AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುಳಿದ ವರ್ಗಗಳನ್ನು ಗುರಾಣಿಯಾಗಿ ಬಳಸಿದ ಸಿದ್ದರಾಮಯ್ಯ ರಾಜಕೀಯ ಬದುಕಿನ ಅಂತ್ಯದಲ್ಲಿ ಅಪಮಾನಕ್ಕೀಡಾಗದಿರಲಿ: ಕುಮಾರಸ್ವಾಮಿ

ಹಿಂದುಳಿದ ವರ್ಗಗಳನ್ನು ಗುರಾಣಿಯಾಗಿ ಬಳಸಿದ ಸಿದ್ದರಾಮಯ್ಯ ರಾಜಕೀಯ ಬದುಕಿನ ಅಂತ್ಯದಲ್ಲಿ ಅಪಮಾನಕ್ಕೀಡಾಗದಿರಲಿ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2024 | 2:14 PM

Share

ಗ್ಯಾರಂಟಿ ಯೋಜನೆಗಳು ಬೊಕ್ಕಸವನ್ನು ಬರಿದು ಮಾಡಿವೆ, ಅಭಿವೃದ್ಧಿ ಕೆಲಸಗಳಿಗಾಗಿ ದುಡ್ಡು ಉಳಿದಿಲ್ಲ, ಅವರ ಸಲಹೆಗಾರನಾಗಿರುವ ಕಾರಣಕ್ಕೆ ತನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿ ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ನಗರದ ಜೆಡಿಎಸ್ ಕಚೇರಿಯಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತೀವ್ರ ಸ್ವರೂಪದ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಬಿ ನಾಗೇಂದ್ರ ವಿರುದ್ಧ ಗಂಭೀರ ಆರೋಪಗಳಿದ್ದರೂ ಅವರನ್ನು ಬಂಧಿಸಲು ಈಡಿ ಬರಬೇಕಾಯಿತು, ಇದು ಸಿದ್ದರಾಮಯ್ಯನವರ ಆಡಳಿತದಲ್ಲಿ ಕಾಣುತ್ತಿರುವ ಪಾರದರ್ಶಕತೆ, ಹಿಂದುಳಿದ ವರ್ಗಗಳ ಉದ್ಧಾರಕ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದ ಅವರು ಆ ವರ್ಗದ ಜನರಿಗಾಗಿ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಹಿಂದುಳಿದ ಜನರ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ರಾಜಕೀಯ ಬದುಕಿನ ಕೊನೆಯ ಹಂತದಲ್ಲಿರುವ ಸಿದ್ದರಾಮಯ್ಯ ನಿರ್ಗಮಿಸುವಾಗ ಜನರಿಂದ ಛೀ ಥೂ ಅನಿಸಿಕೊಳ್ಳುವುದು ಬೇಡ ಅಂತ ಹೇಳಿದ ಕುಮಾರಸ್ವಾಮಿ, ಹಿಂದುಳಿದ ವರ್ಗಗಳನ್ನು ಕಳೆದ ಒಂದೂ ಕಾಲು ವರ್ಷಗಳಿಂದ ಗುರಾಣಿಯಾಗಿ ಬಳಸಿ ಅಧಿಕಾರ ನಡೆಸಿದ ಅವರು ಇನ್ನು ಮುಂದಾದರೂ ಸ್ವಚ್ಛ ಆಡಳಿತ ನೀಡಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಸಿದ್ದರಾಮಯ್ಯ ಪತ್ನಿಗೆ ಬಂದ ಜಮೀನು ಸರ್ಕಾರಿ ಭೂಮಿ -ಹೆಚ್​ಡಿ ಕುಮಾರಸ್ವಾಮಿ