Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ

ನವದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 175 ಪ್ರಯಾಣಿಕರನ್ನು ಹೊತ್ತು ದೆಹಲಿಯ ಇಂದಿರಾ ಗಾಂಧಿ ನಿಲ್ದಾಣದಿಂದ ಟೇಕ್ ಆಗುವ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ
ಏರ್​ ಇಂಡಿಯಾ ವಿಮಾನ (ಪ್ರಾತಿನಿಧಿಕ ಚಿತ್ರ)Image Credit source: Amarujala.com
Follow us
ರಮೇಶ್ ಬಿ. ಜವಳಗೇರಾ
|

Updated on:May 17, 2024 | 8:09 PM

ಬೆಂಗಳೂರು, (ಮೇ 17): ಏರ್​ ಇಂಡಿಯಾ ವಿಮಾನವೊಂದರಲ್ಲಿ (Air India Flight) ಅಗ್ನಿ ಅವಘಡ ಸಂಭವಿಸಿರುವ ವರದಿಯಾಗಿದೆ. ಇಂದು (ಮೇ 17) ಸಂಜೆ 6 ಗಂಟೆ ಸುಮಾರಿಗೆ ನವದೆಹಲಿಯಿಂದ (New Delhi)  ಬೆಂಗಳೂರಿಗೆ(Bengaluru) ಬರುತ್ತಿದ್ದ ಏರ್​ ಇಂಡಿಯಾ ವಿಮಾನದ ಬೆಂಕಿ(Fire) ಕಾಣಿಸಿಕೊಂಡಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 175 ಪ್ರಯಾಣಿಕರಿದ್ದ ವಿಮಾನ ಟೇಕ್​ ಆಫ್ ಆಗುವ ವೇಳೆ ಹವಾನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಅಲರ್ಟ್ ಮಾಡಿದ್ದು, ಕೂಡಲೇ ಪೈಲೆಟ್ ವಿಮಾನವನ್ನು ದೆಹಲಿ ನಿಲ್ದಾಣದಲ್ಲೇ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಪುಣೆಯಲ್ಲಿ ಅನಾಹುತಕ್ಕೀಡಾಗಿದ್ದ ಏರ್ ಇಂಡಿಯಾ

ಇನ್ನು ಇಂದು (ಮೇ 17) ಬೆಳಗ್ಗೆ ಅಷ್ಟೇ ಪುಣೆಯ ವಿಮಾನ ನಿಲ್ದಾಣದ ರನ್​ವೇಯಲ್ಲಿ ಏರ್​ ಇಂಡಿಯಾ ವಿಮಾನವು ಟಗ್ ಟ್ರ್ಯಾಕ್​ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಂದರ್ಭದಲ್ಲಿ ವಿಮಾನದಲ್ಲಿ ಸುಮಾರು 180 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, ಈ ಘಟನೆಯಲ್ಲಿ ವಿಮಾನದ ಮುಂಭಾಗ ಹಾಗೂ ಭೂಸ್ಪರ್ಶ ಮಾಡುವ ಗೇರ್ ಬಳಿ ಇರುವ ಟೈರ್ ಗೆ ಹಾನಿಯಾಗಿದೆ. ಡಿಕ್ಕಿಯ ಹೊರತಾಗಿಯೂ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:32 pm, Fri, 17 May 24

ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ