Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಕಸದ ಟೆಂಡರ್ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಲು ಹೊರಟಿದೆ -ಹೆಚ್​ಡಿ ಕುಮಾರಸ್ವಾಮಿ

ಸರ್ಕಾರ ಕಸದ ಟೆಂಡರ್ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಲು ಹೊರಟಿದೆ -ಹೆಚ್​ಡಿ ಕುಮಾರಸ್ವಾಮಿ

Sunil MH
| Updated By: ಆಯೇಷಾ ಬಾನು

Updated on: Jul 13, 2024 | 2:58 PM

ಕಸದ್ದು ಟೆಂಡರ್ ಕೊಟ್ಟು ಕೋಟಿ ಲೂಟಿ ಮಾಡಲು ಹೊರಟಿದ್ದಾರೆ. ಖಾಸಗಿ ಕಂಪನಿಯಿಂದ ಸಾವಿರಾರು ಕೋಟಿ ಲೂಟಿ ಮಾಡಲು ಯತ್ನ ನಡೆದಿದೆ ಎಂದು ಬೆಂಗಳೂರಿನಲ್ಲಿ ಹೆಚ್​ಡಿ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಕಸ ಎತ್ತಲು ಗುತ್ತಿಗೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು, ಜುಲೈ.13: ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್​ಡಿ ಕುಮಾರಸ್ವಾಮಿಯವರು (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಕಸ ಎತ್ತಲು ಎಷ್ಟು ಪರ್ಸೆಂಟೇಜ್ ಹೊಡೆಯುತ್ತಿದ್ದಾರೆ ಗೊತ್ತಾ? ಖಾಸಗಿ ಕಂಪನಿ ಮೂಲಕ 45 ಸಾವಿರ ಕೋಟಿ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಕಸ ಎತ್ತಲು ಗುತ್ತಿಗೆ ಕೊಡುತ್ತಿದ್ದಾರೆ. 30 ವರ್ಷಕ್ಕೆ ಗುತ್ತಿಗೆ ಕೊಡುವುದಕ್ಕೆ ಪ್ಲ್ಯಾನ್​ ಮಾಡುತ್ತಿದ್ದಾರೆ. ಈ ಮೂಲಕ 10-15 ಕೋಟಿ ಲೂಟಿ ಹೊಡೆಯುವ ಪ್ಲ್ಯಾನ್ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದೇ ವೇಳೆ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿ H.D.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇವರು ಬೆಂಗಳೂರು ದಕ್ಷಿಣ ಅಂತೆ ನಾವು ಹಾಸನದವರಂತೆ. ನಾನು ಸತ್ತರೆ ಮಣ್ಣಿಗೆ ಹೋಗೋದು ರಾಮನಗರದಲ್ಲಿ. ನೈಸ್​ ಅವ್ಯವಹಾರದ್ದು 1-2 ಅಂದ್ರೆ ದಾಖಲೆ ಬಿಡುಗಡೆ ಮಾಡಬಹುದು. ಕಣ್ಣುಮುಂದೆ ಇರುವ ದಾಖಲೆಗಳ ತನಿಖೆ ಮಾಡುವುದಕ್ಕೆ ಆಗಲ್ಲ. ಕಸದ್ದು ಟೆಂಡರ್ ಕೊಟ್ಟು ಕೋಟಿ ಲೂಟಿ ಮಾಡಲು ಹೊರಟಿದ್ದಾರೆ. ಖಾಸಗಿ ಕಂಪನಿಯಿಂದ ಸಾವಿರಾರು ಕೋಟಿ ಲೂಟಿ ಮಾಡಲು ಯತ್ನ ನಡೆದಿದೆ ಎಂದು ಆಕ್ರೋಶ ಹೊರ ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ