Flipkart Payment: ಫ್ಲಿಪ್ಕಾರ್ಟ್ನಲ್ಲಿ ಬಂತು ಬಿಲ್ ಪೇಮೆಂಟ್ ವ್ಯವಸ್ಥೆ
ಫ್ಲಿಪ್ಕಾರ್ಟ್ ಆ್ಯಪ್ ಮೂಲಕ ಗ್ರಾಹಕರು ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜ್, ಲ್ಯಾಂಡ್ ಲೈನ್ ಬಿಲ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್ಪೇಯ್ಡ್ ಬಿಲ್ಗಳನ್ನು ಪಾವತಿಸಬಹುದು.
ದೇಶದ ಪ್ರಮುಖ ಇ ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಯುಪಿಐ ಪಾವತಿ ಪರಿಚಯಿಸಿದ ಬಳಿಕ ಈಗ ಬಿಲ್ ಪಾವತಿ ಸೇವೆಯನ್ನು ಗ್ರಾಹಕರಿಗಾಗಿ ಒದಗಿಸುತ್ತಿದೆ. ಫ್ಲಿಪ್ಕಾರ್ಟ್ ಆ್ಯಪ್ ಮೂಲಕ ಗ್ರಾಹಕರು ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜ್, ಲ್ಯಾಂಡ್ ಲೈನ್ ಬಿಲ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್ಪೇಯ್ಡ್ ಬಿಲ್ಗಳನ್ನು ಪಾವತಿಸಬಹುದು. ಭಾರತ್ ಬಿಲ್ ಪೇಮೆಂಟ್ಸ್ ಸಿಸ್ಟಂ ಮೂಲಕ ಈ ವ್ಯವಸ್ಥೆಯನ್ನು ಫ್ಲಿಪ್ಕಾರ್ಟ್ ಒದಗಿಸುತ್ತಿದೆ. ವ್ಯಾಲೆಟ್, ಯುಪಿಐ ಮತ್ತು ವಿವಿಧ ರೀತಿಯ ಡಿಜಿಟಲ್ ಪೇಮೆಂಟ್ ಜನಪ್ರಿಯವಾಗುತ್ತಿರುವುದು ಮತ್ತು ಹೆಚ್ಚಿನ ಜನರು ನಗದು ರಹಿತ ಸೇವೆಯನ್ನೇ ಬಯಸುತ್ತಿರುವುದರಿಂದ ಫ್ಲಿಪ್ಕಾರ್ಟ್ ಶಾಪಿಂಗ್ ಜತೆಗೆ ಯುಪಿಐ, ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ.
Latest Videos