ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದು ಪೊಲೀಸ್​ ಪೇದೆ ಎಸ್ಕೇಫ್​

ಬೇಲಿಯೇ ಎದ್ದು ಹೊಲ ಮೆಯ್ದಂತೆ" ಎನ್ನುವ ಗಾದೆ ಮಾತಿನಂತೆ ಖದೀಮರನ್ನ ಹಿಡಿಯುವ ಪೊಲೀಸರೇ ಕಳ್ಳರಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ಠಾಣೆಯ ಅಪರಾಧ ವಿಭಾಗದ ಪೊಲೀಸ್​ ಪೇದೆ ಅನಿಲ್ ಎಂಬಾತ ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ ಅರ್ಧ ಕೆಜಿ ಚಿನ್ನವನ್ನು ಕದ್ದು ಎಸ್ಕೇಫ್​ ಆಗಿದ್ದಾನೆ.

ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದು ಪೊಲೀಸ್​ ಪೇದೆ ಎಸ್ಕೇಫ್​
ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 17, 2024 | 7:17 PM

ಕೋಲಾರ, ಮೇ.17: ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ ಅರ್ಧ ಕೆಜಿ ಚಿನ್ನವನ್ನು ಕ್ರೈಂ ವಿಭಾಗದ ಪೊಲೀಸ್ ಕಾನ್ಸ್​ಟೇಬಲ್​ ​ಕಳವು ಮಾಡಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ಠಾಣೆಯ ಅಪರಾಧ ವಿಭಾಗದ ಪೊಲೀಸ್​ ಪೇದೆ ಅನಿಲ್ ಎಂಬಾತ ​ಈ ಕೃತ್ಯ ಎಸಗಿದ್ದಾನೆ. ಫೆಬ್ರವರಿ 25ರಂದು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಚಿನ್ನದ ವ್ಯಾಪಾರಿ ಗೌತಮ್ ಚಂದ್​ಗೆ ಸೇರಿದ 2 ಕೆಜಿ ಚಿನ್ನ ಕಳ್ಳತನವಾಗಿತ್ತು. ಈ ಪೈಕಿ 1 ಕೆ.ಜಿ 408 ಗ್ರಾಂ ರಿಕವರಿ ಮಾಡಲಾಗಿತ್ತು. ಆದರೆ, ಇದರಲ್ಲಿ 582 ಗ್ರಾಂ ಚಿನ್ನ ನಾಪತ್ತೆಯಾಗಿತ್ತು.

ಹೌದು, 1 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಬದಲು, 1 ಕೋಟಿ 6 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಮಾತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಕಳೆದ 15 ದಿನಗಳಿಂದ ಅಂದರೆ, ಲೋಕಸಭೆ ಚುನಾವಣೆ 2ನೇ ಹಂತದ ಮತದಾನದ ನಂತರ ಕ್ರೈಂ ಕಾನ್ಸ್​ಟೇಬಲ್ ಅನಿಲ್ ನಾಪತ್ತೆಯಾಗಿದ್ದಾನೆ. ಇದೀಗ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಕೆಜಿಎಫ್ DySPಗೆ ಎಸ್​ಪಿ ಶಾಂತರಾಜು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ: ಅಸ್ಸಾಂ ಮೂಲದ ವ್ಯಕ್ತಿಯ ಬಂಧನ

ನಿವೃತ್ತ ನೌಕರನ ಹಣ ದೋಚಿದ ಕಳ್ಳರು

ವಿಜಯಪುರ: ತಾಳಿಕೋಟೆ ಪಟ್ಟಣದ ಯೂನಿಯನ್ ಬ್ಯಾಂಕ್​ ಬಳಿ ನಿವೃತ್ತ ನೌಕರನ ಗಮನ ಬೇರೆಡೆ ಸೆಳೆದು 2.20 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ್ದಾರೆ. ನಿವೃತ್ತ ನೌಕರ ನಾಗಪ್ಪ ಅಮರಪ್ಪ ಕೆಂಭಾವಿ ಹಣ ಕಳೆದುಕೊಂಡವರು. ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಿಕೊಳ್ಳುವಾಗ ನಾಗಪ್ಪರನ್ನು ಹಿಂಬಾಲಿಸಿದ್ದ ಖದೀಮರು, ಬ್ಯಾಂಕ್ ಹೊರಗಡೆ ಬಂದು ನಿಂತಾಗ ಗಮನ ಬೇರೆಡೆ ಸೆಳೆದು ಹಣ ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದು, ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Fri, 17 May 24

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್