‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದಲ್ಲಿ ಜನಪ್ರಿಯ ನಟಿಯರ ದಂಡು?

ಸಿಕ್ಕಾಪಟ್ಟೆ ಪ್ಲಾನಿಂಗ್​ನೊಂದಿಗೆ ‘ಟಾಕ್ಸಿಕ್​’ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನಲಾದ ನಟಿಯರ ಪಟ್ಟಿ ಬೆಳೆಯುತ್ತಲೇ ಇದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ಶ್ರುತಿ ಹಾಸನ್​ ಮುಂತಾದ ನಟಿಯರ ಹೆಸರುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಯಶ್​ ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದಲ್ಲಿ ಜನಪ್ರಿಯ ನಟಿಯರ ದಂಡು?
ಯಶ್​, ನಯನತಾರಾ, ಕಿಯಾರಾ ಅಡ್ವಾಣಿ, ಶ್ರುತಿ ಹಾಸನ್​, ಹುಮಾ ಖುರೇಷಿ, ತಾರಾ ಸುತಾರಿಯಾ
Follow us
ಮದನ್​ ಕುಮಾರ್​
| Updated By: Digi Tech Desk

Updated on:Aug 08, 2024 | 11:31 AM

ಯಶ್​ ಅಭಿನಯಿಸುತ್ತಿರುವ ‘ಟಾಕ್ಸಿಕ್​’ ಸಿನಿಮಾದ ಬಗ್ಗೆ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸಾಧ್ಯವಾದಷ್ಟು ಗೌಪ್ಯವಾಗಿಯೇ ಈ ಸಿನಿಮಾದ ಕೆಲಸಗಳನ್ನು ಮಾಡಲಾಗುತ್ತಿದೆ. ಪಾತ್ರವರ್ಗದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಯಶ್​ ಜೊತೆ ಈ ಸಿನಿಮಾದಲ್ಲಿ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬ ಕೌತುಕ ಎಲ್ಲರಿಗೂ ಇದೆ. ಈಗಾಗಲೇ ಕೆಲವು ನಟಿಯರ ಹೆಸರುಗಳು ಹರಿದಾಡುತ್ತಿವೆ. ನಯನತಾರಾ, ಕಿಯಾರಾ ಅಡ್ವಾಣಿ ಮಾತ್ರವಲ್ಲದೇ ಇನ್ನೂ ಹಲವು ನಟಿಯರು ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಟಾಕ್ಸಿಕ್​’ ಸಿನಿಮಾ ಸದ್ದು ಮಾಡಲಿದೆ. ಅದಕ್ಕೆ ತಕ್ಕಂತೆಯೇ ಪಾತ್ರವರ್ಗ ಇರಲಿದೆ. ಎಲ್ಲ ರಾಜ್ಯಗಳಲ್ಲೂ ಜನಪ್ರಿಯತೆ ಹೊಂದಿರುವ ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ನಟಿ ಕಿಯಾರಾ ಅಡ್ವಾಣಿ ಅವರು ಯಶ್​ಗೆ ಜೋಡಿಯಾಗಿ ನಟಿಸಿದರೆ, ಯಶ್​ ಸಹೋದರಿಯಾಗಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್​ ಇದೆ.

ಈ ಯಾವ ಗಾಸಿಪ್​ಗಳ ಬಗ್ಗೆಯೂ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ‘ಟಾಕ್ಸಿಕ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಯಶ್​ ಪಾಲಿಗೆ ಇದು ಮಹತ್ವದ ಪ್ರಾಜೆಕ್ಟ್​. ‘ಕೆಜಿಎಫ್​ 2’ ಚಿತ್ರದ ಯಶಸ್ಸಿನಿಂದ ಅವರು ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ: ಯಶ್​ ಜತೆ ನಿರ್ದೇಶಕ ಅಟ್ಲಿ ಮಾತುಕತೆ ವಿಡಿಯೋ ವೈರಲ್​; ನೆಟ್ಟಿಗರದ್ದು ಬಗೆಬಗೆ ಲೆಕ್ಕಾಚಾರ

‘ಟಾಕ್ಸಿಕ್​’ ಸಿನಿಮಾದಲ್ಲಿ ಬಾಲಿವುಡ್​ನ ಖ್ಯಾತ ನಟಿ ಹುಮಾ ಖುರೇಷಿ ಅವರು ನೆಗೆಟಿವ್​ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಆ ಕಾರಣದಿಂದ ಸಿನಿಪ್ರಿಯರ ಕುತೂಹಲ ಜಾಸ್ತಿ ಆಗಿದೆ. ಕಥೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಆಗಿಲ್ಲ. ಇನ್ನು, ಜನಪ್ರಿಯ ನಟಿಯರಾದ ತಾರಾ ಸುತಾರಿಯಾ, ಶ್ರುತಿ ಹಾಸನ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಚಿತ್ರತಂಡ ಕಡೆಯಿಂದಲೇ ಅಧಿಕೃತ ಮಾಹಿತಿ ಬರಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇದನ್ನೂ ಓದಿ: 2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ

ಈ ಮೊದಲು ನಟಿ ಕರೀನಾ ಕಪೂರ್​ ಅವರ ಹೆಸರು ಕೂಡ ‘ಟಾಕ್ಸಿಕ್​’ ತಂಡದ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಸಂಭಾವನೆ ವಿಚಾರಕ್ಕೆ ಹೊಂದಾಣಿಕೆ ಆದಾಗ ಕಾರಣ ಅವರು ಈ ಸಿನಿಮಾ ತಂಡದಿಂದ ಹೊರನಡೆದರು ಎಂಬ ಸುದ್ದಿ ಕೇಳಿಬಂತು. ಆದರೆ ಚಿತ್ರತಂಡದ ಯಾರೂ ಕೂಡ ಈ ಬಗ್ಗೆ ಮಾತನಾಡಿಲ್ಲ. ಕರೀನಾ ಕಪೂರ್​ ಕೂಡ ಪ್ರತಿಕ್ರಿಯಿಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:00 pm, Tue, 23 July 24

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ