ಡೆಂಗ್ಯೂ ಸಂಕಷ್ಟದಲ್ಲೂ ಜಿಮ್ಸ್ ವೈದ್ಯರ ನಿರ್ಲಕ್ಷ್ಯ; ಲಕ್ಷ ಲಕ್ಷ ಸಂಬಳ ಪಡೆದು ಡ್ಯೂಟಿಗೆ ಚಕ್ಕರ್

ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಗದಗದಲ್ಲಿ ಮೊನ್ನೆಯಷ್ಟೇ 11 ವರ್ಷದ ಬಾಲಕಿ ಡೆಂಗ್ಯೂಗೆ ಸಾವನ್ನಪ್ಪಿತ್ತು. ಈ ಕುರಿತು ಮೃತ ಪಾಲಕರು ಮಾತನಾಡಿ, ‘ಸಕಾಲಕ್ಕೆ ಹಿರಿಯ ವೈದ್ಯರು ಚಿಕಿತ್ಸೆ ನೀಡಿದ್ರೆ ನಮ್ಮ ಮಗು ಬದುಕುತ್ತಿತ್ತು ಎಂದು ತಮ್ಮ ಆಳಲನ್ನು ತೋಡಿಕೊಂಡಿದ್ದರು, ಹೀಗಿದ್ದರೂ ಇಲ್ಲಿನ ವೈದ್ಯರು ನಿರ್ಲಕ್ಷ್ಯ ತೋರುತ್ತಿರುವುದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಡೆಂಗ್ಯೂ ಸಂಕಷ್ಟದಲ್ಲೂ ಜಿಮ್ಸ್ ವೈದ್ಯರ ನಿರ್ಲಕ್ಷ್ಯ; ಲಕ್ಷ ಲಕ್ಷ ಸಂಬಳ ಪಡೆದು ಡ್ಯೂಟಿಗೆ ಚಕ್ಕರ್
ಡೆಂಗ್ಯೂ ಸಂಕಷ್ಟದಲ್ಲೂ ಜಿಮ್ಸ್ ವೈದ್ಯರ ನಿರ್ಲಕ್ಷ್ಯ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2024 | 4:07 PM

ಗದಗ, ಜು.13: ಡೆಂಗ್ಯೂ ಸಂಕಷ್ಟದಲ್ಲೂ ಜಿಮ್ಸ್ ವೈದ್ಯರು(Gyms Docter) ನಿರ್ಲಕ್ಷ್ಯ ತೋರುತ್ತಿದೆ. ಗದಗ(Gadag) ಜಿಮ್ಸ್ ನ ಮಕ್ಕಳ ವಿಭಾಗದಲ್ಲಿ ಬೆಳಗ್ಗೆ 9 ಗಂಟೆಗೆ ಹಾಜರಿ ಇರಬೇಕಿದ್ದ ಹಿರಿಯ ವೈದ್ಯರು, 10.25 ಆದರೂ ನಾಪತ್ತೆಯಾಗಿದ್ದಾರೆ. ಇತ್ತ ಲಕ್ಷಾಂತರ ರೂಪಾಯಿ ಸಂಬಳ ಪಡೆದು ಡ್ಯೂಟಿಗೆ ಚೆಕ್ಕರ್ ಹಾಕುತ್ತಿದ್ದು, ಹಿರಿಯ ವೈದ್ಯರಿಗಾಗಿ ಮಕ್ಕಳ ಸಮೇತ ಪಾಲಕರು ಪರದಾಟ ನಡೆಸಿದ್ದಾರೆ. ಈ ಹಿನ್ನಲೆ ಪಿಜಿ ವಿದ್ಯಾರ್ಥಿಗಳು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಜಿಮ್ಸ್ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಇನ್ನು ಈ ಕುರಿತು ಮಾತನಾಡಿದ ಪೋಷಕರೊಬ್ಬರು, ‘ನಾಲ್ಕು ದಿನಗಳ ಹಿಂದೆ ಹಿರಿಯ ವೈದ್ಯರು ಇಲ್ಲದೇ ನಮ್ಮ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದರು. ಹೌದು, ಪಿ‘ಜಿ ವೈದ್ಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದರು, ಸಕಾಲಕ್ಕೆ ಹಿರಿಯ ವೈದ್ಯರು ಚಿಕಿತ್ಸೆ ನೀಡಿದ್ರೆ ನಮ್ಮ ಮಗು ಬದುಕುತ್ತಿತ್ತು ಎಂದು ಪಾಲಕರು ತಮ್ಮ ಆಳಲನ್ನು ತೋಡಿಕೊಂಡರು. ಈ ಘಟನೆ ನಡೆದರೂ ಜಿಮ್ಸ್ನಲ್ಲಿ ವೈದ್ಯರ ಬೇಜವಾಬ್ದಾರಿ ಮುಂದುವರೆದಿದೆ.

ಇದನ್ನೂ ಓದಿ:ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ, ಯಾವ ಸಮಸ್ಯೆ ಇಲ್ಲವೆನ್ನುತ್ತಿರು ಜಿಮ್ಸ್: ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಜಿಮ್ಸ್​ನ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ

ಈ ಜಿಮ್ಸ್​ನ ವೈದ್ಯರ ಮೇಲೆ ಮತ್ತೊಂದು ಆರೋಪ ಕೂಡ ಕೇಳಿಬಂದಿದೆ. ಇಲ್ಲಿನ ಬಹುತೇಕ ವೈದ್ಯರು ಜಿಮ್ಸ್​ಗೆ ಚಕ್ಕರ ಹಾಕಿ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರಂತೆ ಹೀಗಾಗಿ ಇಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜಿಮ್ಸ್​ನಲ್ಲಿ ಯಡವಟ್ಟು ಸಾಕಷ್ಟು ನಡೆದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಜನರು ಕಿಡಿಕಾರಿದ್ದಾರೆ.

ರೋಣ ಪಟ್ಟಣದ 11 ವರ್ಷದ ಬಾಲಕಿ ಡೆಂಗ್ಯೂಗೆ ಬಲಿ

ನಿನ್ನೆ ಗದಗ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಮಗು ಬಲಿಯಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಣ ಪಟ್ಟಣದ 11 ವರ್ಷದ ಬಾಲಕಿ ಪ್ರಾರ್ಥನಾ ಸಾವನ್ನಪ್ಪಿದ್ದಳು. ಮೂರ್ನಾಲ್ಕು ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ವೈದ್ಯರು ಡೆಂಗ್ಯೂ ಅಂತ ಹೇಳಿದ್ದಾರೆ. ಈಗ ಸಾವಿನ ಬಳಿಕ ಬೇರೆ ಕಾರಣ ಹೇಳ್ತಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದರು. ಇಷ್ಟೆಲ್ಲ ಆದರೂ ವೈದ್ಯರು ನಿರ್ಲಕ್ಷ್ಯ ತೋರುತ್ತಿರುವುದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ