ಗದಗ ಜಿಮ್ಸ್​ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವ: ಸ್ನಾನಕ್ಕೆ ಬಿಸಿ ನೀರಿಲ್ಲದೆ ಪರದಾಡುತ್ತಿರುವ ಬಾಣಂತಿಯರು

ಗದಗ ಜಿಲ್ಲಾ ಆಸ್ಪತ್ರೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಇದೀಗ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಬಾಣಂತಿಯರಿಗೆ ಸ್ನಾನಕ್ಕೆ ಬಿಸಿ ನೀರು ಕೊಟ್ಟಿಲ್ಲವೆಂದು ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow us
| Updated By: ವಿವೇಕ ಬಿರಾದಾರ

Updated on:Jan 12, 2024 | 9:20 AM

ಗದಗ, ಜನವರಿ 12: ಗದಗ (Gadag) ಜಿಲ್ಲಾ ಆಸ್ಪತ್ರೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಇದೀಗ ಜಿಮ್ಸ್ ಆಸ್ಪತ್ರೆಯ (Gims Hospital) ಸಿಬ್ಬಂದಿ, ಬಾಣಂತಿಯರಿಗೆ ಸ್ನಾನಕ್ಕೆ ಬಿಸಿ ನೀರು (Hot Water) ಕೊಟ್ಟಿಲ್ಲವೆಂದು ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಸ್ನಾನಕ್ಕೆ ಬಿಸಿ ನೀರು ನೀಡದ ಹಿನ್ನೆಲೆಯಲ್ಲಿ ಬಾಣಂತಿಯರ ಸಂಬಂಧಿಕರು ಹಣ ಕೊಟ್ಟು ಹೊಟೇಲ್​ಗಳಿಂದ ಬಿಸಿ ನೀರು ತರುತ್ತಿದ್ದಾರೆ. ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ‌ ನೀಡಿದರೂ ರೋಗಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಬಿಸಿ ನೀರು ಸ್ನಾನ ಮಾಡದಿದ್ದರೇ ಬಾಣಂತಿಯರ ಮೈ ಬಿಗಿದು ಜೀವಕ್ಕೆ ತೊಂದರೆಯಾಗುತ್ತೆ ಅಂತ ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.

ಇನ್ನು ಕುಡಿಯುವ ನೀರಿಗೂ ರೋಗಿಗಳು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ರೋಗಿಗಳ ಸಂಬಂಧಿಕರು 3, 4, 5 ಅಂತಸ್ಥಿನಿಂದ ಕೆಳಗೆ ಇಳಿದು ಬಂದು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತುಂಬಿಕೊಂಡು ಹೋಗಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:15 am, Fri, 12 January 24