AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲೂ ವ್ಯತ್ಯಯ, ಜೈಲು ವೈದ್ಯರಿಂದ ಚಿಕಿತ್ಸೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ರ ಆರೋಗ್ಯದಲ್ಲಿ ಏರುಪೇರಾಗಿತ್ತು. ಜೈಲಿನಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆದಿದ್ದ ದರ್ಶನ್ ಈಗ ತುಸು ಗುಣಮುಖರಾಗಿದ್ದಾರೆ. ಅದೇ ಪ್ರಕರಣದ ಆರೋಪಿ ಪವಿತ್ರಾ ಗೌಡಗೂ ಅನಾರೋಗ್ಯ ಉಂಟಾಗಿದೆ.

ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲೂ ವ್ಯತ್ಯಯ, ಜೈಲು ವೈದ್ಯರಿಂದ ಚಿಕಿತ್ಸೆ
ಮಂಜುನಾಥ ಸಿ.
|

Updated on: Jul 14, 2024 | 1:54 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅಜೀರ್ಣ, ಭೇದಿ, ಕೈ ನೋವು, ನಿದ್ರಾಹೀನತೆ ಮುಂತಾದ ಸಮಸ್ಯೆಗಳನ್ನು ದರ್ಶನ್ ಎದುರಿಸಿದ್ದರು. ಜೈಲಿನಲ್ಲೇ ವೈದ್ಯರಿಂದ ಚಿಕಿತ್ಸೆಯನ್ನೂ ಸಹ ಪಡೆದುಕೊಂಡಿದ್ದರು. ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡಗೂ ಸಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಅವರಿಗೂ ಸಹ ಆರೋಗ್ಯ ಸಮಸ್ಯೆ ಎದುರಾಗಿದೆ. ಅವರೂ ಸಹ ಜೈಲಿನಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ದರ್ಶನ್ ರೀತಿಯಲ್ಲಿಯೇ ಪವಿತ್ರಾ ಗೌಡಗೂ ಸಹ ಜೈಲಿನ ಆಹಾರ ದೇಹಕ್ಕೆ ಸರಿಹೊಂದುತ್ತಿಲ್ಲವಂತೆ. ಅಲ್ಲದೆ ಮಾನಸಿಕವಾಗಿ ಪವಿತ್ರಾ ಗೌಡ ಕುಗ್ಗಿದ್ದಾರೆ. ಹೀಗಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆ ವಾರ್ಡ್ ನಲ್ಲಿ ಜನರಲ್ ಚೆಕಪ್ ಮಾಡಿಸಿದ್ದಾರೆ. ಸದ್ಯ ಪವಿತ್ರಾ ಗೌಡ ಅವರ ಆರೋಗ್ಯ ಸುಧಾರಣೆ ಕಂಡಿದ್ದು, ಉಪಹಾರದ ಬದಲಿಗೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುವಂತೆ ಸಲಹೆ ನೀಡಿದ್ದಾರಂತೆ ವೈದ್ಯರು.

ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸುವ ಮುನ್ನವೂ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಪೊಲೀಸರು ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಾಗಲೂ ಸಹ ಎರಡು ಬಾರಿ ಬಿಪಿ ಲೋ ಹಾಗೂ ಇತರೆ ಸಮಸ್ಯೆಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈಗ ಜೈಲಿನಲ್ಲಿಯೂ ಪವಿತ್ರಾಗೆ ಅನಾರೋಗ್ಯ ಮುಂದುವರೆದಿದೆ.

ಹೊರಗೆ ಐಷಾರಾಮಿ ಜೀವನ ನಡೆಸುತ್ತಿದ್ದರು ಪವಿತ್ರಾ ಗೌಡ. ಮೂರಂತಸ್ತಿನ ಮನೆ, ಹಲವು ಕಾರುಗಳು, ದುಬಾರಿ ಬಟ್ಟೆಗಳು, ಮಲಗಲು ದೊಡ್ಡ ಮಂಚ, ಮೃದುವಾದ ಬೆಡ್, ಐಶಾರಾಮಿ ಹೋಟೆಲ್​ಗಳಲ್ಲಿ ಊಟ-ಪಾರ್ಟಿಗಳನ್ನು ಮಾಡಿಕೊಂಡು ಆರಾಮದಿಂದ್ದ ಇದ್ದರು. ಆದರೆ ಈಗ ಜೈಲಿನಲ್ಲಿ ಅವರು ಕೊಟ್ಟ ಊಟ ತಿನ್ನುತ್ತಾ, ಚಾಪೆ ಮೇಲೆ ಮಲಗುತ್ತಿದ್ದಾರೆ. ಕಳ್ಳತನ ,ಕೊಲೆ ಕೇಸ್, ಗಾಂಜಾ ಪ್ರಕರಣಗಳಲ್ಲಿ ಬಂಧನವಾಗಿರೋ ಮಹಿಳೆಯರ ಜೊತೆ ಒಂದೇ ಬ್ಯಾರಕ್​ನಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದೈಹಿಕ, ಮಾನಸಿಕ ಆರೋಗ್ಯಕ್ಕೆ ಜೈಲಿನಲ್ಲಿ ಯೋಗದ ಮೊರೆ ಹೋದ ದರ್ಶನ್

ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗಾಗಿ ಬ್ಯಾರಕ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೆಚ್ಚು ಆರೋಪಿಗಳು ಇರುವ ಬ್ಯಾರಕ್ ನಿಂದ ಕೆಲವು ಆರೋಪಿಗಳನ್ನು ಬೇರೆಡೆ ಕಳಿಸಲಾಗಿದೆ. ಒಟ್ಟೊಟ್ಟಿದ್ದ ಆರೋಪಿಗಳನ್ನು ಬದಲಾವಣೆ ಮಾಡಿ ಬ್ಯಾರಕ್​ಗಳಲ್ಲಿ ಇಬ್ಬರು, ಮೂವರಂತೆ ಬದಲಾವಣೆ ಮಾಡಲಾಗಿದೆ. ದರ್ಶನ್ ಮತ್ತು ತಂಡದಿಂದ ಬೇರೆ ಕೈದಿಗಳಿಂದ ಸಮಸ್ಯೆ ಆಗದಂತೆ, ಹಾಗೂ ಬೇರೆ ಕೈದಿಗಳಿಂದ ದರ್ಶನ್​ಗೆ ಸಮಸ್ಯೆ ಆಗದಂತೆ ಈ ವ್ಯವಸ್ಥೆಯನ್ನು ಜೈಲಿನ ಅಧಿಕಾರಿಗಳು ಮಾಡಿದ್ದಾರೆ. ಜುಲೈ 18ರ ವರೆಗೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 18ರ ಬಳಿಕವೂ ಬಂಧನ ಮುಂದುವರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ