ಜನ ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಿಸಿ ಅಂತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ

ಎಸ್​ಪಿ, ಡಿಸಿಪಿ, ಐಜಿ ಮತ್ತು ಪೊಲೀಸ್ ಕಮೀಶನರ್ ಱಂಕಿನ ಅಧಿಕಾರಿಗಳು ಪ್ರತಿದಿನ ಒಂದು ಠಾಣೆಗೆ ಭೇಟಿ ನೀಡಿ ಅದರ ವ್ಯಾಪ್ತಿಯೊಳಗೆ ಬರುವ ನಿವಾಸಿಗಳ ಜೊತೆ ಮಾತಾಡಬೇಕು ಮತ್ತು ಅವರ ದೂರು ದುಮ್ಮಾನಗಳನ್ನು ಆಲಿಸಬೇಕು ಎಂದು ಮುಖ್ಯಮಂತ್ರಿಯವರು ಪೊಲೀಸ್ ಅಧಿಕಾರಿಗಳಿಗೆ ಹೇಳಿರುವುದು ಸ್ವಾಗತಾರ್ಹ. ಆದರೆ ಅಧಿಕಾರಿಗಳು ಇದನ್ನು ಪಾಲಿಸುವರೆ? ಅವರನ್ನು ಮಾನಿಟರ್ ಮಾಡೋರು ಯಾರು?

ಜನ ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಿಸಿ ಅಂತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
|

Updated on: Jul 06, 2024 | 4:27 PM

ಬೆಂಗಳೂರು: ನಗರದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಪ್ರತಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯದ ಪೊಲೀಸ್ ವ್ಯವಸ್ಥೆ ಜನರ ಆಸ್ತಿಪಾಸ್ತಿ ರಕ್ಷಿಸಲು, ಅವರ ಮಾನ ಕಾಪಾಡಲು, ಜನ ನಿರ್ಭಿತಿಯಿಂದ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಕಟಿಬದ್ಧರಾಗಿರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು. ಕರ್ತವ್ಯಲೋಪವೆಸಗಿದರೆ, ಬೇಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿದರೆ ತಮ್ಮ ಸರ್ಕಾರ ಸಹಿಸಲ್ಲ, ಅದರೆ ಚೆನ್ನಾಗಿ ಕೆಲಸ ಮಾಡುವ ಪೊಲೀಸರನ್ನು ಸರ್ಕಾರ ಖಂಡಿತವಾಗ್ಲೂ ಮಾನ್ಯ ಮಾಡುತ್ತದೆ, ಭೇಷ್ ಅನ್ನುತ್ತದೆ ಎಂದು ಸಿಎಂ ಹೇಳಿದರು. ಪೊಲೀಸ್ ವ್ಯವಸ್ಥೆಯಲ್ಲ್ಲಿರುವರು ಯಾವುದೇ ಹುದ್ದೆಯಲ್ಲಿರಲಿ; ಯಾವ ಕಾರಣಕ್ಕೂ ರಿಯಲ್ ನಡೆಸುವವರೊಂದಿಗೆ ಶಾಮೀಲಾಗಬಾರದು ಮತ್ತು ಖುದ್ದು ಆ ವ್ಯವಹಾರ ನಡೆಸಬಾರದು, ಯಾರಾದರೂ ಶಾಮೀಲಾಗಿದ್ದು ಗೊತ್ತಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಾವು ಮತ್ತು ತಮ್ಮೊಂದಿಗಿದ್ದ ಗೃಹ ಸಚಿವ ಜಿ ಪರಮೇಶ್ವರ್ ಅವರಿಂದ ಎಚ್ಚರಿಸಲಾಗಿದೆ ಎಂದು ಸಿಎಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ವಾಲ್ಮೀಕಿ ನಿಗಮದ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಪಾಟೀಲ್ ಯತ್ನಾಳ್

Follow us