ಕೃಷಿ ಹೊಂಡದಲ್ಲಿ ಬಿದ್ದು 5 ವರ್ಷದ ಮಗು ಸೇರಿದಂತೆ ಓರ್ವ ಮಹಿಳೆ ಸಾವು
ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಶಾಲೆ ರಜೆ ಹಿನ್ನೆಲೆ ಮನೋಜ್ ದೊಡ್ಡಮ್ಮನ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗದಗ, ಮೇ.05: ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. ಗೀತಾ ಹೆಸರೂರು(34) ಹಾಗೂ ಮನೋಜ್ ಕವಲೂರು(5) ಮೃತರ್ದುದೈವಿಗಳು. ತಂಗಿ ಮಗನ ಜೊತೆ ನೀರು ತರಲು ಹೋಗಿದ್ದಾಗ ಮನೋಜ್ ಕೃಷಿಹೊಂಡಕ್ಕೆ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ರಕ್ಷಣೆಗೆ ಹೋಗಿದ್ದ ಗೀತಾ ಕೂಡ ಸಾವನ್ನಪ್ಪಿದ್ದಾನೆ. ಶಾಲೆ ರಜೆ ಹಿನ್ನೆಲೆ ಮನೋಜ್ ದೊಡ್ಡಮ್ಮನ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು
ಮೈಸೂರು: ಟಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಕೊನೆಯುಸಿರೆಳೆದಿರುವ ಧಾರುಣ ಘಟನೆ ನಡೆದಿದೆ. ರಾಚನಾಯಕ(70) ಸಾವನ್ನಪ್ಪಿದ ವೃದ್ದ. ಮೊನ್ನೆ ಸುರಿದ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಗದ್ದೆಗೆ ನೀರು ಹಾಯಿಸಲು ಹೋಗಿದ್ದಾಗ ಆಕಸ್ಮಾತಾಗಿ ರೈತ ತುಳಿದು ಮೃತರಾಗಿದ್ದಾರೆ. ಈ ಕುರಿತು ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಅಭಿನಯದ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಕಲಾವಿದ ಸಾವು
ಕಾಫಿನಾಡಿನಲ್ಲಿ ಮುಂದುವರಿದ ಒಂಟಿ ಸಲಗದ ದಾಳಿ; ಓರ್ವ ಸಾವು
ಚಿಕ್ಕಮಗಳೂರು: ತಾಲೂಕಿನ ಕೆಸವಿನಹಕ್ಲು ಗ್ರಾಮದಲ್ಲಿ ಒಂಟಿ ಸಲಗ ದಾಳಿಗೆ ಓರ್ವ ಕಾರ್ಮಿಕ ಬಲಿಯಾಗಿದ್ದಾನೆ. ಆನಂದ್ ಪೂಜಾರಿ (60) ಮೃತ ವ್ಯಕ್ತಿ. ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಸಲಗ ದಾಳಿ ಮಾಡಿದೆ. ಇನ್ನು ಕಳೆದ ಒಂದು ವಾರದಿಂದ ಒಂಟಿ ಸಲಗ ಸಂಚಾರ ಮಾಡುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಈ ಕುರಿತು ಅಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Sun, 5 May 24