ಕೆಪಿಸಿಸಿ ಕಚೇರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ 4 ಪೌರ ಕಾರ್ಮಿಕರಿಗೆ ಮನೆ ನೀಡಲು ಹೇಳಿದರು
ಇವತ್ತು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಜನಸ್ಪಂದನ ಕಾರ್ಯಕ್ರಮ ಪೂರ್ತಿ ಮುಗಿಯುವವರೆಗೆ ಮುಖ್ಯಮಂತ್ರಿ ಕೂತಿರಲಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ನೂಕು ನುಗ್ಗಲು ಹೆಚ್ಚಾದ ನಂತರ ಅವರು ಅಲ್ಲಿಂದ ತೆರಳಿದರಂತೆ. ಅಂದರೆ ಫೋಟೋ ಆಪ್ ಗಾಗಿ ಕಾರ್ಯಕ್ರಮವನ್ನು ನಡೆಸಲಾಯಿತೇ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಸ್ಪಂದನ ಕಾರ್ಯಕ್ರಮ ನಡೆಸಿದರು. ಕೆಪಿಸಿಸಿ ಕಚೇರಿಗೆ ಪ್ರತ್ಯೇಕವಾಗಿ ಪೌರ ಕಾರ್ಮಿಕರಿರೋದು ಇವತ್ತೇ ಗೊತ್ತಾಗಿದ್ದು. ನಾಲ್ಕು ಮಹಿಳಾ ಕಾರ್ಮಿಕರು ಮುಖ್ಯಮಂತ್ರಿಯವರ ಎದುರು ಕೈ ಜೋಡಿಸಿ ವಿನೀತರಾಗಿ ನಿಂತಿರುವುದನ್ನು ನೋಡಬಹುದು. ಅವರಿಗೆ ಮನೆಗಳಿಲ್ಲವಂತೆ, ಒದಗಿಸಿ ಕೊಡಿ ಅಂತ ಕೇಳುತ್ತಿದ್ದಾರೆ. ಫಾರ್ ಎ ಚೇಂಜ್, ಆಯ್ತು ನೋಡೋಣ ಅಂತ ಹೇಳುವ ಬದಲು ಮುಖ್ಯಮಂತ್ರಿಯವರು ಯಾರಿಗೋ ಫೋನಾಯಿಸಿ ಆ ನಾಲ್ಕು ಮಹಿಳೆಯರಿಗೆ ಮನೆಗಳ ವ್ಯವಸ್ಥೆ ಮಾಡುವಂತೆ ಹೇಳುತ್ತಾರೆ. ಆ ಕಡೆಯಿಂದ ಓಕೆ ಅಂತ ಉತ್ತರ ಸಿಕ್ಕ ಬಳಿಕ ಸಿದ್ದರಾಮಯ್ಯ ನಿಮ್ಮ ಕೆಲಸವಾಗುತ್ತದೆ ಅಂತ ಹೇಳುತ್ತಾರೆ. ಅವರಿಗೆಲ್ಲ ಮನೆ ಯಾವಾಗ ಸಿಕ್ಕೀತು ಅಂತ ನಮಗಂತೂ ಗೊತ್ತಾಗಲಿಲ್ಲ. ನಮಗೆ ಹೀಗೆ ಸಂಶಯ ಹುಟ್ಟಲು ಕಾರಣವಿದೆ. ಜುಲೈ 10 ರಂದು ಚಾಮರಾಜನಗರದಲ್ಲಿ ರೈತರು ಸಿದ್ದರಾಮಯ್ಯನವರಿಗೆ ನೀಡಿದ್ದ ಮನವಿ ಪತ್ರಗಳು ಮರುದಿನ ಬೆಳಗ್ಗೆ ಕಸದ ತೊಟ್ಟಿಯಲ್ಲಿ ಸಿಕ್ಕಿದ್ದವು! ಸಿಎಂ ಎಡಭಾಗದಲ್ಲಿ ಸಾವಿರಾರು ಅರ್ಜಿಗಳ ಕಂತೆ ಕಾಣುತ್ತಿದೆ!!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಧಾನಸಭೆಯಲ್ಲಿ ಮೆಜಾರಿಟಿ ಇರೋ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ, ವಿ ಪ ಸದಸ್ಯ