ಕನ್ನಡ ಚಿತ್ರರಂಗಕ್ಕೆ ನಾಗದೇವರ ಅನುಗ್ರಹದ ಅಗತ್ಯ ಇದೆಯಾ? ಕರ್ನಾಟಕದ ಖ್ಯಾತ ಜ್ಯೋತಿಷಿಗಳಿಂದ ವಿಶ್ಲೇಷಣೆ

ಕನ್ನಡ ಚಿತ್ರರಂಗಕ್ಕೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಿವೆ. ಕಳೆದ ವರ್ಷ ಅದರ ಹಿಂದಿನ ವರ್ಷ ಅದ್ಭುತ ಪ್ರಗತಿ ಕಂಡಿದ್ದ ಚಿತ್ರರಂಗ ಯಾಕೋ ಈ ವರ್ಷ ಮಂಕಾದಂತಾಗಿದೆ. ಕಹಿ ಘಟನೆಗಳು ಒಂದರ ಹಿಂದೊಂದು ನಡೆಯುತ್ತಿವೆ. ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಸಿದ್ಧ ಜ್ಯೋತಿಷಿಗಳ ವಿಶ್ಲೇಷಣೆ ಇಲ್ಲಿದೆ.

ಕನ್ನಡ ಚಿತ್ರರಂಗಕ್ಕೆ ನಾಗದೇವರ ಅನುಗ್ರಹದ ಅಗತ್ಯ ಇದೆಯಾ? ಕರ್ನಾಟಕದ ಖ್ಯಾತ ಜ್ಯೋತಿಷಿಗಳಿಂದ ವಿಶ್ಲೇಷಣೆ
Follow us
ಸ್ವಾತಿ ಎನ್​ಕೆ
| Updated By: ಮಂಜುನಾಥ ಸಿ.

Updated on: Jul 13, 2024 | 7:10 PM

ಕನ್ನಡದಲ್ಲಿ ತಯಾರಾಗುವ ಚಲನಚಿತ್ರಗಳು ಹಾಗೂ ಆ ಪೈಕಿ ಯಶಸ್ಸು ಕಾಣುವ ಪ್ರಮಾಣವನ್ನು ಗಮನಿಸಿದರೆ ಆತಂಕವಾಗುತ್ತದೆ. ಕರ್ನಾಟಕದಲ್ಲಿರುವ ಜನಸಂಖ್ಯೆಯ ಭಾಷಾ ವೈವಿಧ್ಯ ಹಾಗೂ ಇಲ್ಲಿನ ಜನರ ಭಾಷಾಜ್ಞಾನ, ಆಸಕ್ತಿಗಳ ಕಾರಣಗಳಿಗೆ ನಾನಾ ಭಾಷೆಯ ಸಿನಿಮಾಗಳ ಬಗ್ಗೆ ಒಲವು ಇದೆ ಅಂತಲೂ ಅನಿಸುವುದು ಸಹಜ. ಇಷ್ಟೇ ಆಗಿದ್ದರೆ ಇದು ಕೇವಲ ವ್ಯಾಪಾರ- ವ್ಯವಹಾರದ ದೃಷ್ಟಿಕೋನವೊಂದು ದಕ್ಕಿಹೋಗಿ, ಅದರ ಹಿನ್ನೆಲೆಯಿಂದಲೇ ಆಲೋಚಿಸಬೇಕಿತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ ಅಕಾಲಿಕ ಸಾವು, ಪರಸ್ಪರ ದ್ವೇಷ ಅಪರಾಧಗಳು ಹೆಚ್ಚಾಗುತ್ತಿವೆ. ನಿಜಕ್ಕೂ ಚಿತ್ರರಂಗಕ್ಕೆ ಒಂದಿಷ್ಟು ಆಮ್ಲಜನಕ ಆಗಬಲ್ಲ ನಟರಿಗೆ ಒಂದಲ್ಲಾ ಒಂದು ಬಗೆಯ ಬಂಧನ ಆಗುತ್ತಿದೆ. ಅದು ಜೈಲು ಅಂತಲೇ ಅಂದುಕೊಳ್ಳಬೇಕಿಲ್ಲ. ಚಿತ್ರೀಕರಣದ ವೇಳೆ ಅಪಘಾತ- ಗಾಯಗಳಾಗಿ ತಿಂಗಳುಗಟ್ಟಲೆ ಮನೆಯಲ್ಲಿ ಇರುವಂತೆ ಆಗುವುದು ಸಹ ಬಂಧನ ಹಾಗೂ ಸಂಬಂಧಪಟ್ಟ ಚಿತ್ರದ ನಿರ್ಮಾಪಕರಿಗೆ ನಷ್ಟವೇ. ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣದ ಚಿತ್ರರಂಗಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಚಿತ್ರರಂಗದ ಸ್ಥಿತಿ ಚೆನ್ನಾಗಿಲ್ಲ. ಇದಕ್ಕೆ ದೇವತಾ ಆರಾಧನೆ ದೃಷ್ಟಿಯಿಂದ ರಕ್ಷಣೆ, ಪರಿಹಾರ ಇದೆಯಾ ಎಂಬುದರ ವಿಶ್ಲೇಷಣೆಯನ್ನೇ ಈ ಲೇಖನದಲ್ಲಿ ಮಾಡಲಾಗುತ್ತಿದೆ.

ನಟ, ನಟೆ, ನಿರ್ಮಾಪಕ, ನಿರ್ದೇಶಕ ಹೀಗೆ ವೈಯಕ್ತಿಕ ವ್ಯಕ್ತಿಗಳ ಜಾತಕದಲ್ಲಿ ಬಲ ಇದ್ದರೂ ಒಂದು ಸಂಸ್ಥೆಯಾಗಿ ಚಿತ್ರೋದ್ಯಮಕ್ಕೇ ದೈವ ಬಲ ಇಲ್ಲದಿದ್ದರೆ ಏನು ಮಾಡುವುದಕ್ಕೆ ಸಾಧ್ಯ? ಕನ್ನಡ ಚಿತ್ರೋದ್ಯಮಕ್ಕೆ ದೈವಬಲ ಇಲ್ಲ ಎಂಬುದನ್ನು ಹೇಳಬೇಕಾಗುತ್ತದೆ ಹಾಗೂ ಅದಕ್ಕೆ ಪರಿಹಾರವನ್ನೂ ಸೂಚಿಸಬೇಕು.

ಒಂದೊಂದು ವೃತ್ತಿಗೆ ಒಬ್ಬೊಬ್ಬ ದೇವರು

ಕಾಲಾನುಕಾಲದಿಂದ ಆಯಾ ವೃತ್ತಿ- ಉದ್ಯೋಗದವರು ಕೆಲವು ನಿರ್ದಿಷ್ಟ ಸ್ವರೂಪದ- ಸ್ವಭಾವದ- ಅಂಶದ ದೇವಾನುದೇವತೆಗಳ ಆರಾಧನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಯೋಧರು ಮಾರಿಯಮ್ಮ ದೇವಿ, ಆಧ್ಯಾತ್ಮಿಕ ವಿಚಾರಕ್ಕೆ ವಿಷ್ಣು, ಸಂಸಾರದಲ್ಲಿ ಅನ್ಯೋನ್ಯತೆ, ಸಾಮರಸ್ಯ, ಸಂತೋಷ- ನೆಮ್ಮದಿಗಳಿಗಾಗಿ ಪಾರ್ವತಿ- ಪರಮೇಶ್ವರರ ಆರಾಧನೆ, ಸೈನ್ಯಕ್ಕಾಗಿ ಸುಬ್ರಹ್ಮಣ್ಯ, ನಿರ್ವಿಘ್ನವಾಗಿ ಕೆಲಸ- ಕಾರ್ಯಗಳು ಆಗುವುದಕ್ಕಾಗಿ ಗಣಪತಿಯ ಆರಾಧನೆ, ಕೋಶ (ಸಂಪತ್ತು) ವೃದ್ಧಿಗಾಗಿ ತಿರುಪತಿ ವೆಂಕಟೇಶ್ವರನ ಆರಾಧನೆ ಮಾಡುತ್ತಾ ಬರಲಾಗುತ್ತಿದೆ. ಇವೆಲ್ಲವೂ ಆಯಾ ಕೆಲಸ- ಉದ್ದೇಶದಲ್ಲಿ ಯಶಸ್ಸು ಸಿಗಬೇಕು ಹಾಗೂ ಜಯ ಸಾಧಿಸಬೇಕು ಎಂಬ ಕಾರಣಕ್ಕೆ ಅಂತಲೇ ಮಾಡಿಕೊಂಡು ಬರಲಾಗುತ್ತಿದೆ.

ಅದೇ ರೀತಿ ಛಾಯಾಚಿತ್ರ ಕಲೆಯಾದ ಸಿನಿಮಾ ರಂಗಕ್ಕೆ ನಾಗದೇವರು ಅಭಿಮಾನ ಆಗುತ್ತಾರೆ. ಆ ದೇವರ ಅನುಗ್ರಹ ಯಾವಾಗ ಕಡಿಮೆ ಆಗುತ್ತದೋ ಆಗ ಆ ವೃತ್ತಿಯಲ್ಲಿ ಸಮಸ್ಯೆಗಳು, ಸಂಕಷ್ಟಗಳು ಎದುರಾಗುತ್ತವೆ. ನಾವು ಯಾವ ಕಾಯಕ ಮಾಡುತ್ತೇವೋ ಅದಕ್ಕೆ ತಕ್ಕಂತೆ ದೇವತಾ ಆರಾಧನೆಯನ್ನು ಸಹ ಮಾಡಬೇಕು.

ಆ ಮಹಾವಿಷ್ಣುವಿನ ಸಂಕರ್ಷಣಾ ಶಕ್ತಿಯೇ ನಾಗದೇವರು. ನಮ್ಮ ಕನ್ನಡ ನಾಡಿಗೆ ಕುಕ್ಕೆ ಸುಬ್ರಹ್ಮಣ್ಯ, ತಮಿಳುನಾಡು- ಆಂಧ್ರ- ತೆಲಂಗಾಣಕ್ಕೆ ಪಳನಿ ಸುಬ್ರಹ್ಮಣ್ಯ, ಇನ್ನು ಕೇರಳಕ್ಕೆ ಅನಂತಪದ್ಮನಾಭ ಆರಾಧನೆ ದೇವರಾಗುತ್ತಾರೆ. ಇಬ್ಬರ ನಡುವೆ ಜಗಳ- ಹೊಡೆದಾಟ ಆಯಿತು ಅಂದರೆ, ಬ್ಯಾಂಕಿಗೋ ಪೋಸ್ಟ್ ಆಫೀಸಿಗೋ ಹೋಗಿ ದೂರು ನೀಡುತ್ತೇವೆಯೇ? ಅದಕ್ಕೆ ಪೊಲೀಸ್ ಠಾಣೆಗೆ ಹೋಗಬೇಕು. ಅದೇ ರೀತಿ ಸಿನಿಮಾ ರಂಗಕ್ಕೆ ನಾಗದೇವರ ಅನುಗ್ರಹ ಬೇಕೇಬೇಕು.

ಸುಬ್ರಹ್ಮಣ್ಯನ ಶಕ್ತಿ ಜಗತ್ತಿಗೇ ಗೊತ್ತಿದೆ

ಒಂದು ವಿಚಾರವನ್ನು ತಿಳಿಸುವಾಗ ಆ ದೇವರ ಪ್ರೇರಣೆ ಅನ್ನುವುದೊಂದು ಇರುತ್ತದೆ. ಈ ಲೇಖನಕ್ಕೂ ಆ ನಾಗದೇವರದೇ ಪ್ರೇರಣೆ. ಏಕೆ ಈ ಮಾತು ಹೇಳಬೇಕಾಯಿತು ಅಂದರೆ, ನಾಗದೇವರನ್ನು ನನ್ನಂಥ ಯಃಕಶ್ಚಿತ್ ಮನುಷ್ಯರು ಪ್ರಚಾರ ಮಾಡಬೇಕು ಎಂದೇನಿಲ್ಲ. ಕುಕ್ಕೆ ಸುಬ್ರಹ್ಮಣ್ಯನ ಶಕ್ತಿ ಇಡೀ ಜಗತ್ತಿಗೆ ಗೊತ್ತಿದೆ. ಕೆಲವು ಸಲ ಏನಾಗುತ್ತದೆ ಅಂದರೆ, ಮನೆಯ ಹಿತ್ತಲಲ್ಲಿ ಬೆಳೆದ ಸಂಜೀವಿನಿ ಮೂಲಿಕೆಯ ಬೆಲೆ ಆ ಮನೆಯಲ್ಲಿಯೇ ಇರುವವರಿಗೆ ಗೊತ್ತಾಗುವುದಿಲ್ಲ. ಆಗ ಈ ರೀತಿಯ ಮಾರ್ಗದಲ್ಲಿ ಎಚ್ಚರಿಸಬೇಕಾಗುತ್ತದೆ, ನೆನಪಿಸಬೇಕಾಗುತ್ತದೆ.

ನಟ- ನಟಿಯರಾದಿಯಾಗಿ ಸಿನಿಮಾವೊಂದರಲ್ಲಿ ಭಾಗ ಆಗುವ ಪ್ರತಿ ವ್ಯಕ್ತಿಯೂ ಆಯಾ ಕೆಲಸ ಮಾಡುವ ವೃತ್ತಿಪರರೇ. ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುವ ಏಕಾಗ್ರತೆ, ಶ್ರದ್ಧೆ ಹಾಗೂ ಇವೆಲ್ಲದರ ಜತೆಗೆ ಕೆಲಸ ಅತ್ಯುತ್ತಮವಾಗಿ ಬರುವುದಕ್ಕೆ ದೇವರ ಅನುಗ್ರಹ ಮುಖ್ಯವಾಗುತ್ತದೆ. ಯಾವುದೇ ವೃತ್ತಿಯಲ್ಲಿ ಇರುವವರು ವೃತ್ತಿಪರರು ಮಾತ್ರ. ಮಾಡುವ ಕೆಲಸಕ್ಕೆ ಸಂಭಾವನೆ, ಸಂಬಳ, ಗೌರವ- ಧನ ದೊರೆಯುತ್ತದೆ. ಆದರೆ ಕೆಲವು ವೃತ್ತಿಯಲ್ಲಿ ಇರುವವರಿಗೆ ಸೆಲೆಬ್ರಿಟಿಗಳು ಎಂಬ ಕಿರೀಟವೂ ದಕ್ಕುತ್ತದೆ. ಅದು ಅವರ ಪಾಲಿನ ಅದೃಷ್ಟ. ಆದರೆ ಆ ಕಿರೀಟವೂ ದೇವರ ಎದುರು ತಲೆ ಬಾಗಲಿಕ್ಕೆ ಸಾಧ್ಯವಾಗದಷ್ಟು ಭಾರ ಆಗಬಾರದು. ಇದರಿಂದ ವೈಯಕ್ತಿಕವಾಗಿಯೂ ನಷ್ಟ ಮತ್ತು ಆ ರಂಗಕ್ಕೆ ಆಗುವ ಅತಿದೊಡ್ಡ ನಷ್ಟ.

ವರ್ಷಕ್ಕೊಮ್ಮೆ ನಾಗದೇವರ ಆರಾಧನೆ

ನಿತ್ಯವೂ ಬಣ್ಣ ಹಚ್ಚಬೇಕಾದ ಕಲಾವಿದರು, ಆ ಕೆಲಸಕ್ಕೆ ಪೂರಕವಾಗಿ ಊಟ- ತಿಂಡಿ ವ್ಯವಸ್ಥೆ ಮಾಡುವುದರಿಂದ ಹಿಡಿದು, ಮೇಕಪ್, ಲೈಟಿಂಗ್ ವ್ಯವಸ್ಥೆ, ಸಾಹಸ, ನೃತ್ಯ, ವಸ್ತ್ರಾಲಂಕಾರ ಹೀಗೆ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರು, ಇವೆಲ್ಲಕ್ಕೂ ಹಣಕಾಸು ವ್ಯವಸ್ಥೆ ಮಾಡುವವರು, ನಿರ್ದೇಶನ ಮಾಡುವವರು, ಅವರ ಸಹಾಯಕರು ಹಗಲು- ರಾತ್ರಿ ಎನ್ನದೆ ಕಷ್ಟ ಪಡುತ್ತಲೇ ಇರುತ್ತಾರೆ. ಇವರೆಲ್ಲರಿಗೂ ಆರೋಗ್ಯ ಚೆನ್ನಾಗಿರಬೇಕು, ಮನಸ್ಥಿತಿ ಸರಿಯಿರಬೇಕು. ಇದಕ್ಕಾಗಿ ನಾಗದೇವರ ಆಶೀರ್ವಾದ ಬೇಕು. ಇದರಿಂದ ವೃತ್ತಿಯಲ್ಲಿ ಇರುವವರಿಗೆ ಎಲ್ಲ ರೀತಿಯಿಂದಲೂ ಉತ್ಸಾಹ, ಆಲೋಚನಾ ಶಕ್ತಿ, ಆರೋಗ್ಯ, ನೆಮ್ಮದಿ ಸಿಗುತ್ತದೆ. ಅದರ ಫಲಿತಾಂಶ ತೆರೆಯ ಮೇಲೆ ಕಂಡರೆ ಸಹಜವಾಗಿ ಜನರೂ ಬಂದು ಆಶೀರ್ವದಿಸುತ್ತಾರೆ.

ನನ್ನಂಥ ಪಾಮರನಿಗೆ ಹೊಳೆದಂಥ ಆಲೋಚನೆಯೊಂದು ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಡೀ ಚಿತ್ರರಂಗ ಒಟ್ಟಾಗಿ, ವರ್ಷಕ್ಕೆ ಒಮ್ಮೆ ನಾಗಾರಾಧನೆಯನ್ನು ಆಯೋಜಿಸಬಹುದು. ಇನ್ನು ಆಯಾ ಚಿತ್ರಗಳ ಆರಂಭದ ವೇಳೆಯಲ್ಲಿ ದೇವತಾರಾಧನೆ ಮಾಡುವಾಗ, ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದವನ್ನೂ ಪಡೆದುಕೊಳ್ಳುವ ಪರಿಪಾಠ ಶುರು ಮಾಡಬಹುದು. ಇನ್ನು ಆ ದೇವರು ಬಂದು, ಎಲ್ಲ ಸಿನಿಮಾಗಳನ್ನು ಗೆಲ್ಲಿಸಿ ಬಿಡುತ್ತಾನಾ ಎಂದು ಪ್ರಶ್ನೆ ಮಾಡುವವರಿಗೆ ಉತ್ತರ ಏನು ಗೊತ್ತಾ? ಇಲ್ಲ ಮನುಷ್ಯರಿಂದಲೇ ಎಲ್ಲ ಸಿನಿಮಾ ಗೆದ್ದು ಬಿಟ್ಟಿದೆ, ಶ್ರಮ ಹಾಕಿ, ಬುದ್ಧಿವಂತಿಕೆ ಹಾಕಿ ಮಾಡಿದ ಸಿನಿಮಾ ಅಮೋಘವಾಗಿ ಪ್ರದರ್ಶನ ಕಂಡಿದೆ ಎಂಬುದನ್ನು ಶೇಕಡಾ ನೂರರಷ್ಟು ಪ್ರಕರಣಗಳಲ್ಲಿ ನೀವೂ ಸಾಬೀತು ಪಡಿಸಿ. ಆಗ ನಿಮ್ಮ ಮಾತನ್ನು ನಾವು ಕೇಳಿಸಿಕೊಳ್ಳುತ್ತೇವೆ, ಪಾಲಿಸುತ್ತೇವೆ.

ಇಲ್ಲ, ದೇವರ ಅನುಗ್ರಹವೂ ಬೇಕು ಎಂದು ಭಾವಿಸುವವರು ಶೇಕಡಾ ನೂರರಷ್ಟು ಆ ನಾಗದೇವರಿಗೆ ಶರಣಾಗತಿ ಆದಲ್ಲಿ ಅದರ ಫಲಿತಾಂಶವನ್ನು ಖಂಡಿತಾ ಕಾಣುವುದಕ್ಕೆ ಸಾಧ್ಯ. ಅಂದ ಹಾಗೆ, ಇದನ್ನು ಹೇಳುವುದಕ್ಕೆ ಶಕ್ತಿ, ಪ್ರೇರಣೆ, ಬುದ್ಧಿಯನ್ನು ನೀಡುವವನು ಆ ಭಗವಂತನೇ ಎಂದು ನಂಬಿ, ಹೇಳುತ್ತಿದ್ದೇನೆ.

-ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವು ಲೇಖಕರದೇ ಆಗಿದೆ. ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲಿ ಅಥವಾ ಅದರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ. -ಸಂಪಾದಕರು)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ