AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಜೈಲಿನಲ್ಲಿ ಯೋಗದ ಮೊರೆ ಹೋದ ದರ್ಶನ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವ ದರ್ಶನ್ ತೂಗುದೀಪ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುಗ್ಗಿದ್ದು ಇದಕ್ಕಾಗಿ ದರ್ಶನ್ ಜೈಲಿನಲ್ಲಿ ಯೋಗಾಭ್ಯಾಸದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಜೈಲಿನಲ್ಲಿ ಯೋಗದ ಮೊರೆ ಹೋದ ದರ್ಶನ್
ಮಂಜುನಾಥ ಸಿ.
|

Updated on:Jul 13, 2024 | 6:32 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿರುವ ನಟ ದರ್ಶನ್​, ಜೈಲಿನ ವಾತಾವರಣದಲ್ಲಿ ಕೆಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊರಗೆ ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್​ಗೆ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಜೈಲುವಾಸ, ದರ್ಶನ್ ಅವರನ್ನು ದೈಹಿಕ ಹಾಗೂ ತುಸು ಮಾನಸಿಕವಾಗಿಯೂ ಕುಗ್ಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಜೈಲು ಊಟ ಪಚನವಾಗದೆ ಭೇದಿ ಸಮಸ್ಯೆ ಹಾಗೂ ನಿದ್ರಾಹೀನತೆ ಅನುಭವಿಸಿದ್ದ ದರ್ಶನ್ ತೂಕ ಕಳೆದುಕೊಂಡಿದ್ದರು. ಮಾನಸಿಕವಾಗಿಯೂ ಕುಗ್ಗಿರುವ ದರ್ಶನ್, ಈಗ ಯೋಗದ ಮೊರೆ ಹೋಗಿದ್ದಾರೆ.

ರೇಣುಕಾ ಸ್ವಾಮಿ ಪ್ರಕರಣದಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆ, ಜೈಲಿನಲ್ಲಿ ಕಾಡುತ್ತಿರುವ ಒಂಟಿತನ, ತನ್ನ ಕುಟುಂಬ, ಸ್ನೇಹತರಿಂದ ದೂರಾಗಿ ಒಂಟಿಯಾಗಿ ಬದುಕಬೇಕಾದ ಅನಿವಾರ್ಯತೆ ಎಲ್ಲವುದರಿಂದ ಮಾನಸಿಕವಾಗಿ ಕುಗ್ಗಿರುವ ದರ್ಶನ್, ಮಾನಸಿಕ ಹಾಗೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಜೈಲಿನಲ್ಲಿ ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಪ್ರತಿದಿನ ಎರಡು ಬಾರಿ ದರ್ಶನ್ ಜೈಲಿನಲ್ಲಿಯೇ ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ದರ್ಶನ್​ರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ಜೈಲಾಧಿಕಾರಿಗಳಿಗೂ ಇದು ನಿರಾಳತೆ ಮೂಡಿಸಿದೆ.

ದರ್ಶನ್, ಜೈಲಿನಲ್ಲಿ ಬಹುತೇಕ ಒಂಟಿಯಾಗಿಯೇ ಸಮಯ ದೂಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಹಕೈದಿಗಳ ಸಹವಾಸದಿಂದಲೂ ದೂರವೇ ಇದ್ದಾರೆ. ಒಂಟಿತನ ಕಳೆಯಲು ಕೆಲ ಪುಸ್ತಕಗಳನ್ನು ಜೈಲಿನ ಗ್ರಂಥಾಲಯದಿಂದ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ದರ್ಶನ್​ರಿಗೆ ದುಗುಡ ಗಾಡುತ್ತಿದೆ ಎನ್ನಲಾಗುತ್ತಿದ್ದು, ಈ ಪ್ರಕರಣದಲ್ಲಿ ತಮಗೆ ಆಗಬಹುದಾದ ಶಿಕ್ಷೆ ಇನ್ನಿತರೆ ವಿಷಯಗಳ ಬಗ್ಗೆ ಅವರು ಚಿಂತಿತರಾಗಿದ್ದಾರಂತೆ.

ಇದನ್ನೂ ಓದಿ:ಚಾಮುಂಡೇಶ್ವರಿ ಸನ್ನಿಧಿಗೆ ದರ್ಶನ್ ಫೋಟೋ ಹೊತ್ತು ತಂದ ಮಹಿಳೆ, ವಾಪಸ್ ಕಳಿಸಿದ ಪೊಲೀಸ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ನಟ ದರ್ಶನ್ ಜೈಲು ಪಾಲಾಗಿದ್ದರು. ಈ ಪ್ರಕರಣದಲ್ಲಿ ಅವರು ಎರಡನೇ ಆರೋಪಿ. ಮೊದಲ ಆರೋಪಿ ದರ್ಶನ್​ರ ಪ್ರೇಯಸಿ ಪವಿತ್ರಾ ಗೌಡ. ಚಿತ್ರದುರ್ಗದ ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ಆರೋಪದಲ್ಲಿ ಆತನ ಅಪಹರಣ ಮಾಡಿ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿರುವ ಆರೋಪ ದರ್ಶನ್ ಹಾಗೂ ಈ ಪ್ರಕರಣದ ಒಟ್ಟು 17 ಆರೋಪಗಳ ಮೇಲೆ ಇದೆ. ಪ್ರಕರಣದಲ್ಲಿ ಮೂವರು ಸಾಕ್ಷಿಗಳಾಗಿ ಬದಲಾಗಿದ್ದು ನ್ಯಾಯಾಧೀಶರ ಮುಂದೆ ಹೇಳಿಕೆ ಸಹ ದಾಖಲಿಸಿದ್ದಾರೆ. ಜುಲೈ 18ಕ್ಕೆ ದರ್ಶನ್​ರ ಎರಡನೇ ಅವಧಿಯ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಆದರೆ ಬಂಧನ ಅವಧಿ ಮುಂದುವರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Sat, 13 July 24