AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಕ್ಯಾಸಿನೋಗೆ ಅತಿಥಿಯಾಗಿ ಹೋಗಿದ್ದೆ, ಅವನಿಗೆ ಚಪ್ಪಲಿಯಲ್ಲಿ ಹೊಡೀತೀನಿ- ರೊಚ್ಚಿಗೆದ್ದ ಸಂಜನಾ

[lazy-load-videos-and-sticky-control id=”RcYNgwKvhAE”] ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಕೇಸ್​ಗೆ ಸಂಬಂಧಿಸಿ ಅನೇಕ ರೋಚಕ ಸಂಗತಿಗಳು ಬಯಲಾಗುತ್ತಿವೆ. ಈ ಮಧ್ಯೆ ಉರಿಯೋ ಬೆಂಕಿಗೆ ತುಪ್ಪ ಸುರಿದು ಬೆಂಕಿಗೆ ಮೈ ಕಾಯಿಸಿಕೊಂಡ್ರು ಎಂಬಂತೆ ನಟಿ ಸಂಜನಾ ಮತ್ತು ಪ್ರಶಾಂತ್ ಸಂಬರಗಿ ಇಬ್ಬರೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಅವರ ವಿರುದ್ಧ ಸಂಜನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಂಬರಗಿ ನನ್ನನ್ನು ಚಿಯರ್ ಗರ್ಲ್ ಅಂದಿದ್ದಾನೆ. ಅವನಿಗೆ ನಾನು ಚಪ್ಪಲಿಯಲ್ಲಿ ಹೊಡೆಯುತ್ತೇನೆ. ‘ಪ್ರಶಾಂತ್ ಸಂಬರಗಿ ಬೀದಿ ನಾಯಿ’ […]

ಶ್ರೀಲಂಕಾ ಕ್ಯಾಸಿನೋಗೆ ಅತಿಥಿಯಾಗಿ ಹೋಗಿದ್ದೆ, ಅವನಿಗೆ ಚಪ್ಪಲಿಯಲ್ಲಿ ಹೊಡೀತೀನಿ- ರೊಚ್ಚಿಗೆದ್ದ ಸಂಜನಾ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Sep 07, 2020 | 1:25 PM

[lazy-load-videos-and-sticky-control id=”RcYNgwKvhAE”]

ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಕೇಸ್​ಗೆ ಸಂಬಂಧಿಸಿ ಅನೇಕ ರೋಚಕ ಸಂಗತಿಗಳು ಬಯಲಾಗುತ್ತಿವೆ. ಈ ಮಧ್ಯೆ ಉರಿಯೋ ಬೆಂಕಿಗೆ ತುಪ್ಪ ಸುರಿದು ಬೆಂಕಿಗೆ ಮೈ ಕಾಯಿಸಿಕೊಂಡ್ರು ಎಂಬಂತೆ ನಟಿ ಸಂಜನಾ ಮತ್ತು ಪ್ರಶಾಂತ್ ಸಂಬರಗಿ ಇಬ್ಬರೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ.

ಪ್ರಶಾಂತ್ ಸಂಬರಗಿ ಅವರ ವಿರುದ್ಧ ಸಂಜನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಂಬರಗಿ ನನ್ನನ್ನು ಚಿಯರ್ ಗರ್ಲ್ ಅಂದಿದ್ದಾನೆ. ಅವನಿಗೆ ನಾನು ಚಪ್ಪಲಿಯಲ್ಲಿ ಹೊಡೆಯುತ್ತೇನೆ. ‘ಪ್ರಶಾಂತ್ ಸಂಬರಗಿ ಬೀದಿ ನಾಯಿ’ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನಗಳ ಕಾಲ ಪ್ರಶಾಂತ್ ಸಂಬರಗಿ ಎಲ್ಲಿದ್ದರು. ಈಗ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಏಕೆ ಆರೋಪ ಮಾಡಿರಲಿಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಪ್ರಶ್ನಿಸಿದ್ದಾರೆ.

ಪ್ರಚಾರದ ಹುಚ್ಚಿನಿಂದ ನನ್ನ ಬಗ್ಗೆ ಆರೋಪಿಸುತ್ತಿದ್ದಾನೆ: ಪ್ರಶಾಂತ್ ಸಂಬರಗಿಗೆ ಮಾಡುವುದಕ್ಕೆ ಕೆಲಸವಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿಯಾಗಿ ಮಾಡ್ತಿದ್ದಾನೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡಿದ್ದಾನೆ. ಪ್ರಚಾರದ ಹುಚ್ಚಿನಿಂದ ನನ್ನ ಬಗ್ಗೆ ಆರೋಪಿಸುತ್ತಿದ್ದಾನೆ. ಮೀ ಟೂ ಕೇಸ್‌ನಲ್ಲಿ ಶ್ರುತಿ ಹರಿಹರನ್ ಬಗ್ಗೆ ಮಾತಾಡಿದ್ದ. ಈಗ ನನ್ನ ಹೆಸರು ಬಳಸಿಕೊಂಡು ಪ್ರಚಾರ ಪಡೀತಿದ್ದಾನೆ. ನಮ್ಮ ತಾಯಿಗೆ ಹಾರ್ಟ್ ಪ್ರಾಬ್ಲಂ ಇದೆ. ಅವರಿಗೇನಾದ್ರೂ ಆದರೆ ನಾನು ಸತ್ತರೂ ಅವನನ್ನ ಬಿಡಲ್ಲ ಎಂದು ಸಂಜನಾ ಕಿಡಿಕಾರಿದ್ದಾರೆ.

ಶ್ರೀಲಂಕಾ ಕ್ಯಾಸಿನೋಗೆ ಅತಿಥಿಯಾಗಿ ಹೋಗಿದ್ದೆ ಅಷ್ಟೆ: ಪ್ರಶಾಂತ್ ಸಂಬರಗಿ ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋ ಬಗ್ಗೆ ಮಾತನಾಡಿದ ಸಂಜನಾ, ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋಗೆ ಭೇಟಿ ವಿಚಾರಕ್ಕೆ ಸಂಬಂಧಿಸಿ ನಾನು ಅಲ್ಲಿಗೆ ಮುಖ್ಯ ಅತಿಥಿಯಾಗಿ ಹೋಗಿದ್ದೆ ಅಷ್ಟೆ. ಬ್ಯಾಲಿಸ್ ಕ್ಯಾನಿಸೋಗೆ ನಟರಾದ ಯಶ್, ಉಪೇಂದ್ರ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹೋಗಿದ್ದಾರೆ.

ವಿವೇಕ್ ಒಬೆರಾಯ್ ಕೂಡ ನಮ್ಮ ಜತೆ ಬಂದಿದ್ದರು. ನನ್ನ ಅಪ್ಪ, ಅಮ್ಮ ಕೂಡ ಜೊತೆಯಲ್ಲೇ ಬಂದಿದ್ದರು. ಈ ಬೆಳವಣಿಗೆಯಿಂದ ನಮ್ಮ ತಾಯಿಗೆ ಎದೆನೋವು ಕಾಣಿಸಿಕೊಂಡಿದೆ. ಅವರಿಗೆ ಏನಾದರೂ ಆದರೆ ಮಾತ್ರ ಸುಮ್ಮನೆ ಇರಲ್ಲ. ನನಗೆ ಇದರಿಂದ ಕಿರುಕುಳವಾಗುತ್ತಿದೆ. ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಜಮೀರ್ ಅಹಮದ್ ಗೆ ಮನವಿ ಮಾಡುತ್ತೇನೆ ಎಂದು ಕೈ ಮುಗಿದು ಕ್ಯಾಮೆರಾ ಮುಂದೆ ಸಂಜನಾ ಕಣ್ಣೀರು ಹಾಕಿದ್ದಾರೆ.

ಸಿಸಿಬಿಯವರು ಬಂಧಿಸಿರುವ ರಾಹುಲ್ ಹೊರಬಂದ್ರೆ ಸಾಕು. ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದರೆ ನಾನು ಹೋಗ್ತೇನೆ. ನಾನು ವಕೀಲರನ್ನ ಕಳಿಸಲ್ಲ, ನಾನೇ ಖುದ್ದಾಗಿ ಹೋಗ್ತೀನಿ ಎಂದೂ ಬೆಂಗಳೂರಿನಲ್ಲಿ ನಟಿ ಸಂಜನಾ ಗಲ್ರಾನಿ ತಿಳಿಸಿದ್ದಾರೆ.

ಇದನ್ನೂ ಓದಿ:ಮರೆ ಮಾಡಲು ಏನೂ ಇಲ್ದಿರುವಾಗ ಮರೆಮಾಚುವ ಭಯವೇಕೆ? ಸಂಜನಾಗೆ ಪ್ರಶಾಂತ್ ಸಂಬರಗಿ ಪ್ರಶ್ನೆ

Published On - 12:39 pm, Mon, 7 September 20