AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗನವಾಡಿ ಕೇಂದ್ರಗಳು ಶೀಘ್ರದಲ್ಲೇ ಪ್ರೀ-ಮಾಂಟೆಸರಿ ಶಾಲೆಗಳಾಗಲಿವೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅಂಗನವಾಡಿ ಕೇಂದ್ರಗಳು ಶೀಘ್ರದಲ್ಲೇ ಪ್ರೀ-ಮಾಂಟೆಸರಿ ಶಾಲೆಗಳಾಗಲಿವೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2024 | 3:06 PM

ಕೇವಲ ಅಂಗನವಾಡಿ ಕೇಂದ್ರಗಳಿಗೆ ಕಾಯಕಲ್ಪ ನೀಡಿದರೆ ಸಾಲದು, ಅವುಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಯಕರ್ತೆ ಮತ್ತು ಸಹಾಯಕಿಯರ ಬದುಕು ಹಸನಾಗಿಸುವ ಕಡೆ ಸಚಿವೆ ಗಮನ ಹರಿಸಬೇಕಿದೆ. ಅವರು ವರ್ಷಕ್ಕೆ ಎರಡೆರಡು ಬಾರಿ ಬೆಂಗಳೂರಿಗೆ ಬಂದು ಗೌರವಧನ ಹೆಚ್ಚಿಸಿ ಅಂತ ಧರಣಿ ನಡೆಸಿದರೂ ಪ್ರತೀ ಸಲ ಬರೀ ಆಶ್ವಾಸನೆ ಮಾತ್ರ ಸಿಗುತ್ತಿದೆ!

ಮಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳುವ ಪ್ರಕಾರ ಶೀಘ್ರದಲ್ಲಿ ಅಂಗನವಾಡಿಗಳನ್ನು ಪ್ರೀ-ಮಾಂಟೆಸ್ಸರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವೆ, ರಾಜ್ಯದಲ್ಲಿರುವ 70,000 ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 15,000 ಪದವೀಧರು ಮತ್ತು ಸುಮಾರು 2,000 ಸ್ನಾತಕೋತ್ತರ ಪದವೀಧರರು ಕೆಲಸ ಮಾಡುತ್ತಿದ್ದಾರೆ. ಅವರ ವಿದ್ಯಾರ್ಹತೆಯನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 20,000 ಅಂಗನವಾಡಿ ಕೇಂದ್ರಗಳನ್ನು ಪೈಲಟ್ ಪ್ರಾಜೆಕ್ಟ್ ಆಗಿ ಪ್ರೀ-ಮಾಂಟೆಸ್ಸರಿ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು. ವಿಷಯವನ್ನು ಈಗಾಗಲೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಅನ್ನಪೂರ್ಣದೇವಿ ಮತ್ತು ಆಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಅವರೆಲ್ಲ ತುಂಬಾ ಇಂಪ್ರೆಸ್ ಆಗಿರುವರೆಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಗೃಹಲಕ್ಷ್ಮಿ ಯೋಜನೆ ಹಣ ಕೊಂಚ ತಡವಾದರೂ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ