ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ, ಯಾವ ಸಮಸ್ಯೆ ಇಲ್ಲವೆನ್ನುತ್ತಿರು ಜಿಮ್ಸ್: ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಗದಗ ನಗರದ ಹೊರವಲಯದ ವೈದ್ಯಕೀಯ ಮಹಾವಿದ್ಯಾಲಯಕ್ಕೂ ಬರಗಾಲದ ಬಿಸಿ ತಟ್ಟಿದೆ. ಒಂದು ವಾರದಿಂದ ವಿದ್ಯಾರ್ಥಿಗಳ ಹಾಸ್ಟೆಲ್​​ಗಳಿಗೆ ಸರಿಯಾಗಿ ನೀರು ಪೂರೈಕೆಯಾಗ್ತಿಲ್ಲ. ವಿದ್ಯಾರ್ಥಿಗಳು ನಿತ್ಯದ ಕರ್ಮಕ್ಕೂ ನೀರಿಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ನೀಡಲಾಗಿದೆಯಂತೆ. ಹಾಸ್ಟೆಲ್ಜಿಮ್ಸ್ ನಿರ್ದೇಶಕರು ಮಾತ್ರ ನೀರು ಇದೆ ಎನ್ನುತ್ತಿದ್ದಾರೆ. ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು, ಅಸಲಿಯತ್ತು ಬಯಲಾಗಿದೆ.

ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ, ಯಾವ ಸಮಸ್ಯೆ ಇಲ್ಲವೆನ್ನುತ್ತಿರು ಜಿಮ್ಸ್: ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು
ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ, ಯಾವ ಸಮಸ್ಯೆ ಇಲ್ಲವೆನ್ನುತ್ತಿರು ಜಿಮ್ಸ್: ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: May 17, 2024 | 8:10 PM

ಗದಗ, ಮೇ 17: ರಾಜ್ಯದ ಹಲವು ಕಡೆ ಭಾರಿ ಮಳೆ ಸುರಿಯುತ್ತಿದೆ. ಆದರೆ ಜಿಲ್ಲೆಯಲ್ಲಿ ಹನಿ ನೀರಿಗಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ನಿತ್ಯದ ಕರ್ಮಕ್ಕೂ ಹನಿ ನೀರಿಲ್ಲದೇ (water problem) ಗೋಳಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ನೀಡಲಾಗಿದೆಯಂತೆ. ಆದರೆ ಜಿಮ್ಸ್ (Gyms) ನಿರ್ದೇಶಕರು ಮಾತ್ರ ರಜೆ ನೀಡಿಲ್ಲ. ನೀರಿನ ಸಮಸ್ಯೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ನಿರ್ದೇಶಕರ ಹೇಳಿಕೆ ಬಳಿಕ ಟಿವಿ9 ನಡೆಸಿದ ರಿಯಾಲಿಟಿ ಚೆಕ್​​ನಲ್ಲಿ ಜಿಮ್ಸ್ ಆಡಳಿತದ ಅಸಲಿಯತ್ತು ಬಯಲಾಗಿದೆ. ಹಾಸ್ಟೆಲ್​​ಗಳ ಯಾವ ನಲ್ಲಿಗಳಲ್ಲಿ ಹನಿ ನೀರು ಬರ್ತಾಯಿಲ್ಲ. ನಿರ್ದೇಶಕರ ಸುಳ್ಳು ಕಥೆಗೆ ವಿದ್ಯಾರ್ಥಿಗಳು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗದಗ ನಗರದ ಹೊರವಲಯದ ವೈದ್ಯಕೀಯ ಮಹಾವಿದ್ಯಾಲಯಕ್ಕೂ ಬರಗಾಲದ ಬಿಸಿ ತಟ್ಟಿದೆ. ಒಂದು ವಾರದಿಂದ ವಿದ್ಯಾರ್ಥಿಗಳ ಹಾಸ್ಟೆಲ್​​ಗಳಿಗೆ ಸರಿಯಾಗಿ ನೀರು ಪೂರೈಕೆಯಾಗ್ತಿಲ್ಲ. ವಿದ್ಯಾರ್ಥಿಗಳು ನಿತ್ಯದ ಕರ್ಮಕ್ಕೂ ನೀರಿಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ನೀರಿಲ್ಲ ಅಂತ ವಿದ್ಯಾರ್ಥಿಗಳಿಗೆ ಜಿಮ್ಸ್ ಆಡಳಿತ ರಜೆ ನೀಡಿದೆಯಂತೆ. ಹೀಗಾಗಿ ಹಾಸ್ಟೆಲ್​ನ ಬಹುತೇಕ ರೂಮ್​ಗಳು ಖಾಲಿಯಾಗಿದ್ದು ಬೀಗ ಜಡಿಯಲಾಗಿದೆ.

ಇದನ್ನೂ ಓದಿ: ಸಾವಿರಾರು ಕೋಟಿ ರೂ. ವೆಚ್ಚ ಮಾಡಿದ್ರೂ ರೈತರ ಜಮೀನುಗಳಿಗೆ ಹರಿಯದ ನೀರು; ಅಧಿಕಾರಿಗಳ ವಿರುದ್ಧ ಅನ್ನದಾತರ ಆಕ್ರೊಶ

ತುಂಗಭದ್ರಾ ನದಿ ಖಾಲಿ ಹಿನ್ನೆಲೆ ಅಸಮರ್ಪಕ ನೀರು ಪೂರೈಕೆಯಾಗ್ತಿದೆ. ವಿದ್ಯಾರ್ಥಿಗಳಿ ಮಾತ್ರವಲ್ಲ ವೈದ್ಯರ ಕ್ವಾರ್ಟರ್ಸ್ ಗಳಿಗೂ ನೀರಿನ ಬರ ಎದುರಾಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿಗಳು ನೀರಲ್ಲದೇ ಪರದಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ನೀರು ಕೊಡಬೇಕಾದ ಜಿಮ್ಸ್ ಆಡಳಿತ ಬೇಜವಾಬ್ದಾರಿ ತೋರಿದೆ. ನೀರಿನ ವ್ಯವಸ್ಥೆ ಮಾಡ ನಿರ್ಲಕ್ಷ್ಯ ತೋರಿದೆ ಅಂತ ಜಿಮ್ಸ್ ಆಡಳಿತದ ವಿರುದ್ಧ ಸಿಬ್ಬಂದಿ, ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈದ್ಯರು, ಸಿಬ್ಬಂದಿಗಳು ಸ್ವಂತ ಹಣ ಖರ್ಚು ಮಾಡಿ ಟ್ಯಾಂಕರ್ ‌ಹಾಕಿಸಿಕೊಳ್ತಾಯಿದ್ರೆ, ವಿದ್ಯಾರ್ಥಿಗಳು ಹಣ ಕೊಟ್ಟು ನೀರು ಖರೀದಿ ಮಾಡ್ತಾಯಿದ್ದಾರೆ.

ಟಿರ್ವಿ ರಿಯಾಲಿಟಿ ಚೆಕ್​ನಲ್ಲಿ ಬಯಲಾಯಿತು ಅಸಲಿಯತ್ತು

ನೀರಿಗಾಗಿ ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಪರದಾಡ್ತಾದ್ರೂ ಜಿಮ್ಸ್ ನಿರ್ದೇಶಕರು ಮಾತ್ರ ನೀರಿನ ವ್ಯವಸ್ಥೆ ಮಾಡುವ ಗಂಭೀರತೆ ತೋರುತ್ತಿಲ್ಲ. ಜಿಮ್ಸ್ ವಿದ್ಯಾರ್ಥಿಗಳು, ವೈದ್ಯರ ನೀರಿನ ಗೋಳಾಟ ಕುರಿತು TV9ನಲ್ಲಿ ವರದಿ ಬಳಿಕವೂ ಜಿಮ್ಸ್ ನಿರ್ದೇಶಕರು ಸುಳ್ಳು ಕಥೆ ಕಟ್ಟಿ ಬೇಜವಾಬ್ದಾರಿ ತೋರಿದ್ದಾರೆ. ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಕೇಳಿದ್ರೆ, ಜಿಮ್ಸ್ ನಲ್ಲಿ ನೀರಿನ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳಿಗೆ ರಜೆ ನೀಡಿಲ್ಲ. ತುಂಗಭದ್ರಾ ನೀರಿನ ಸಮಸ್ಯೆ ಇದೆ. ಆದ್ರೆ, ಟ್ಯಾಂಕರಗಳ ಮೂಲಕ ನೀರು ಪೂರೈಕೆ ಮಾಡಲಾಗ್ತಾಯಿದೆ ಎಂದು ಹೇಳಿದ್ದಾರೆ. ಆದ್ರೆ, ನಿರ್ದೇಶಕರ ಹೇಳಿಕೆ ಬಳಿಕ ಹಾಸ್ಟೆಲ್ ನಲ್ಲಿ ಟಿರ್ವಿ ರಿಯಾಲಿಟಿ ಚೆಕ್ ಮಾಡಿದೆ.

ಈ ವೇಳೆ ನಿರ್ದೇಶಕರ ಬೇಜವಾಬ್ದಾರಿಯ ಅಸಲಿ ಮುಖವಾಡ ಬಯಲಾಗಿದೆ. ಹಾಸ್ಟೆಲ್​ನ ಯಾವ ನಲ್ಲಿಗಳಲ್ಲೂ ನೀರು ಬರ್ತಿಲ್ಲ. ಹಾಸ್ಟೆಲ್​ನ ಬಹುತೇಕ ರೂಮ್​ಗಳಿಗೆ ಬೀಗ ಜಡಿಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದ್ದು ಈ ವೇಳೆ ಬಯಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟರು ಜಿಮ್ಸ್ ಆಡಳಿತ ರಿಪೇರಿ ಮಾಡಿಸಿಲ್ಲ ಅಂದ ಸಿಬ್ಬಂದಿ ಅಸಮಾಧಾನ ತೋಡಿಕೊಂಡಿದ್ದಾರೆ. ಸುಳ್ಳು ಹೇಳಿ ನಿರ್ದೇಶರಕರು ಸಿಕ್ಕಿಬಿದ್ದಾರೆ.

ಇದನ್ನೂ ಓದಿ: ಗದಗಿನ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್: ಉಚಿತ ವಿದ್ಯುತ್ ಯೋಜನೆ ವಿರುದ್ಧ ಮಹಿಳೆಯರು ಆಕ್ರೋಶ

ವಾರದಿಂದ ಹಾಸ್ಟೆಲ್​​ಗೆ ಸರಿಯಾಗಿ ನೀರು ಪೂರೈಕೆಯಾಗ್ತಿಲ್ಲ. ಸತ್ಯ ಹೇಳುವ ಬದಲು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ನಿರ್ದೇಶಕರು ಸಿಕ್ಕಾಕಿಕೊಂಡಿದ್ದಾರೆ. ಜಿಮ್ಸ್ ಆಡಳಿತ ಮಂಡಳಿ ವರ್ತನೆಗೆ ಜಿಮ್ಸ್ ವೈದ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದ್ರೂ ವೈದ್ಯಕೀಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಿರ್ದೇಶಕರಿಗೆ ಬಿಸಿ ತಟ್ಟಿಸುವ ಮೂಲಕ ವಿದ್ಯಾರ್ಥಿಗಳು, ವೈದ್ಯರ ಮಸ್ಯೆಗಳಿಗೆ ಮುಕ್ತಿ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ