AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ ಜತೆ ನಿರ್ದೇಶಕ ಅಟ್ಲಿ ಮಾತುಕತೆ ವಿಡಿಯೋ ವೈರಲ್​; ನೆಟ್ಟಿಗರದ್ದು ಬಗೆಬಗೆ ಲೆಕ್ಕಾಚಾರ

ಯಶ್​ ಅವರು ಏನೇ ಮಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ‘ಕೆಜಿಎಫ್​ 2’ ಯಶಸ್ಸಿನ ಬಳಿಕ ಅವರಿಗೆ ಅಷ್ಟು ಖ್ಯಾತಿ ಸಿಕ್ಕಿದೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆಗೆ ಯಶ್​ ಅವರು ಹಾಜರಿ ಹಾಕಿದ್ದಾರೆ. ಈ ವೇಳೆ ಅವರು ಎರಡು ಕಾರಣದಿಂದ ಗಮನ ಸೆಳೆದಿದ್ದಾರೆ. ಹೊಸ ಗೆಟಪ್​ ಒಂದು ಕಾರಣವಾದರೆ, ನಿರ್ದೇಶಕ ಅಟ್ಲಿ ಜೊತೆ ಮಾತಾಡಿದ್ದು ಎರಡನೇ ಕಾರಣ.

ಯಶ್​ ಜತೆ ನಿರ್ದೇಶಕ ಅಟ್ಲಿ ಮಾತುಕತೆ ವಿಡಿಯೋ ವೈರಲ್​; ನೆಟ್ಟಿಗರದ್ದು ಬಗೆಬಗೆ ಲೆಕ್ಕಾಚಾರ
ಅಟ್ಲಿ, ಯಶ್​
ಮದನ್​ ಕುಮಾರ್​
|

Updated on: Jul 14, 2024 | 5:58 PM

Share

ಮುಕೇಶ್ ಅಂಬಾನಿ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಮದುವೆ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ. ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ನೂರಾರು ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಇಂಥ ಹೈಪ್ರೊಫೈಲ್​ ಅತಿಥಿಗಳ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡ ನಟ ಎಂದರೆ ಅದು ಯಶ್​ ಮಾತ್ರ! ಅಂಬಾನಿ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳ ವಿಡಿಯೋಗಳು ವೈರಲ್​ ಆಗುತ್ತಿವೆ. ಮದುವೆಯಲ್ಲಿ ನಟ ಯಶ್​ ಹಾಗೂ ನಿರ್ದೇಶಕ ಅಟ್ಲಿ ಅವರು ಕೆಲ ಸಮಯ ಒಟ್ಟಿಗೆ ಕುಳಿತು ಮಾತುಕಥೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಕೆಜಿಎಫ್​ 2’ ಸಿನಿಮಾದಿಂದ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದರು. ಭಾರಿ ಜನಪ್ರಿಯತೆ ಹೊಂದಿರುವ ಅವರನ್ನು ಅಂಬಾನಿ ಕುಟುಂಬದವರು ಆಹ್ವಾನಿಸಿದ್ದಾರೆ. ಈ ವೇಳೆ ಯಶ್​ ಅವರ ಹೊಸ ಲುಕ್​ ಗಮನ ಸೆಳೆದಿದೆ. ಹೊಸ ಗೆಟಪ್​ ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕಿಂತಲೂ ಹೆಚ್ಚು ಚರ್ಚೆ ಆಗುತ್ತಿರುವುದು ಅಟ್ಲಿ ಜೊತೆಗಿನ ಮಾತುಕತೆ.

ಇದನ್ನೂ ಓದಿ: ಅಂಬಾನಿಯಿಂದ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಉಡುಗೊರೆ

ನಿರ್ದೇಶಕ ಅಟ್ಲಿ ಅವರು ತಮಿಳಿನಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ಮಾಡಿ ತಮ್ಮ ಛಾಪು ಮೂಡಿಸಿದ್ದಾರೆ. ಬಾಲಿವುಡ್​ನಲ್ಲಿ ‘ಜವಾನ್​’ ಸಿನಿಮಾಗೆ ನಿರ್ದೇಶನ ಮಾಡಿ ದೊಡ್ಡ ಮಟ್ಟದ ಯಶಸ್ಸು ಗಳಿಸಿರುವ ಅವರಿಗೆ ಈಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಅವರ ಜೊತೆ ಯಶ್​ ಕುಳಿತು ಮಾತನಾಡಿದ ವಿಡಿಯೋ ವೈರಲ್​ ಆಗಿದೆ. ಈ ಸಣ್ಣ ಮಾತುಕಥೆಯ ನಡುವೆಯೇ ಅಟ್ಲಿ ಅವರು ಯಶ್​ಗೆ ಕಥೆಯ ಎಳೆಯೊಂದನ್ನು ಹೇಳಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.

ಯಶ್​ ಈಗ ‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಲು ಇನ್ನೂ ಸಮಯ ಇದೆ. ಅದರ ನಡುವೆ ಅವರು ಮುಂದಿನ ಸಿನಿಮಾಗಳ ಲೈನ್​ಅಪ್​ ಬಗ್ಗೆಯೂ ಆಲೋಚಿಸಿರುತ್ತಾರೆ. ಆ ದೃಷ್ಟಿಯಿಂದ ಅಟ್ಲಿ ಮತ್ತು ಯಶ್​ ನಡುವಿನ ಮಾತುಕಥೆಯ ಈ ವಿಡಿಯೋಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಅಟ್ಲಿ ಬೇರೆ ಬೇರೆ ಸಿನಿಮಾಗಳ ಕಥೆಯನ್ನು ಮಿಕ್ಸ್​ ಮಾಡಿ ಹೊಸ ಸಿನಿಮಾ ಮಾಡ್ತಾರೆ. ಅವರ ಜೊತೆ ಯಶ್​ ಕೈ ಜೋಡಿಸುವುದು ಬೇಡ’ ಎಂಬ ಕಮೆಂಟ್​ ಕೂಡ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More