ಸಂಜನಾದ್ದು ಟೆಂಪಲ್​ ರನ್ನಾ.. ಅಥವಾ ಟೆನ್ಷನ್​ನಲ್ಲಿ ಸಿಟಿ ರೌಂಡ್ಸ್​ ಮಾಡ್ತಿದ್ದಾರಾ?

|

Updated on: Sep 07, 2020 | 11:59 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸಂಜನಾಗೂ ಈ ಕುರಿತು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆ ಇದೆ. ಆದರೆ ನಟಿ ಸಂಜನಾ ಮಾತ್ರ ಫುಲ್ ಹೈ ಡ್ರಾಮಾ ಶುರು ಮಾಡಿದ್ದಾರೆ. ಬೆಂಗಳೂರಿನ ಇಂದಿರಾನಗರದ ಅಪಾರ್ಟ್​ಮೆಂಟ್​ನಲ್ಲಿರುವ ಸಂಜನಾ ಮೂರು ದಿನದಿಂದ ಮನೆ ಬಿಟ್ಟು ಹೊರ ಬಂದಿರಲಿಲ್ಲ. ಇನ್ನು ಇಂದು ಅದೇ ಸಿಸಿಬಿ ಟೆನ್ಷನ್​ನಲ್ಲಿ […]

ಸಂಜನಾದ್ದು ಟೆಂಪಲ್​ ರನ್ನಾ.. ಅಥವಾ ಟೆನ್ಷನ್​ನಲ್ಲಿ ಸಿಟಿ ರೌಂಡ್ಸ್​ ಮಾಡ್ತಿದ್ದಾರಾ?
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸಂಜನಾಗೂ ಈ ಕುರಿತು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆ ಇದೆ. ಆದರೆ ನಟಿ ಸಂಜನಾ ಮಾತ್ರ ಫುಲ್ ಹೈ ಡ್ರಾಮಾ ಶುರು ಮಾಡಿದ್ದಾರೆ.

ಬೆಂಗಳೂರಿನ ಇಂದಿರಾನಗರದ ಅಪಾರ್ಟ್​ಮೆಂಟ್​ನಲ್ಲಿರುವ ಸಂಜನಾ ಮೂರು ದಿನದಿಂದ ಮನೆ ಬಿಟ್ಟು ಹೊರ ಬಂದಿರಲಿಲ್ಲ. ಇನ್ನು ಇಂದು ಅದೇ ಸಿಸಿಬಿ ಟೆನ್ಷನ್​ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ರಾಜಧಾನಿಯಲ್ಲಿ ಅಲ್ಲಲ್ಲಿ ಸುತ್ತಾಡುತ್ತಿದ್ದಾರೆ. ಆ ಕಡೆ ದೇವಸ್ಥಾನಕ್ಕೆ ಅಂತಾ  ಹೇಳಿ, ಈ ಕಡೆ ಸುಮ್ಮನೆ ನಗರದಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ತರಕಾರಿ ತೆಗೆದುಕೊಳ್ಳಲು ಇಂದಿರಾನಗರ ಸೂಪರ್ ಮಾರುಕಟ್ಟೆಗೆ ಸಹ ಒಂದು ವಿಸಿಟ್ ಹಾಕಿದ್ದಾರೆ.

ಒಂದು ಗಂಟೆಗಯಿಂದ ಸುಮ್ಮನೆ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ. ಮಾಧ್ಯಮದವ್ರು ಫಾಲೋ ಮಾಡ್ತಿದ್ದಾರೆ ಅನ್ನೋದು ತಿಳಿದು ಡ್ರಾಮಾ ಇನ್ನೂ ಹೆಚ್ಚು ಮಾಡಿದ್ದಾರೆ. ಕೆ.ಆರ್. ಪುರಂ ಗೆ ಹೋಗಿ, ಮತ್ತೆ ಯೂಟರ್ನ್ ಮಾಡಿಕೊಂಡು ಬಂದಿದ್ದಾರೆ! ಸದ್ಯ ಜೀವನ್ ಭೀಮಾ ನಗರದ ರಸ್ತೆಗಳಲ್ಲಿ ಕಾರ್ ಓಡಿಸುತ್ತಾ ಸಂಜನಾ ಬೀಟ್ ಹಾಕಿದ್ದು, ಜೀವನ್ ಭೀಮಾ ನಗರದ ಟಾಪ್ ಇನ್ ಟೌನ್ ಸೂಪರ್ ಮಾರ್ಕೆಟ್​ನಲ್ಲಿ ತಾಯಿ ಜೊತೆ ಶಾಪಿಂಗ್ ಮಾಡ್ತಿದ್ದಾರೆ..

ಇದನ್ನೂ ಓದಿ: ಸಂಜನಾಗೆ CCB ಬುಲಾವ್ ಸಾಧ್ಯತೆ, ಆದ್ರೆ ದಿಢೀರನೆ ಷೇರ್ ಆಗಿದೆ ಈ ಫೋಟೋ!

Published On - 11:33 am, Mon, 7 September 20