‘ಮದುವೆ ಯಾರು ಮಿಸ್ ಮಾಡಿಲ್ಲ’, ಅತಿಥಿಗಳನ್ನು ನೋಡುತ್ತಾ ನಿಂತ ಅನಂತ್ ಅಂಬಾನಿಯ ಮುದ್ದು ಶ್ವಾನ
ಉದ್ಯಮಿ ಮುಕೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಇದರ ನಡುವೆ ಒಂದು ವಿಡಿಯೋ ವೈರಲ್ ಆಗಿದೆ. ಅದು ಅನಂತ್ ಅಂಬಾನಿ ಅವರ ಪ್ರೀತಿಯ ಶ್ವಾನದ ವಿಡಿಯೋ, ಅದು ಮದುವೆ ಮಂಟಪದಲ್ಲಿ ನಿಂತು ಮಾಡಿದ್ದೇನು? ನೋಡಿ
ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈ ಅದ್ಧೂರಿ ಸಮಾರಂಭವನ್ನು ನಡೆಸಲಾಯಿತು. ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಉದ್ಯಮದ ಅನೇಕ ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೀಗ ಈ ಮದುವೆ ವಿಡಿಯೋವೊಂದು ವೈರಲ್ ಆಗಿದೆ. ಅನಂತ್ ಅಂಬಾನಿ ಪ್ರೀತಿಯ ಶ್ವಾನ ಅವರ ಮದುವೆಯಲ್ಲಿ ಗಮನ ಸೆಳೆದಿತ್ತು. ಇದೀಗ ವಿಡಿಯೋ ಅನೇಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶ್ವಾನಕ್ಕೂ ದುಬಾರಿ ಡ್ರೆಸ್ನ್ನು ಕೂಡ ಹಾಕಲಾಗಿತ್ತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ ಸಮಯದಲ್ಲಿ ಈ ಶ್ವಾನ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು. ಈ ವಿಡಿಯೋ ಶ್ವಾನವೂ ಮದುವೆಗೆ ಬಂದಿರುವ ಅತಿಥಿಗಳು ನೋಡತ್ತಾ ನಿಂತಿತ್ತು. ಎಲ್ಲರೂ ಮದುವೆಗೆ ಬಂದಿದ್ದರ ಎಂಬಂತೆ ಎಲ್ಲರೂ ನೋಡಿದೆ. ಇನ್ನು ಅಂಬಾನಿ ಕುಟುಂಬದವರು ಈ ಶ್ವಾನವನ್ನು ಕೂಡ ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ.
Published On - 10:19 am, Sat, 13 July 24