಖಂಡರು ಈಗಾಗಲೇ ಸುದೀಪ್ (Sudeep) ಅವರನ್ನು ಕರೆತಂದಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರ ಪರ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಯಶ್ ಮುಂದಿನ ನಡೆ ಏನು ಎನ್ನುವ ಬಗ್ಗೆ ಅನೇಕರಿಗೆ ಕುತೂಹಲ ಇತ್ತು. ಇದಕ್ಕೆ ಅವರ ಆಪ್ತ ಬಳಗದಿಂದ ಉತ್ತರ ಸಿಕ್ಕಿದೆ. ಈ ಬಾರಿ ಯಶ್ (Yash) ರಾಜಕೀಯಕ್ಕೆ ಬರುತ್ತಿಲ್ಲ ಎನ್ನಲಾಗಿದೆ.

ಚುನಾವಣಾ ಪ್ರಚಾರ ಮಾಡಿದ್ದ ಯಶ್

ಈ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಯಶ್ ಅವರು ಪಕ್ಷ ನೋಡದೆ ಕೆಲ ರಾಜಕಾರಣಿಗಳ ಪರ ಪ್ರಚಾರ ಮಾಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ದೊಡ್ಡಮಟ್ಟದ ಕ್ಯಾಂಪೇನ್ ಮಾಡಿದ್ದರು. ಸುಮಲತಾ ಗೆಲ್ಲೋಕೆ ಯಶ್ ಅವರ ಹವಾ ಕೂಡ ಕಾರಣ ಆಗಿತ್ತು. ಈಗ ಯಶ್ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್ 2’ ಮೂಲಕ ಮನೆಮನೆಗೂ ಅವರು ಗೊತ್ತಾಗಿದ್ದಾರೆ. ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಪ್ರಮುಖ ಪಕ್ಷದವರು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಯಶ್ ಯಾರ ಪರವೂ ಪ್ರಚಾರ ಮಾಡುತ್ತಿಲ್ಲವಂತೆ.

ಯಶ್ ಭೇಟಿ ಮಾಡಿದ ರಾಜಕಾರಣಿಗಳು

ಯಶ್ ಅವರನ್ನು ಅನೇಕ ರಾಜಕಾರಣಿಗಳು ಭೇಟಿ ಮಾಡಿದ್ದಾರೆ. ಆದರೆ, ಯಾವ ಪಕ್ಷದ ಪರವೂ ಯಶ್ ಪ್ರಚಾರ ಮಾಡುತ್ತಿಲ್ಲ. ಸದ್ಯ ಅವರು ತಮ್ಮ 19ನೇ ಸಿನಿಮಾ ಬಗ್ಗೆ ಸಂಪೂರ್ಣ ಗಮನ ಕೊಟ್ಟಿದ್ದಾರೆ. ಈ ಕಾರಣಕ್ಕೆ ಯಶ್ ಚುನಾವಣೆಯ ಕಡೆ ಗಮನ ನೀಡುತ್ತಿಲ್ಲ ಎನ್ನಲಾಗಿದೆ.

ಈ ತಿಂಗಳೇ ಘೋಷಣೆ ಆಗಲಿದೆ ಯಶ್ ಹೊಸ ಸಿನಿಮಾ?

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದಿದ್ದು 2022ರ ಏಪ್ರಿಲ್ 14ರಂದು. ಈ ಸಿನಿಮಾ ತೆರೆಗೆ ಬಂದು ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ, ಹೊಸ ಸಿನಿಮಾ ಘೋಷಣೆ ಆಗಿಲ್ಲ. ಮೂಲಗಳ ಪ್ರಕಾರ, ಈ ತಿಂಗಳಾಂತ್ಯಕ್ಕೆ ಯಶ್ ಹೊಸ ಸಿನಿಮಾ ಘೋಷಣೆ ಆಗಲಿದೆಯಂತೆ.

ಇದನ್ನೂ ಓದಿ: ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದ ಕಿಚ್ಚ ಸುದೀಪ್; ಸೆಟ್​ನ ಫೋಟೋ ಲೀಕ್

ರಿಷಬ್ ಶೆಟ್ಟಿಯೂ ಪ್ರಚಾರ ಮಾಡಲ್ಲ

‘ಕಾಂತಾರ’ ಚಿತ್ರದಿಂದ ರಿಷಬ್ ಶೆಟ್ಟಿ ಖ್ಯಾತಿ ಹೆಚ್ಚಿದೆ. ಆದರೆ, ಅವರು ಕೂಡ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ. ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ