ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಹೆಚ್ಚಿದ ಪೊಲೀಸ್ ತಪಾಸಣೆ, ಮದ್ಯದ ಬಾಟಲಿಗಳು ಸೀಜ್!

ಮೋಜು ಮಸ್ತಿ ಮಾಡಲು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸರೀನಾ ಅಂತ ಪ್ರಜ್ಞಾವಂತ ಪ್ರವಾಸಿಗರು ಯೋಚಿಸಬೇಕಿದೆ. ತಾಣಗಳಲ್ಲಿ ಕುಡಿದು, ತಿಂದು ಲಿಕ್ಕರ್ ಬಾಟಲಿ ಮತ್ತು ಆಹಾರ ಪೊಟ್ಟಣಗಳ ಪಾಲಿಥೀನ್ ಚೀಲ ಮತ್ತು ಅಲ್ಯೂಮಿನಿಯಂ ಫಾಯ್ಲ್ ಗಳನ್ನು ಮನಬಂದಂತೆ ಬಿಸಾಡಿ ಸುತ್ತಲ ಪರಿಸರವನ್ನು ಹಾಳು ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ

ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಹೆಚ್ಚಿದ ಪೊಲೀಸ್ ತಪಾಸಣೆ, ಮದ್ಯದ ಬಾಟಲಿಗಳು ಸೀಜ್!
|

Updated on: Jul 13, 2024 | 1:23 PM

ಚಿಕ್ಕಮಗಳೂರು: ವೀಕೆಂಡ್ ಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಅವರು ಬಂದು ಹೋಗುವುದರಿಂದ ಸಮಸ್ಯೆ ಯಾರಿಗೂ ಇಲ್ಲ; ಅದರೆ ಅವರು ಕಾರು ಮತ್ತು ಬೈಕ್​ಗಳಲ್ಲಿ ತಮ್ಮೊಂದಿಗೆ ಹೊತ್ತು ತರುವ ಮದ್ಯದ ಬಾಟಲಿ, ತಿಂಡಿ ಪೊಟ್ಟಣ, ಪ್ಲಾಸ್ಟಿಕ್ ಚೀಲಗಳು ಮತ್ತು ಸಿಗರೇಟು ಪ್ಯಾಕ್ ಗಳ ಬಗ್ಗೆ ಸ್ಥಳೀಯರಿಗೆ ಖಂಡಿತವಾಗಿಯೂ ಅಭ್ಯಂತರ ಆಕ್ಷೇಪಣೆಗಳಿವೆ. ಅವರು ಜಿಲ್ಲಾ ಪೊಲೀಸ್ ಗೆ ಸಲ್ಲಿಸಿರುವ ದೂರಿನ ಪ್ರಕಾರ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ಮತ್ತು ದತ್ತ ಪೀಠಕ್ಕೆ ಬರುವ ಜನ ಪರಿಸರವನ್ನು ಹೊಲಸೆಬ್ಬಿಸುತ್ತಿದ್ದಾರೆ. ಹಾಗಾಗಿ ಈ ಭಾಗಕ್ಕೆ ಜನ ಮದ್ಯದ ಬಾಟಲಿ ಮತ್ತು ಇತರ ವಸ್ತುಗಳನ್ನು ಒಯ್ಯದಂತೆ ತಡೆಯಲು ಚಂದ್ರದ್ರೋಣ ಪರ್ವತದ ಕೈಮರ ಚೆಕ್ ಪೋಸ್ಟ್ ಬಳಿ ಪೊಲೀಸರು ಪ್ರವಾಸಿಗರ ವಾಹನಗಳ ತಪಾಸಣೆ ನಡೆಸುತ್ತಿದಿದ್ದಾರೆ. ಕಾರು ಮತ್ತು ರೂಮುಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು ದೃಶ್ಯಗಳಲ್ಲಿ ಗಮನಿಸಬಹುದು.

.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಹಾರದಿಂದ ಲಾಂಗ್ ಟ್ರಿಪ್ ಮೋಜು ಮಸ್ತಿ ಹಾಳಾಗಬಾರದೆಂದರೆ, ಈ ವಿಷಯಗಳು ನೆಪನಪಿನಲ್ಲಿರಲಿ

Follow us