ಪೊಗರು ನಂತರ ‘ದುಬಾರಿ’ಯಾದ ಧ್ರುವ ಸರ್ಜಾ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ರು

|

Updated on: Nov 06, 2020 | 2:11 PM

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಬೆಳ್ಳಂ ಬೆಳಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಸಹೋದರ ಚಿರು ಅಗಲಿಕೆ ನಂತರ ಸದ್ಯ ಸಿನಿಮಾ ಕೆಲಸಗಳತ್ತ ಧ್ರುವ ಮುಖ ಮಾಡಿದ್ದಾರೆ. ಪೊಗರು ಚಿತ್ರದ ನಂತರ ದುಬಾರಿಯಾದ ಧ್ರುವ ಸರ್ಜಾ ಇಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ ಹೊಸ ಚಿತ್ರದ ಮುಹೂರ್ತ ಮಾಡಿದ್ದಾರೆ. ‘ದುಬಾರಿ’ ಎಂಬ ಟೈಟಲ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದ್ದು, ನಂದ‌ಕಿಶೋರ್ ಆಕ್ಷನ್ ಕಟ್ ಹೇಳಲಿದ್ದಾರೆ. ಜೀವನದಲ್ಲಿ ಅನೇಕ ತಿರುವುಗಳನ್ನು ಅನುಭವಿಸಿ […]

ಪೊಗರು ನಂತರ ದುಬಾರಿಯಾದ ಧ್ರುವ ಸರ್ಜಾ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ರು
Follow us on

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಬೆಳ್ಳಂ ಬೆಳಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಸಹೋದರ ಚಿರು ಅಗಲಿಕೆ ನಂತರ ಸದ್ಯ ಸಿನಿಮಾ ಕೆಲಸಗಳತ್ತ ಧ್ರುವ ಮುಖ ಮಾಡಿದ್ದಾರೆ.

ಪೊಗರು ಚಿತ್ರದ ನಂತರ ದುಬಾರಿಯಾದ ಧ್ರುವ ಸರ್ಜಾ ಇಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ ಹೊಸ ಚಿತ್ರದ ಮುಹೂರ್ತ ಮಾಡಿದ್ದಾರೆ. ‘ದುಬಾರಿ’ ಎಂಬ ಟೈಟಲ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದ್ದು, ನಂದ‌ಕಿಶೋರ್ ಆಕ್ಷನ್ ಕಟ್ ಹೇಳಲಿದ್ದಾರೆ.

ಜೀವನದಲ್ಲಿ ಅನೇಕ ತಿರುವುಗಳನ್ನು ಅನುಭವಿಸಿ ಸದ್ಯ ಈಗ ಸಿನಿಮಾಗಳ ಕಡೆ ಗಮನ ಹರಿಸುತ್ತಿರುವ ಧ್ರುವಗೆ ಮತ್ತಷ್ಟು ಯಶಸ್ಸು, ಸುಖ ಶಾಂತಿ ಸಿಗಲಿ ಹಾಗೂ ಪೊಗರು ಸಿನಿಮಾದಂತೆ ಹಿಟ್ ಸಿನಿಮಾ ನೀಡಲಿ ಎಂಬುವುದು ಜನರ ಆಶಯ.

Published On - 7:18 am, Fri, 6 November 20