AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಯೋಜನೆ ಹಣ ಕೊಂಚ ತಡವಾದರೂ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಗೃಹಲಕ್ಷ್ಮಿ ಯೋಜನೆ ಹಣ ಕೊಂಚ ತಡವಾದರೂ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 06, 2024 | 2:56 PM

ಮುಡಾ ಅಕ್ರಮ ಸೈಟು ಹಂಚಿಕೆ ಹಗರಣದ ಬಗ್ಗೆ ಏನು ಹೇಳುತ್ತೀರಿ ಅಂತ ಪತ್ರಕರ್ತರು ಕೇಳಿದರೆ ಲಕ್ಷ್ಮಿ ಮೇಡಂ ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಅನ್ನುತ್ತಾರೆ. ಅವರು ಹೇಳಿದ್ದು ಅಚ್ಚರಿ ಮೂಡಿಸುತ್ತದೆ ಯಾಕೆಂದರೆ, ಮುಡಾ ಹಗರಣದ ಬಗ್ಗೆ ಈಗ ಬೇರೆ ಗ್ರಹಗಳ ಜೀವಿಗಳಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವೆಯಾಗಿರುವ ಲಕ್ಷ್ಮಿ ಅವರಿಗೆ ಇನ್ನೂ ಗೊತ್ತಾಗದಿರೋದು ಆಶ್ಚರ್ಯವಲ್ಲದೆ ಮತ್ತೇನು?

ಬಳ್ಳಾರಿ: ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ಸಿಗೋದು ತಡವಾಗುತ್ತಿದೆ 2-3 ತಿಂಗಳಿಂದ ಸಿಕ್ಕಿಲ್ಲ ಅಂತ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದಾಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೋಪಗೊಂಡರು. ಬ್ರದರ್, ನೀವು ಮಹಿಳಾ ಕಲ್ಯಾಣ ಇಲಾಖೆ ಮಂತ್ರಿ ಜೊತೆ ಮಾತಾಡುತ್ತಿದ್ದೀರಿ ಅಂತ ಗೊತ್ತಿರಲಿ, 2-3 ತಿಂಗಳುಗಳಿಂದ ಹಣ ಸಿಕ್ಕಿಲ್ಲ ಅನ್ನೋದು ಸುಳ್ಳು, ಮೇ 5 ರವರೆಗೆ ಹಣ ಡಿಬಿಟಿ ಮೂಲಕ ರವಾನೆಯಾಗಿದೆ, ಜೂನ್ ತಿಂಗಳದ್ದು ಡಿಬಿಟಿ ಎಲ್ಲ ರೆಡಿಯಾಗಿದೆ, ಇನ್ನೆರಡು ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಲಕ್ಷ್ಮಿ ಹೇಳಿದರು. ಎಸ್​ಸಿ/ಎಸ್​ಟಿ ನಿಗಮದ ಹಣ ದುರುಪಯೋಗವಾಗುತ್ತಿರುವ ಮತ್ತು ಅವರಿಗಾಗಿ ಮೀಸಲಿಟ್ಟಿರುವ ಹಣ ಬೇರೆಯದಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಕೇಳಿದಾಗ ಸಚಿವೆ, ಹಾಗೇನೂ ಇಲ್ಲ, ಹಣ ದುರುಪಯೋವಾಗುತ್ತಿದೆ ಎಂದು ಹೇಳುತ್ತಿರುವವರು 2013-18 ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಎಸ್​ಸಿ/ ಎಸ್​ಟಿ ಅಭಿವೃದ್ಧಿ ನಿಗಮಗಳಿಗೆ ಮೀಸಲಿಡುತ್ತಿದ್ದ ಮೊತ್ತವನ್ನು ಕಡಿಮೆ ಮಾಡಿದ್ದು ಯಾಕೆ ಅನ್ನೋದನ್ನು ಮೊದಲು ಹೇಳಲಿ, ತಮ್ಮ ಸರ್ಕಾರ ಎಸ್​ಸಿ/ಎಸ್​ಟಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿಲ್ಲ, ಗ್ಯಾರಂಟಿ ಯೋಜನೆಗಳ ಹಣ ಮೊದಲು ಅವರಿಗೆ ರವಾನಿಸಲಾಗುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆ ಆ ಯವ್ವ ಏನೇನೋ ಮಾತಾಡ್ತಾರೆ ಎಂದು ಟೀಕಿಸಿದ ರಮೇಶ್ ಜಾರಕಿಹೊಳಿ