AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ

‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ಯಶಸ್ಸಿನಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ಬಂದಿತ್ತು. ಆದರೆ 2024ರಲ್ಲಿ ಚಂದನವನ ಮಂಕಾಗಿದೆ. ಐಎಂಡಿಬಿ ಪ್ರಕಟ ಮಾಡಿರುವ ಟಾಪ್​ 10 ಬಹುನಿರೀಕ್ಷಿತ ಹಾಗೂ ಅತಿ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಸ್ಥಾನ ಸಿಕ್ಕಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ
2024ರ ಸಿನಿಮಾಗಳ ಪೋಸ್ಟರ್​
ಮದನ್​ ಕುಮಾರ್​
|

Updated on: Jul 23, 2024 | 5:48 PM

Share

2024ರಲ್ಲಿ ಕನ್ನಡ ಚಿತ್ರರಂಗ ಸೊರಗಿದೆ. ಅಂಕಿ-ಅಂಶಗಳಿಂದಲೂ ಈ ಮಾತು ಸಾಬೀತಾಗುತ್ತಿದೆ. ಕನ್ನಡದ ಸಿನಿಮಾಗಳಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಗುತ್ತಿಲ್ಲ. ಇನ್ನುಳಿದ ಭಾಷೆಯ ಸಿನಿಮಾಗಳ ಎದುರು ಪೈಪೋಟಿ ನೀಡುವಲ್ಲಿ ಸ್ಯಾಂಡಲ್​ವುಡ್​ ಸಿನಿಮಾಗಳು ಕಷ್ಟಪಡುತ್ತಿವೆ. 2024ರಲ್ಲಿ ಅರ್ಧ ವರ್ಷ ಕಳೆದುಹೋಗಿದೆ. ಈವರೆಗೆ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಜನಪ್ರಿಯ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ರಿಲೀಸ್​ ಮಾಡಿದೆ. ಹಾಗೆಯೇ, ಮುಂಬರುವ ತಿಂಗಳಲ್ಲಿ ರಿಲೀಸ್​ಗೆ ಸಿದ್ಧವಾಗಿರುವ 10 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಕೂಡ ಅನಾವರಣ ಮಾಡಲಾಗಿದೆ.

2024ರ ಜನವರಿ 1ರಿಂದ ಜುಲೈ 10ರವರೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ ಟಾಪ್​ 10 ಸಿನಿಮಾಗಳ ಪಟ್ಟಿ ಹೀಗಿದೆ. ಐಎಂಡಿವಿ ವೆಬ್​ಸೈಟ್​ನಲ್ಲಿ ಈ ಸಿನಿಮಾಗಳು ಪಡೆದ ವೀವ್ಸ್​ ಮತ್ತು ರೇಟಿಂಗ್​ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ ಎಂಬುದು ನಿರಾಸೆ ಮೂಡಿಸಿದೆ.

1. ಕಲ್ಕಿ 2898 ಎಡಿ 2. ಮಂಜುಮೇಲ್​ ಬಾಯ್ಸ್​ 3. ಫೈಟರ್​ 4. ಹನುಮಾನ್​ 5. ಶೈತಾನ್​ 6. ಲಾಪತಾ ಲೇಡೀಸ್​ 7. ಆರ್ಟಿಕಲ್ 370 8. ಪ್ರೇಮಲು 9. ಆವೇಶಂ 10. ಮುಂಜ್ಯ

ಇದನ್ನೂ ಓದಿ: ‘ಐಎಂಡಿಬಿ ಟಾಪ್ 100’ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್​; ಎಷ್ಟನೇ ಸ್ಥಾನ?

ಈ ವರ್ಷ ಡಿಸೆಂಬರ್​ ತನಕ ಬಿಡುಗಡೆ ಆಗಲಿರುವ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಟಾಪ್​ 10 ಚಿತ್ರಗಳ ಪಟ್ಟಿಯನ್ನು ಕೂಡ ಐಎಂಡಿಬಿ ರಿಲೀಸ್​ ಮಾಡಿದೆ. ಇದರಲ್ಲಿಯೂ ಕೂಡ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ. ಈ ವಿಚಾರದಲ್ಲಿ ಚಂದನವನದ ಸಿನಿಮಾಗಳಿಗೆ ಹಿನ್ನಡೆ ಆಗಿದೆ.

1. ಪುಷ್ಪ 2 2. ದೇವರ ಪಾರ್ಟ್​ 1 3. ವೆಲ್​ಕಮ್​ ಟು ದಿ ಜಂಗಲ್​ 4. ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ 5.ಕಂಗುವ 6. ಸಿಂಗಂ ಅಗೇನ್​ 7. ಭೂಲ್​ಭುಲಯ್ಯ 3 8. ತಂಗಲಾನ್ 9. ಔರೋಮೆ ಕಹಾ ಧಮ್ ಥಾ 10. ಸ್ತ್ರೀ 2

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!