ಚಾಮುಂಡೇಶ್ವರಿ ಸನ್ನಿಧಿಗೆ ದರ್ಶನ್ ಫೋಟೋ ಹೊತ್ತು ತಂದ ಮಹಿಳೆ, ವಾಪಸ್ ಕಳಿಸಿದ ಪೊಲೀಸ್
ಜನರ ಮತ್ತು ಮಾಧ್ಯಮದ ಕೆಮೆರಾಗಳ ಗಮನ ಸೆಳೆಯುವ ಉದ್ದೇಶವೇನಾದರೂ ದರ್ಶನ್ ಅಭಿಮಾನಿಗಳಿಗಿತ್ತೇ ಎಂಬ ಸಂಶಯ ಹುಟ್ಟದಿರದು. ದೇವಸ್ಥಾನಗಳಿಗೆ ಎಲ್ಲರೂ ಹೋಗುತ್ತಾರೆ, ಅದರೆ ಯಾರೂ ತಮ್ಮೊಂದಿಗೆ ಫೋಟೋಗಳನ್ನು ಒಯ್ಯಲ್ಲ. ಅರ್ಚನೆ ಮಾಡಿಸಬೇಕಾದರೆ ಹೆಸರು ಹೇಳಿದರೆ ಸಾಕು.
ಮೈಸೂರು: ಇದು ಅಭಿಮಾನದ ಅತಿರೇಕ. ನಿನ್ನೆ ಆಷಾಢ ಮಾಸದ ಮೊದಲ ಶುಕ್ರವಾರವಾಗಿತ್ತು ಮತ್ತು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನೆರವೇರಿದವು. ತಾಯಿಯ ಸನ್ನಿಧಿಯಲ್ಲಿ ಅಸಂಖ್ಯಾತ ಭಕ್ತಗಣ. ಅವರಲ್ಲೊಬ್ಬ ಮಹಿಳೆ ಮತ್ತು ಅವರ ಜೊತೆ ಬಂದಿದ್ದ ಇನ್ನೊಬ್ಬ ಮಹಿಳೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ನ ಕಟ್ಟಾ ಅಭಿಮಾನಿಗಳು. ಅವರ ಅಭಿಮಾನ ಪ್ರೀತಿಯಿಂದ ಯಾರಿಗೂ ಸಮಸ್ಯೆಯಿಲ್ಲ ಅದು ಬೇರೆ ವಿಚಾರ. ಆದರೆ ಈ ಅಭಿಮಾನಿಗಳು ದರ್ಶನ್ ನ ದೊಡ್ಡ ಪೋರ್ಟೇರ್ಟ್ ಹೊತ್ತು ಚಾಮುಂಡಿ ಸನ್ನಿಧಿಗೆ ಬಂದಿದ್ದರು. ತಮ್ಮ ನೆಚ್ಚಿನ ನಟನ ಹೆಸರಲ್ಲಿ ಅರ್ಚನೆ ಮತ್ತು ವಿಶೇಷ ಪೂಜೆ ಮಾಡಿಸುವ ಉಮೇದಿ ಅವರಿಗಿತ್ತು ಅನಿಸುತ್ತದೆ. ಅದರೆ ಅದಕ್ಕೆ ನಟನ ಭಾವಚಿತ್ರದ ಅವಶ್ಯಕತೆ ಖಂಡಿತ ಇರಲಿಲ್ಲ. ನಮ್ಮ ದೇವ ದೇವತೆಯರಿಗೆ ಭುವಿಯ ಜನರೆಲ್ಲ ಗೊತ್ತು, ಹೌದು ತಾನೆ? ದೇವಸ್ಥಾನದ ಬಳಿ ಯಾವುದೇ ರೀತಿಯ ಗಲಾಟೆ ನಡೆಯದಂತೆ ನಿಗಾ ವಹಿಸಲು ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಅದನ್ನೇ ಮಹಿಳೆಯರಿಗೆ ಹೇಳಿದ್ದು. ಫೋಟೋ ಒಳಗಡೆ ಒಯ್ಯುವಂತಿಲ್ಲ ಅಂದಾಗ ಭಕ್ತೆಯರು ವಾದಕ್ಕಿಳಿದರು. ಆದರೆ, ಪೊಲೀಸ್ ಫೋಟೋ ಒಯ್ಯಕೂಡದು, ನಿಮ್ಮ ಹಠ ಸಾಧಿಸುವುದಾದರೆ ವಾಪಸ್ಸು ಹೋಗಿ ಅಂದಾಗ ಮಹಿಳೆಯರು ವಿಧಿಯಲ್ಲದೆ ಹಿಂದಕ್ಕೆ ಹೋದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ರನ್ನು ಭೇಟಿಯಾಗಲು ಕೇಂದ್ರ ಕಾರಾಗೃಹಕ್ಕೆ ಬಂದ ಬಾಲ್ಯದ ಗೆಳೆಯ ಶಿವಕುಮಾರ್