ಗದಗ: ಅಯೋಧ್ಯೆ ರಾಮ ಮಂದಿರಕ್ಕೂ ಗದಗ ಶಿವಾನಂದ ಮಠಕ್ಕೂ ಇದೆ ನಂಟು!
ನಂದೀಶ್ವರ ಶ್ರೀಗಳು ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಶಿವಾನಂದ ಮಠದಿಂದಲೂ 1992 ರಲ್ಲಿ ಇಟ್ಟಿಗೆ ರವಾನೆ ಮಾಡಲಾಗಿತ್ತು. ಶಿವಾನಂದ ಮಠದ 3ನೇ ಜಗದ್ಗುರು ನಂದೀಶ್ವರ ಶ್ರೀಗಳಿಂದ ಇಟ್ಟಿಗೆ ರವಾನೆಯಾಗಿತ್ತು. ಮಠದ ಶಿವಾನಂದ ಶ್ರೀಗಳ ಗದ್ದುಗೆ ಬಳಿ ಇಟ್ಟಿಗೆ ಇಟ್ಟು ಪೂಜೆ ಮಾಡಿ ಅಯೋಧ್ಯೆಗೆ ರವಾನಿಸಲಾಗಿತ್ತು.
ಗದಗ, ಜನವರಿ 11: ಅಯೋಧ್ಯೆಯ ರಾಮ ಮಂದಿರಕ್ಕೂ ಗದಗ ಶಿವಾನಂದ ಮಠಕ್ಕೂ ಬಹಳ ಹಿಂದಿನಿಂದಲೇ ನಂಟು ಇದೆ. ನಂದೀಶ್ವರ ಶ್ರೀಗಳು ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿದ್ದರು. 1992ರಲ್ಲೇ ಅಯೋಧ್ಯೆಗೆ ಶಿವಾನಂದ ಮಠದಿಂದಲೂ ಇಟ್ಟಿಗೆ ರವಾನಿಸಲಾಗಿತ್ತು. ಈ ವಿಚಾರವಾಗಿ ಇದೀಗ ಗದಗ ಶಿವಾನಂದ ಮಠದ ಕಿರಿಯ ಶ್ರೀ ಸದಾಶಿವಾನಂದ ಭಾರತಿ ‘ಟಿವಿ9’ಗೆ ಮಾಹಿತಿ ನೀಡಿದ್ದು, ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿಯೂ ಹೇಳಿದ್ದಾರೆ.
ನಂದೀಶ್ವರ ಶ್ರೀಗಳು ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಶಿವಾನಂದ ಮಠದಿಂದಲೂ 1992 ರಲ್ಲಿ ಇಟ್ಟಿಗೆ ರವಾನೆ ಮಾಡಲಾಗಿತ್ತು. ಶಿವಾನಂದ ಮಠದ 3ನೇ ಜಗದ್ಗುರು ನಂದೀಶ್ವರ ಶ್ರೀಗಳಿಂದ ಇಟ್ಟಿಗೆ ರವಾನೆಯಾಗಿತ್ತು. ಮಠದ ಶಿವಾನಂದ ಶ್ರೀಗಳ ಗದ್ದುಗೆ ಬಳಿ ಇಟ್ಟಿಗೆ ಇಟ್ಟು ಪೂಜೆ ಮಾಡಿ ಅಯೋಧ್ಯೆಗೆ ರವಾನಿಸಲಾಗಿತ್ತು. ಅಯೋಧ್ಯೆಯ ಆ ನಂಟಿನಿಂದ ಇದೀಗ ಆಹ್ವಾನ ಬಂದಿದೆ ಎಂದು ಸದಾಶಿವಾನಂದ ಭಾರತಿ ತಿಳಿಸಿದ್ದಾರೆ.
ಅಯೋಧ್ಯೆಯಿಂದ ಆಹ್ವಾನ ಬಂದಿದ್ದು ಖುಷಿ ತಂದಿದೆ. ಅಯೋಧ್ಯೆಗೆ ಹೋಗುತ್ತಾ ಇದ್ದೇನೆ. ಸಂಭ್ರಮದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಬಹಳ ಸಂತೋಷದ ವಿಚಾರ. ಯಾವುದೇ ಘಟನೆ ಇದ್ದರೂ ರಾಜಕೀಯ ದೃಷ್ಟಿಕೋನದಿಂದ ನೋಡುವುದು ರಾಜಕಾರಣಿಗಳು. ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಅನಕೂಲ ದೃಷ್ಟಿಯಿಂದ ಅವರು ನೋಡುತ್ತಾರೆ, ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ನಮ್ಮ ಪ್ರಕಾರ, ದೇಶದಲ್ಲಿ ದೊಡ್ಡ ದೇವಸ್ಥಾನ ನಿರ್ಮಾಣ ಆಗುತ್ತಿದೆ. ಆ ದೇವಸ್ಥಾನಕ್ಕೆ ದೊಡ್ಡ ಇತಿಹಾವಿದೆ. ಕವಿಗಳು, ಸಾಹಿತಿಗಳು, ವಿದೇಶಿ ಪತ್ರಕರ್ತರು, ಪ್ರವಾಸಿಗರು ದೇವಸ್ಥಾನ, ಕಟ್ಟಡದ ಬಗ್ಗೆ ಸಾಕಷ್ಟು ಬರೆದಿಟ್ಟಿದ್ದಾರೆ. ಎಲ್ಲ ದಾಖಲೆ ಅನುಸರಿಸಿ ಸುಪ್ರೀಂ ಕೋರ್ಟ್ ತೀರ್ಪು ಬಂತು. ಈ ತೀರ್ಪಿನ ಹಿನ್ನಲೆಯಲ್ಲಿ ರಾಮ ಮಂದಿರ ನಿರ್ಮಾಣ ಆಗ್ತಿದೆ. ವಿಶೇಷವಾಗಿ ಭಾರತದಲ್ಲಿ ರಾಮ ಪೂಜ್ಯ. ನಾವು ಈಗ ಹಳ್ಳಿ ಹಳ್ಳಿಯಲ್ಲಿ ಹೋಗಿ ನೋಡಿದರೆ ಪ್ರತಿ ಹಳ್ಳಿಯಲ್ಲಿಯೂ ರಾಮಲಿಂಗ ದೇವಸ್ಥಾನ ಇರುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮ ಮಠಕ್ಕೆ ಇನ್ನೂ ಅಪರೂಪ ಸಂಬಂಧ ಇದೆ. ಎಲ್ಲಿ ತಾಯಿ ಶಬರಿ ರಾಮನಿಗಾಗಿ ಕಾದಳೋ ಅದೇ ಜಾಗದಲ್ಲಿ ನಮ್ಮ ಮಠದ ಶಿವಾನಂದ ಶ್ರೀಗಳು ಅನುಷ್ಠಾನ ಮಾಡಿದರು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಲ್ಯಾಣ ರಾಮನ 1200 ವರ್ಷಗಳ ಪುರಾತನ ದೇವಾಲಯ: ನಿತ್ಯವೂ ಕನ್ನಡದಲ್ಲೇ ಮಂತ್ರಘೋಷ
10-11 ವರ್ಷಗಳ ಕಾಲ ಶಬರಿ ಕೊಳ್ಳದಲ್ಲಿ ಅನುಷ್ಠಾನ ಮಾಡಿ ಶಿವಾನಂದ ಶ್ರೀಗಳು ಜಗಜ್ಜನನಿಯ ಸಾಕ್ಷಾತ್ಕಾರ ಮಾಡಿಕೊಂಡರು. ರಾಮ ಕನ್ನಡನಾಡಿಗೆ ಕಾಲಿಟ್ಟ ಅಥಣಿ ತಾಲೂಕಿನಲ್ಲಿ ಉಮಾರಾಮೇಶ್ವರ ದೇವಸ್ಥಾನ ಇದೆ. ಇಲ್ಲಿಂದಲೇ ರಾಜ್ಯಕ್ಕೆ ರಾಮನ ಪ್ರಥಮ ಪಾದ ಸ್ಪರ್ಷ ಆಗಿದೆ. ರಾಜ್ಯದಿಂದ ವಾಪಸ್ ಹೋಗಿದ್ದು ಮೊಳಕಾಲ್ಮುರು ಬಳಿಯ ಜಟಂಗಿರಾಮೇಶ್ವ ದೇವಸ್ಥಾನದಿಂದ ಅನ್ನೋ ಪ್ರತೀತಿ ಇದೆ. ಸಿದ್ದೇಶ್ವರ ಶ್ರೀಗಳು ಈಗ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು. ವಿಜಯಪುರದ ಆಶ್ರಮದಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಬಗ್ಗೆ ಪ್ರವಚನ ಕೊಡಿಸಿದ್ದರು ಎಂದು ಸದಾಶಿವಾನಂದ ಭಾರತಿ ನೆನಪಿಸಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Thu, 11 January 24