KGF 3: ‘ಕೆಜಿಎಫ್ 3’ ನಲ್ಲಿ ರಾಕಿಭಾಯ್ ಜೊತೆಗೆ ಮತ್ತೊಬ್ಬ ಪವರ್​ಫುಲ್ ಸ್ಟಾರ್

|

Updated on: Jul 24, 2024 | 4:45 PM

KGF 3 Movie: ‘ಕೆಜಿಎಫ್ 3’ ಸಿನಿಮಾ ಬರಲಿದೆ ಎಂಬುದು ಈಗಾಗಲೇ ಖಾತ್ರಿಯಾಗಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಯಶ್ ಜೊತೆಗೆ ಮತ್ತೊಬ್ಬ ಸೂಪರ್ ಸ್ಟಾರ್ ಸಹ ನಟಿಸಲಿದ್ದಾರೆ. ಯಾರು ಆ ಸೂಪರ್ ಸ್ಟಾರ್?

KGF 3: ‘ಕೆಜಿಎಫ್ 3’ ನಲ್ಲಿ ರಾಕಿಭಾಯ್ ಜೊತೆಗೆ ಮತ್ತೊಬ್ಬ ಪವರ್​ಫುಲ್ ಸ್ಟಾರ್
Follow us on

‘ಕೆಜಿಎಫ್’ ಎಂದೊಡನೆ ಚಿತ್ರ ಪ್ರೇಮಿಗಳ ಮನದಲ್ಲಿ ಸಿನಿಮಾದ ಹಿನ್ನೆಲೆ ಸಂಗೀತ ಮಾರ್ದನಿಸಲು ಪ್ರಾರಂಭಿಸುತ್ತದೆ. ಆ ಸಿನಿಮಾಕ್ಕೆ ಇದ್ದ ಪವರ್​ ಅಂಥಹದ್ದು. ಅತ್ಯಂತ ಮಾಸ್, ಕಮರ್ಶಿಯಲ್ ಎಲಿಮೆಂಟ್​ಗಳನ್ನು ಬೆಸೆದಿದ್ದ ‘ಕೆಜಿಎಫ್’ ಸಿನಿಮಾದ ಮೂರನೇ ಭಾಗ ಬರಲಿದೆ ಎಂಬುದು ಸ್ವತಃ ಹೊಂಬಾಳೆ ಫಿಲಮ್ಸ್ ಖಾತ್ರಿ ಪಡಿಸಿದೆ. ಆದರೆ ಇದೀಗ ಹೊರಬಿದ್ದಿರುವ ಹೊಸ ಸುದ್ದಿಯೆಂದರೆ ‘ಕೆಜಿಎಫ್ 3’ ಸಿನಿಮಾದಲ್ಲಿ ಯಶ್ ಜೊತೆಗೆ ಮತ್ತೊಬ್ಬ ಸೂಪರ್ ಸ್ಟಾರ್ ಸಹ ಇರಲಿದ್ದಾರೆ. ಅವರೇ ತಮಿಳಿನ ಸ್ಟಾರ್ ನಟ ತಲಾ ಅಜಿತ್ ಕುಮಾರ್.

ಹೌದು, ‘ಕೆಜಿಎಫ್ 3’ ಸಿನಿಮಾದಲ್ಲಿ ಯಶ್ ಜೊತೆಗೆ ಅಜಿತ್ ಸಹ ಇರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಸಂಸ್ಥೆ ಈ ಬಗ್ಗೆ ಅಜಿತ್ ಜೊತೆ ಮಾತನಾಡಿದ್ದು ಅಜಿತ್ ಸಹ ಸಿನಿಮಾಕ್ಕೆ ಓಕೆ ಹೇಳಿದ್ದಾರೆ. ಅಸಲಿಗೆ ಅಜಿತ್ ಜೊತೆಗೆ ಪ್ರಶಾಂತ್ ನೀಲ್ ಎರಡು ಸಿನಿಮಾಗಳನ್ನು ಮಾಡಲಿದ್ದಾರೆ. ಅದರಲ್ಲಿ ಒಂದು ‘ಕೆಜಿಎಫ್ 3’.

ಯಶ್​ರ ಕಪ್ಪು ಗಡ್ಡದ ವಿರುದ್ಧ ಅಜಿತ್​ರ ಬಿಳಿ ಗಡ್ಡದ ಕಾಂಬಿನೇಶನ್ ತೆರೆಯ ಮೇಲೆ ಭರ್ಜರಿಯಾಗಿರಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ‘ಕೆಜಿಎಫ್ 3’ ಸಿನಿಮಾದ ಚಿತ್ರೀಕರಣ 2025 ರಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದ್ದು, ಸಿನಿಮಾ 2026ರ ಅಂತ್ಯಕ್ಕೆ ಬಿಡುಗಡೆ ಆಗಲಿದೆಯಂತೆ. ಅದಕ್ಕೂ ಮುಂಚೆಯೇ ಅಜಿತ್ ಗಾಗಿ ಒಂದು ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದಲ್ಲಿ ಜನಪ್ರಿಯ ನಟಿಯರ ದಂಡು?

ಅಜಿತ್ ಪ್ರಸ್ತುತ ‘ವಿಡ ಮುಯರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ವಿಡ ಮುಯರ್ಚಿ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ‘ಗುಡ್ ಬ್ಯಾಡ್ ಆಂಡ್ ಅಗ್ಲಿ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವೂ ಆಗಿಬಿಟ್ಟಿದೆ. ಎರಡು ಸಿನಿಮಾಗಳನ್ನು ಮುಗಿಸಿದ ಬಳಿಕ ನೀಲ್ ಜೊತೆಗಿನ ಸಿನಿಮಾ ಆರಂಭವಾಗಲಿದೆ. ಇನ್ನು ಯಶ್ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಅವರು ‘ರಾಮಾಯಣ’ ಸಿನಿಮಾ ಮುಗಿಸಬೇಕಿದೆ. ಅದರ ಬಳಿಕ ಅವರು ‘ಕೆಜಿಎಫ್ 3’ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

‘ಕೆಜಿಎಫ್ 3’ ನಲ್ಲಿ ಅಜಿತ್ ಇರಲಿದ್ದಾರೆ ಎಂಬ ಸುದ್ದಿ ಟ್ವಿಟ್ಟರ್ ತುಂಬೆಲ್ಲ ಟ್ರೆಂಡ್ ಆಗುತ್ತಿದ್ದು, ಯಶ್ ಅಭಿಮಾನಿಗಳು ಹಾಗೂ ತಲಾ ಅಜಿತ್ ಅಭಿಮಾನಿಗಳ ಖುಷಿಗೆ ಪಾರವೇ ಇರದಂತಾಗಿದೆ. ಹೊಂಬಾಳೆ ಫಿಲಮ್ಸ್ ಈ ಸುದ್ದಿಯನ್ನು ಖಾತ್ರಿಗೊಳಿಸಿಲ್ಲವಾದರೂ ಅಜಿತ್ ಹಾಗೂ ಯಶ್ ಒಟ್ಟಿಗೆ ನಟಿಸುವುದು ಬಹುತೇಕ ಖಾತ್ರಿ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ